Breaking News

ರಾಜ್ಯ ಉಪಚುನಾವಣೆ; ಹಾನಗಲ್​​​, ಸಿಂದಗಿಯತ್ತ ತಲೆ ಹಾಕದೆ ಶೆಟ್ಟರ್​​​ ದೂರ ಉಳಿದಿದ್ಯಾಕೆ?

Spread the love

ಧಾರವಾಡ: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಾವು ಜೋರಾಗಿದೆ. ಹಾನಗಲ್​​ ಮತ್ತು ಸಿಂದಗಿ ವಿಧಾನಸಭಾ ಉಪಚುನಾವಣೆ ಗೆಲ್ಲಲು ಬಿಜೆಪಿ ಭಾರೀ ಸರ್ಕಸ್​​ ನಡೆಸುತ್ತಿದ್ದಾರೆ. ಹೀಗಿರುವಾಗಲೇ ತೆರೆಮರೆಯಲ್ಲೇ ಉಪಚುನಾವಣೆಯಿಂದ ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಸಿಎಂ ಜಗದೀಶ್​​ ಶೆಟ್ಟರ್​​ಗೆ ರಾಜ್ಯ ಬಿಜೆಪಿ ಯಾವುದೇ ಜವಾಬ್ದಾರಿ ನೀಡಿಲ್ಲ. ಜಗದೀಶ್​​​ ಶೆಟ್ಟರ್​​ ತವರು ಜಿಲ್ಲೆ ಧಾರವಾಡ ಪಕ್ಕದ ಜಿಲ್ಲೆಗಳಲ್ಲೇ ಉಪಚುನಾವಣೆ ಎದುರಾಗುತ್ತಿದೆ. ಹೀಗಿದ್ದರೂ ಶೆಟ್ಟರ್​​​​ಗೆ ಬಿಜೆಪಿ ಯಾವುದೇ ಜವಾಬ್ದಾರಿ ನೀಡಿಲ್ಲ. ಶೆಟ್ಟರ್​​ ಕೂಡ ಇದುವರೆಗೂ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಈ ಅಚ್ಚರಿ ನಡೆಯೂ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ.

ಕಳೆದ ಬೆಳಗಾವಿ ಲೋಕಸಭಾ ಉಪಚುನಾವಣೆ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು ಜಗದೀಶ್​ ಶೆಟ್ಟರ್​​. ಆದರೀಗ, ಎರಡು ಕ್ಷೇತ್ರಗಳ ಉಪಚುನಾವಣೆಗೆ ತಲೆ ಹಾಕದೆ ಅಚ್ಚರಿ ಮೂಡಿಸಿದ್ದಾರೆ.


Spread the love

About Laxminews 24x7

Check Also

ಚಾರ್ಮಾಡಿ ಘಾಟ್‌ನಲ್ಲಿ ಬ್ಯಾರಿಕೇಡ್ ಬದಲಿಗೆ ಹೊಸ ಭೂಮ್ ಬ್ಯಾರಿಯರ್ ವ್ಯವಸ್ಥೆ: ಎಸ್​ಪಿ ಅಮಟೆ

Spread the loveಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ದಾರಿಯಾಗಿರುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ