Breaking News

ಹಾನಗಲ್‌, ಸಿಂದಗಿ ಉಪ ಚುನಾವಣ: ಶ್ರೀನಿವಾಸ ಮಾನೆ, ಮನಗೂಳಿಗೆ ಕಾಂಗ್ರೆಸ್‌ ಟಿಕೆಟ್

Spread the love

ನವದೆಹಲಿ: ರಾಜ್ಯದ ಹಾನಗಲ್‌ ಮತ್ತು ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ಅಕ್ಟೋಬರ್‌ 30ರಂದು ನಡೆಯಲಿರುವ ಉಪ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಮಂಗಳವಾರ ಸಂಜೆ ಘೋಷಿಸಿದೆ.

ಹಾನಗಲ್‌ನಿಂದ ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂದಗಿಯಿಂದ ಅಶೋಕ ಮನಗೂಳಿ ಅವರಿಗೆ ಟಿಕೆಟ್‌ ನೀಡಲಾಗಿದೆ.

ಸಿಂದಗಿ ಕ್ಷೇತ್ರದ ಜೆಡಿಎಸ್‌ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ ಮನಗೂಳಿ ಅವರೇ ಪಕ್ಷದ ಅಭ್ಯರ್ಥಿ ಎಂದು ಈ ಮೊದಲೇ ಮೌಖಿಕವಾಗಿ ಘೋಷಿಸಲಾಗಿತ್ತಾದರೂ, ಇದೀಗ ಅಧಿಕೃತವಾಗಿ ಟಿಕೆಟ್‌ ನೀಡಲಾಗಿದೆ.

2018ರ ಚುನಾವಣೆಯಲ್ಲಿ ಹಾನಗಲ್‌ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಶ್ರೀನಿವಾಸ ಮಾನೆ ಹಾಗೂ ಕ್ಷೇತ್ರವನ್ನು ಮೊದಲು ಪ್ರತಿನಿಧಿಸಿದ್ದ ಮನೋಹರ ತಹಶೀಲ್ದಾರ್‌ ಅವರ ನಡುವೆ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಅಂತಿಮವಾಗಿ ಪಕ್ಷದ ವರಿಷ್ಠರು ಮಾನೆ ಅವರಿಗೇ ಟಿಕೆಟ್‌ ನೀಡಿ ಆದೇಶ ಹೊರೆಡಿಸಿದ್ದಾರೆ.


Spread the love

About Laxminews 24x7

Check Also

ಲೋಕಾ ಇನ್ಸ್​ಪೆಕ್ಟರ್​ ಸಜೀವ ದಹನ

Spread the loveಧಾರವಾಡ: ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದು ಕಾರು ಧಗಧಗ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಹಾವೇರಿ ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ