ಮೈಸೂರು: ಸಚಿವ ಉಮೇಶ್ ಕತ್ತಿ ಮಾತನಾಡಿ.. ಯಾವುದೇ ಕಾರಣಕ್ಕೂ ಪಡಿತರ ಅಕ್ಕಿ ಕಡಿತ ಮಾಡಲ್ಲ. ಆಹಾರ ಭದ್ರತಾ ಕಾಯ್ದೆ ಅಡಿ 5kg ಅಕ್ಕಿ ನೀಡಲಾಗುತ್ತೆ. ಉತ್ತರ ಕರ್ನಾಟಕಕ್ಕೆ 5kg ಗೋಧಿ, ದಕ್ಷಿಣ ಕರ್ನಾಟಕಕ್ಕೆ 5kg ಅಕ್ಕಿ ವಿತರಣೆಗೆ ಚಿಂತನೆ ನಡೆದಿದೆ ಎಂದಿದ್ದಾರೆ.
ಮುಂದುವರೆದು ರಮೇಶ್ ಜಾರಕಿಹೊಳಿ ವಿಚಾರವಾಗಿ ಮಾತನಾಡಿ.. ರಮೇಶ್ ಜಾರಕಿಹೋಳಿ ಕೇಸ್ ಇತ್ಯರ್ಥ ಆಗ್ತಿದ್ದಂತೆ ಸಂಪುಟ ಸೇರ್ತಾರೆ. ನನಗೆ ವಿಶ್ವಾಸ ಇದೆ ಅವರು ನೂರಕ್ಕೆ ನೂರರಷ್ಟು ಸಚಿವರಾಗ್ತಾರೆ. ಈ ಮಾತನ್ನ ನಾನೊಬ್ಬ ಸಚಿವನಾಗಿ ಹೇಳ್ತಿದ್ದೇನೆ. ಅವರು ಐದು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ ಎಂದಿದ್ದಾರೆ.
ಉಪಚುನಾವಣೆಯಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇದನ್ನ ಪಕ್ಷ ಮತ್ತು ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ. ವಿಜಯೇಂದ್ರ ಸ್ಪರ್ಧೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
Laxmi News 24×7