Breaking News

“ಕೊರೋನಾ ಬಂದ ಮೇಲೆ ಸಿದ್ದರಾಮಯ್ಯನವರ ತಲೆ ಕೆಟ್ಟಿರಬಹುದು” : ಸಚಿವ ಎಸ್.ಟಿ.ಎಸ್

Spread the love

ಮೈಸೂರು, ಅ.1- ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಕೋವಿಡ್ ಬಂದ ಮೇಲೆ ತಾವು ಏನು ಮಾತನಾಡುತ್ತಿದ್ದೇನೆ ಎಂಬುದೇ ಗೊತ್ತಾಗುತ್ತಿಲ್ಲ. ಅವರಿಗೆ ತಾಲಿಬಾನ್ ಗೊತ್ತಿಲ್ಲ, ಬಿಜೆಪಿ ಗೊತ್ತಿಲ್ಲ. ಯಾವುದಕ್ಕೂ ಯಾವ ಸಂಬಂಧವೂ ಇಲ್ಲದೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್.ಎಸ್.ಎಸ್ ಬಗ್ಗೆ ತಿಳಿಯಬೇಕಾದರೆ ಯಾವುದಾದರೂ ಆರ್.ಎಸ್.ಎಸ್ ಶಾಖೆಗೆ ಬರಲಿ. ಅವರು ಶಾಖೆಗೆ ಬರುವುದಾದರೆ ನಾವೇ ಅವರನ್ನು ಖುದ್ದಾಗಿ ಒಂದು ಶಾಖೆಗೆ ಕರೆದುಕೊಂಡು ಹೋಗುತ್ತೇವೆ.

ಕೋವಿಡ್ ಆದ ನಂತರ ತಾನೇನು ಮಾತನಾಡುತ್ತಿದ್ದೇನೆ. ಏನು ಸಂದೇಶ ಕೊಡುತ್ತಿದ್ದೇನೆ ಎಂಬುದರ ಮಾಹಿತಿಯೇ ಇಲ್ಲ. ಅವರಿಗೆ ಮಾನಸಿಕವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಬೇಕಾದರೆ ತಿಳಿದುಕೊಂಡು ಹೇಳುತ್ತೇನೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಚಾಮರಾಜನಗರಕ್ಕೆ ಮುಖ್ಯಮಂತ್ರಿಗಳು ಬಂದೇ ಬರುತ್ತಾರೆ. ಅ.6ರ ಸಾಯಂಕಾಲ ಮುಖ್ಯಮಂತ್ರಿಗಳು ಮೈಸೂರಿಗೆ ಬರುತ್ತಾರೆ.

ರಾಷ್ಟ್ರಪತಿಗಳು 11.15ಕ್ಕೆ ಮೈಸೂರಿಗೆ ಬಂದು ಮೈಸೂರಿನಿಂದ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗುತ್ತಾರೆ. ಬಿಳಿಗಿರಿ ರಂಗನಬೆಟ್ಟ ಮುಗಿಸಿ ಚಾಮರಾಜನಗರಕ್ಕೆ ಹೋಗಿ 4.30ಕ್ಕೆ ಮೈಸೂರು ಏರ್ ಪೋರ್ಟ್‍ಗೆ ಬರುತ್ತಾರೆ. ಏರ್‍ಪೋರ್ಟ್‍ನಿಂದ ಶೃಂಗೇರಿಗೆ ಪ್ರಯಾಣಿಸುತ್ತಾರೆ ಎಂದರು.

ಮುಖ್ಯಮಂತ್ರಿಗಳು ದಸರಾ ಉದ್ಘಾಟನೆಯಲ್ಲಿ ಭಾಗವಹಿಸಿ ಏರ್ ಪೋರ್ಟ್ ನಲ್ಲಿ ಅವರನ್ನು ಸ್ವಾಗತಿಸುತ್ತಾರೆ. ಚಾಮರಾಜನಗರಕ್ಕೆ 3.30ರಿಂದ 4.30ರವರೆಗೆ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ ಎಂದು ಹೇಳಿದರು.

ರಾಜವಂಶಸ್ಥರಿಗೆ ನೀಡುವ ರಾಜಧನ ಕುರಿತು ಪ್ರತಿಕ್ರಿಯಿಸಿ ಪ್ರತಿವರ್ಷ ಎಷ್ಟುಕೊಡುತ್ತೇವೆಯೋ ಅಷ್ಟೇ ಕೋಡುತ್ತೇವೆ. ನಿನ್ನೆ ಮುಖ್ಯಮಂತ್ರಿಗಳು 6 ಕೋಟಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ರಾಜಧನ ಇರಬಹುದು, ಬೇರೆ ಬೇರೆ ಇರಬಹುದು ಚಾಮರಾಜನಗರಕ್ಕೆ ಮತ್ತು ಮಂಡ್ಯ ಎಲ್ಲವನ್ನೂ ತೀರ್ಮಾನಿಸಲಾಗುವುದು ಎಂದು ಸೋಮಶೇಖರ್ ತಿಳಿಸಿದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ