ದಾವಣಗೆರೆ, ಸೆ, 24:- ರಾಜ್ಯದಲ್ಲಿ ಮೂರನೇ ಅಲೆ ಭೀತಿ ಆರಂಭವಾಗಿದೆ. ಎರಡು ಕೊರೊನಾ ಅಲೆಗಳಿಂದ ತತ್ತರಿಸಿದ ಪೋಷಕರಿಗೆ ಇದೀಗ ಮಕ್ಕಳ ಚಿಂತೆ ಹೆಚ್ಚಾಗಿದೆ. ಈಗಾಗಲೇ ಶಾಲೆ ಆರಂಭವಾಗಿದ್ದು, ಪೋಷಕರು ಅಂಗೈಯಲ್ಲಿ ಜೀವ ಹಿಡಿದುಕೊಂಡು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಅದ್ರೇ ಶಾಲೆ ಆರಂಭವಾಗಿ ಕೆಲವೆ ದಿನಗಳು ಕಳೆದಿದೆ.
ಸೆ 06 ರಿಂದ ಸೆ 23 ರ ತನಕ ಅಂದ್ರೇ 17 ದಿನಗಳಲ್ಲಿ 14 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ, ರಾಘವನ್ ರವರು ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲೇ ಪೋಷಕರಲ್ಲಿ ಆತಂಕ ಮನೆ ಮಾಡಿದೆ.
09 ಗಂಡು ಹಾಗು 05 ಹೆಣ್ಣು ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತ ಮಕ್ಕಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ, ರಾಘವನ್ ತಿಳಿಸಿದರು. ಇನ್ನು 14 ಕೊರೊನಾ ಸೋಂಕಿತ ವಿದ್ಯಾರ್ಥಿಗಳಲ್ಲಿ ಯಾರೋಬ್ಬರು ಸಾವನಪ್ಪಿಲ್ಲ ಜಿಲ್ಲೆಯ ಆಯಾಯ ಆಸ್ಪತ್ರೆಗಳ್ಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಾಲೆಗೆ ಕಳುಹಿಸಲು ಪೋಷಕರಲ್ಲಿ ಆತಂಕ ದ್ವೀಗುಣಗೊಳಿಸಿದೆ.
Laxmi News 24×7