ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ವಿಧಾನಸಭೆ ಕಲಾಪ ಚರ್ಚೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಮಾತಿನ ಸಮರ ನಡೆಯಿತು. ಸ್ಪೀಕರ್ ಕಾಗೇರಿ, ನೀವು ಪ್ರತಿಯೊಂದಕ್ಕೂ ಹೀಗೆ ಗದ್ದಲ ಮಾಡಿಕೊಂಡು ಇರಿ. ನಾನು ನಿಮ್ಮ ಗದ್ದಲ ಕೇಳಿಕೊಂಡು ಇರ್ತೀನಿ. ಉಳಿದ ಸದಸ್ಯರು ಮಾಡುವಂತಿಲ್ಲ. ಬಿಲ್ ಬರುವಂಗಿಲ್ಲ. ಬರಿ ನಿಮ್ಮ ಮಾತು ಕೇಳಿಕೊಂಡು ಇರ್ಬೇಕಾ ಅಂತ ಸದಸ್ಯರು ಬಂದು ನನಗೆ ಕೇಳುತ್ತಿದ್ದಾರೆ.
ನೀವು ಈ ರೀತಿ ಉದ್ವೇಗದಲ್ಲಿ ಮಾತನಾಡಿಕೊಂಡು ಕೂತುಕೊಳ್ಳಿ. ಸದನವನ್ನು ನಾನು ಬಹಳ ವರ್ಷಗಳಿಂದ ನೋಡಿದ್ದೀನಿ ಎಂದರು. ರಮೇಶ್ ಕುಮಾರ್ ಬಹಳ ಹಿರಿಯರಿದ್ದೀರಿ, ನಿಮಗೆ ಎಲ್ಲ ವಿಷಯ ಗೊತ್ತಿದೆ, ಎಲ್ಲದಕ್ಕೂ ಎದ್ದು ನಿಂತು ಮಾತನಾಡಿದರೆ, ಸದನ ನಡೆಸೋದು ಹೇಗೆ. ನೀವು ಬುದ್ದಿವಂತರಿದ್ದೀರಿ,
ನಿಮ್ಮ ಬುದ್ದಿವಂತಿಕೆ ಸಾಕಷ್ಟು ಬಾರಿ ಪ್ರಕಟವಾಗಿದೆ. ಯಾರು ಯಾರಿಗೆ ಉತ್ತರ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ, ಎದ್ದು ನಿಂತು ರಮೇಶ್ ಕುಮಾರ್, ಇದೇನು ಎಲೆಕ್ಷನ್ ಕಾಂಪಿಟೇಷನ್ನಾ. ಮಾತನಾಡಿ ಮಾರ್ಕ್ಸ್ ಹಾಕಿಸಿಕೊಳ್ಳೋಕೆ. ನಾವು ಇಲ್ಲ ಬರೋದು ಜನರ ಸಮಸ್ಯೆ ಮಾತನಾಡೋಕೆ ಎಂದರು.
Laxmi News 24×7