ರಾಮನಗರ: ಮೂರು ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ ಹೆಚ್.ಡಿ.ಕೋಟೆಯ ಕುರುಬ ಸಮುದಾಯದ ಜೆಡಿಎಸ್ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರಿಗೆ ಕುರಿಗಳ ಉಡುಗೊರೆ ನೀಡಿದ್ದಾರೆ.
7 ನೇ ದಿನದ ಜೆಡಿಎಸ್ ಕಾರ್ಯಾಗಾರದಲ್ಲಿ ದೇವೇಗೌಡರು ಭಾಗಿಯಾದ ವೇಳೆ ರಾಮನಗರ ಜಿಲ್ಲೆಯ ಬಿಡದಿಯ ತೋಟದ ಮನೆಯಲ್ಲಿ ಕಪ್ಪು ಕಂಬಳಿ ಹೊದಿಸಿದ 11 ಕುರಿಗಳನ್ನು ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ.ಕುಮಾರಸ್ವಾಮಿಗೆ ಉಡುಗೊರೆಯಾಗಿ ನೀಡಿದ್ದಾರೆ. ನೀಡಿದ ಕಾರ್ಯಕರ್ತರು
ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರಾಗಿದ್ದ ಇವರು ಮುಖಂಡ ಕ್ಱಷ್ಣನಾಯಕ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದರು.
Laxmi News 24×7