ಟಿ20 ವಿಶ್ವಕಪ್ ಹತ್ತಿರವಾದಷ್ಟೂ ಟೀಮ್ ಇಂಡಿಯಾಕ್ಕೆ ತಲೆನೋವುಗಳು ಹೆಚ್ಚಾಗ್ತಿವೆ. ಕೆಲ ಆಟಗಾರರ ಅಸ್ಥಿರ ಪ್ರದರ್ಶನದಿಂದ ಚಿಂತೆಗೀಡಾಗಿರುವ ಬಿಸಿಸಿಐ ಹಾಗೂ ಮ್ಯಾನೇಜ್ಮೆಂಟ್ಗೆ ಮತ್ತೊಂದು ಹೊಸ ತಲೆ ನೋವು ಆರಂಭವಾಗಿದೆ. ಇದು ಮಹತ್ವದ ಟೂರ್ನಿಯಲ್ಲಿ ಭಾರತಕ್ಕೂ ಹಿನ್ನಡೆಯಾಗಲಿದೆ.
ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಕ್ಕೆ ಶಾಕ್ ಮೇಲೆ ಶಾಕ್ಗಳು ಎದುರಾಗ್ತಿವೆ. ಈಗಾಗಲೇ ಕೆಲ ಆಟಗಾರರ ಅಸ್ಥಿರ ಪ್ರದರ್ಶನ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಬಿಗ್ಬಾಸ್ಗಳನ್ನ ಚಿಂತೆಗೆ ದೂಡಿದೆ. ಅದರ ಬೆನ್ನಲ್ಲೇ ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಹೊಸ ತಲೆನೋವಾಗಿ ಮಾರ್ಪಟಿದ್ದಾರೆ.

ಮತ್ತೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ ವರುಣ್..!
2ನೇ ಹಂತದ ಐಪಿಎಲ್‌ನಲ್ಲಿ ಅರಬ್ಬರ ನಾಡಲ್ಲಿ ಸ್ಪಿನ್ ಮೋಡಿ ಮಾಡ್ತಿರೋ ವರುಣ್ ಚಕ್ರವರ್ತಿಯನ್ನ ವಿಶ್ವಕಪ್ನಲ್ಲಿ ಭಾರತದ ಕೀ ಪ್ಲೇಯರ್ ಎಂದೇ ಹೇಳಲಾಗಿತ್ತು. ಆದ್ರೆ, ಇದೀಗ ಈ ವರುಣ್ ಚಕ್ರವರ್ತಿ ಇಂಜುರಿಗೆ ತುತ್ತಾಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಕೆಕೆಆರ್ ಕ್ಯಾಂಪ್ನಿಂದ ಹೊರ ಬಿದ್ದಿದೆ. ಕಳೆದ ಪಂದ್ಯದಲ್ಲೇ ಇದರ ಜೊತೆಗೆ ಇಂಜೆಕ್ಷನ್ ತೆಗೆದುಕೊಂಡು ಕಣಕ್ಕಿಳಿದು ಬೌಲಿಂಗ್ ಮಾಡಿದ್ದಾರೆ ಅನ್ನೋದು ಇನ್ನೂ ಆಘಾತ ಮೂಡಿಸಿದೆ. ಈ ಹಿಂದೆ ಸಾಕಷ್ಟು ಬಾರಿ ಮೊಣಕಾಲಿನ ಇಂಜುರಿಗೆ ತುತ್ತಾಗಿದ್ದ ವರುಣ್, ಇದೀಗ ಮತ್ತದೇ ಸಮಸ್ಯೆಗೆ ತುತ್ತಾಗಿದ್ದಾರೆ. ಸದ್ಯಕ್ಕೆ ದೊಡ್ಡ ಪ್ರಮಾಣದ ಗಾಯ ಕಾಡದಿದ್ದರೂ, ಟಿ20 ವಿಶ್ವಕಪ್ ವೇಳೆಗೆ ಚಕ್ರವರ್ತಿ ಫುಲ್ಫಿಟ್ ಇರ್ತಾರಾ ಎಂಬ ಚಿಂತೆ ಇದೀಗ ಬಿಸಿಸಿಐಗೆ ಕಾಡ್ತಿದೆ.
ಸಂಪೂರ್ಣ ಫಿಟ್ ಇಲ್ಲದಿದ್ದರೆ ವಿಶ್ವಕಪ್ನಿಂದ ಔಟ್..?
ಈಗಾಗಲೇ ಎರಡು ಬಾರಿ ಟೀಮ್ ಇಂಡಿಯಾಗೆ ಆಯ್ಕೆಯಾಗಿ ಫಿಟ್ನೆಸ್ ಸಮಸ್ಯೆಯಿಂದ ಔಟ್ ಆಗಿರುವ ವರುಣ್ ಚಕ್ರವರ್ತಿ, ಈ ಬಾರಿಯೂ ತಂಡದಿಂದ ಔಟ್ ಆಗ್ತಾರಾ ಅನ್ನೋ ಪ್ರಶ್ನೆ ಹುಟ್ಟಿದೆ. ಯಾಕಂದ್ರೆ, ಫಿಟ್ನೆಸ್ ವಿಚಾರದಲ್ಲಿ ರಾಜೀ ಮಾಡಿಕೊಳ್ಳದ ಬಿಸಿಸಿಐ, ಸ್ಟಾರ್ ಆಟಗಾರರನ್ನೇ ಕೈ ಬಿಡೋಕೆ ಹಿಂದೆ ಮುಂದೆ ನೋಡಲ್ಲ. ಹೀಗಾಗಿ ಸಂಪೂರ್ಣ ಫಿಟ್ ಇಲ್ಲದಿದ್ದರೇ, ವಿಶ್ವಕಪ್ ತಂಡದಿಂದಲೂ ವರುಣ್ ಔಟ್ ಆಗೋದು ಗ್ಯಾರಂಟಿ. ಅಕ್ಟೋಬರ್ 10ರವರೆಗೆ ತಂಡದಲ್ಲಿನ ಬದಲಾವಣೆಗೆ ಅವಕಾಶವಿದ್ದು, ಈ ವೇಳೆ ಚಹಲ್ಗೆ ಸ್ಥಾನ ನೀಡುವ ನಿರ್ಧಾರ ತೆಗೆದುಕೊಂಡರೂ ಅಚ್ಚರಿ ಇಲ್ಲ.

ಸದ್ಯ ಐಪಿಎಲ್‌ನಲ್ಲಿ ವರುಣ್ ಚಕ್ರವರ್ತಿ ನೀಡ್ತಾ ಇದ್ದ ನೀಡುತ್ತಿರುವ ಪ್ರದರ್ಶನ ಟೀಮ್ ಇಂಡಿಯಾ ಪಾಳೆಯದಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದ್ರೀಗ ಈ ಎಲ್ಲಾ ನಿರೀಕ್ಷೆಯನ್ನೂ ಇಂಜುರಿ ಹುಸಿಗೊಳಿಸುತ್ತಾ ಎಂಬ ಅನುಮಾನ ಹುಟ್ಟಿದೆ. ಒಂದೆಡೆ ವರುಣ್ ಕರಿಯರ್ ಇಂಜುರಿ ಮುಳ್ಳಾಗುತ್ತಾ ಅನ್ನೋದರ ಜೊತೆಗೆ ಮಿಸ್ಟರಿ ಸ್ಪಿನ್ನರ್ ಅಲಭ್ಯತೆ ಭಾರತಕ್ಕೆ ಎಷ್ಟರ ಮಟ್ಟಿಗೆ ಹಿನ್ನಡೆಯಾಗಬಹುದು ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಜೊತೆಗೆ ಇಂಜುರಿಗೆ ತುತ್ತಾದ ಆಟಗಾರನಿಗೆ ಇಂಜೆಕ್ಷನ್ ನೀಡಿ ಆಡಿಸೋ ನಿರ್ಧಾರ ತೆಗೆದುಕೊಂಡ ಫ್ರಾಂಚೈಸಿಯ ನಿರ್ಧಾರ ಸರೀನಾ.? ಅನ್ನೋ ಚರ್ಚೆಯೂ ನಡೀತಿದೆ.