ಗಂಗಾವತಿ : ಗಂಗಾವತಿ ಹುಲಿಗಿ ಮುನಿರಾಬಾದ್ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಸು ಇಂದು ತಾಲ್ಲೂಕಿನ ಬಸಾಪುರ ಹತ್ತಿರ ಭತ್ತ ಗದ್ದೆಗೆ ನುಗ್ಗಿ ಅಪಘಾತಕ್ಕೀಡಾಗಿದೆ .
ಗಂಗಾವತಿಯಿಂದ ಹುಲಿಗಿಯ ಕಡೆ ಹೊರಟಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ಸು ಅಪಘಾತಕ್ಕೀಡಾಗಿದೆ ಎದುರಿಗೆ ಬಂದ ವಾಹನಕ್ಕೆ ಆಗುವ ಅಪಘಾತವನ್ನು ತಪ್ಪಿಸಲು ಬಸ್ ಚಾಲಕ ಸ್ಟೇರಿಂಗ್ ಅನ್ನು ತಿರುಗಿಸಿದ್ದರಿಂದ ಸ್ಟೇರಿಂಗ್ ಮುರಿದು ಬಸ್ಸು ಭತ್ತದ ಗದ್ದೆಗೆ ನುಗ್ಗಿ ಗದ್ದೆಯ ಬದುವಿಗೆ ನಿಂತುಕೊಂಡಿದೆ .ಯಾವುದೇ ಪ್ರಾಣ ಹಾನಿ ಮತ್ತು ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವರದಿಯಾಗಿಲ್ಲ .
ಮುನಿರಾಬಾದ್ ಗಂಗಾವತಿ ರಸ್ತೆಯು ರಾಜ್ಯ ಹೆದ್ದಾರಿಯಾಗಿದ್ದರೂ ಕಳೆದ ಇಪ್ಪತ್ತೈದು ವರ್ಷಗಳಿಂದ ಈ ರಸ್ತೆ ಅಗಲೀಕರಣವಾಗಿಲ್ಲ ಜತೆಗೆ ಮಳೆಗಾಲವಾಗಿದ್ದರಿಂದ ಇಡೀ ರಸ್ತೆ ಹಾಳಾಗಿದೆ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಹಲವು ಬಾರಿ ಈ ರಸ್ತೆಯ ದುರಸ್ತಿ ಸಂಘ ಸಂಸ್ಥೆಯವರು ವಿವಿಧ ಹಳ್ಳಿಗಳ ಜನರು ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ .ಹೀಗಾಗಿ ನಿತ್ಯವೂ ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ .