Home / ರಾಜಕೀಯ / ಬೆಂಗಳೂರು: ಚರ್ಚ್ ಸ್ಟ್ರೀಟ್ ಯೋಜನೆ ನಗರದ ಇನ್ನೂ ಮೂರು ರಸ್ತೆಗಳಿಗೆ ವಿಸ್ತರಣೆ

ಬೆಂಗಳೂರು: ಚರ್ಚ್ ಸ್ಟ್ರೀಟ್ ಯೋಜನೆ ನಗರದ ಇನ್ನೂ ಮೂರು ರಸ್ತೆಗಳಿಗೆ ವಿಸ್ತರಣೆ

Spread the love

ಬೆಂಗಳೂರು: ಚರ್ಚ್ ಸ್ಟ್ರೀಟ್ ರಸ್ತೆ ನಿರ್ಮಾಣ ಯೋಜನೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಗರ ಮತ್ತು ಭೂ ಸಾರಿಗೆ ಇಲಾಖೆ(Department of Urban and Land Transport) ಅದೇ ಮಾದರಿಯ ಯೋಜನೆಯನ್ನು ನಗರದ ಮೂರು ರಸ್ತೆಗಳಿಗೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ.

ಮಲ್ಲೇಶ್ವರಂ 8ನೇ ಕ್ರಾಸ್, ಜಯನಗರ 10ನೇ ಮುಖ್ಯರಸ್ತೆ ಮತ್ತು ಗಾಂಧಿ ಬಜಾರ್ ರಸ್ತೆಗಳನ್ನು ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಉನ್ನತ ದರ್ಜೆಗೆ ಏರಿಸಲಾಗುವುದು.

 

ಇದೇ ವೇಳೆ ನಗರ ಮತ್ತು ಭೂ ಸಾರಿಗೆ ಇಲಾಖೆ ನಗರದ ಬೀದಿಗಳನ್ನು ಪಾದಚಾರಿ ಮಾರ್ಗಗಳನ್ನಾಗಿ ಮಾರ್ಪಾಡು ಮಾಡಿದುದರ ಪರಿಣಾಮ ಮತ್ತು ಅದರ ಬಾಳಿಕೆ ಎನ್ನುವ ಪರಿಶೀಲನಾ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯನ್ನು ನಗರದ ಪ್ರತಿಷ್ಟಿತ ವಿಜ್ನಾನ ಸಂಸ್ಥೆಯಾದ ಐಐಎಸ್ಸಿ ನೀಡಿದೆ.

 

ಈ ಬಗ್ಗೆ ಮಾಹಿತಿ ನೀಡಿದ ನಗರ ಮತ್ತು ಭೂ ಸಾರಿಗೆ ಇಲಾಖೆ ಆಯುಕ್ತರಾದ ವಿ ಮಂಜುಳ Clean Air Street Testbed ಎನ್ನುವ ಕಾರ್ಯಕ್ರಮ ಜಾರಿಗೆ ತಂದಿರುವುದಾಗಿ ಹೇಳಿದ್ದಾರೆ.

ಈ ಕಾರ್ಯಕ್ರಮದಡಿ ಸ್ಟಾರ್ಟಪ್ ಕಂಪನಿಗಳು ವಿಭಿನ್ನ ಪರಿಸರ ಸ್ನೇಹಿ ತಂತ್ರಜ್ನಾನ, ಪ್ಲ್ಯಾನ್ ಅಥವಾ ಯೋಜನೆಗಳನ್ನು ಇಲಾಖೆ ಜೊತೆಗೆ ಹಂಚಿಕೊಳ್ಳಬಹುದು. ಸದ್ಯ ನಿವೃತ್ತಿಯಾಗಿರುವ ಬಿಬಿಎಂಪಿ ಮುಖ್ಯ ಅಭಿಯಂತರ ಕೆ.ಟಿ ನಾಗರಾಜ್ ಅವರ ನೇತೃತ್ವದಲ್ಲಿ ಚರ್ಚ್ ಸ್ಟ್ರೀಟ್ ರಸ್ತೆ ಕಾಮಗಾರಿ ನಡೆದಿತ್ತು ಎನ್ನುವುದು ಗಮನಾರ್ಹ.

 

ರಸ್ತೆಗಳನ್ನು ವಾರಾಂತ್ಯದ ದಿನಗಳಲ್ಲಿ ವಾಹನಮುಕ್ತಗೊಳಿಸಿ ಪಾದಚಾರಿಗಳಿಗೆ ಮಾತ್ರ ಅನುವು ಮಾಡಿಕೊಡುವುದರಿಂದ ಆ ಪರಿಸರದ ಗಾಳಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿರುವುದಾಗಿ ಐಐಎಸ್ಸಿ ನೀಡಿರುವ ವರದಿಯಲ್ಲಿ ಹೇಳಲಾಗಿದೆ.


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ