Breaking News

ಸೈಮಾ ಅವಾರ್ಡ್ಸ್: ನಟಿ ರಶ್ಮಿಕಾ ಮಂದಣ್ಣ ಡಬಲ್‌ ಪ್ರಶಸ್ತಿ

Spread the love

ನಟಿ ರಶ್ಮಿಕಾ ಮಂದಣ್ಣ ಈಗ ಖುಷಿಯ ಕಡಲಲ್ಲಿ ತೇಲುತ್ತಿದ್ದಾರೆ. ಎಲ್ಲ ಭಾಷೆಗಳಿಂದಲೂ ಅವರಿಗೆ ಆಫರ್​ ಬರುತ್ತಿವೆ. ಅಲ್ಲದೇ, ಈಗಾಗಲೇ ನಟಿಸಿದ ಸಿನಿಮಾಗಳಿಗೆ ಪ್ರಶಸ್ತಿಗಳು ಸಿಕ್ಕಿವೆ.

ಇತ್ತೀಚೆಗೆ ನಡೆದ ಸೈಮಾ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮಿರಿಮಿರಿ ಮಿಂಚಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರಿಗೆ 2 ಪ್ರಶಸ್ತಿಗಳು ಸಿಕ್ಕಿರುವುದು ವಿಶೇಷ. ಆ ಖುಷಿಯ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. 2019ರಲ್ಲಿ ತೆರೆಕಂಡ ಸಿನಿಮಾಗಳು ಈ ಪ್ರಶಸ್ತಿ ಕಣದಲ್ಲಿ ಸ್ಪರ್ಧಿಸಿದ್ದವು.

ಕನ್ನಡದಲ್ಲಿ ನಟಿಸಿದ ‘ಯಜಮಾನ’ ಹಾಗೂ ತೆಲುಗಿನಲ್ಲಿ ನಟಿಸಿದ ‘ಡಿಯರ್​ ಕಾಮ್ರೇಡ್​’ ಚಿತ್ರಗಳಿಗೆ ರಶ್ಮಿಕಾ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಟಿ (ಕ್ರಿಟಿಕ್ಸ್​) ಅವಾರ್ಡ್​ ಅವರಿಗೆ ಸಿಕ್ಕಿದೆ. ಇದು ಅವರ ಅಭಿಮಾನಿಗಳಿಗೂ ಹೆಮ್ಮೆ ತಂದಿದೆ. ಕೆಂಪು ಬಣ್ಣದ ಗೌನ್​ ಧರಿಸಿ, ಎರಡು ಟ್ರೋಫಿಗಳನ್ನು ಕೈಯಲ್ಲಿ ಹಿಡಿದು ರಶ್ಮಿಕಾ ಪೋಸ್​ ನೀಡಿದ್ದಾರೆ. ಈ ಫೋಟೋಗಳು ಅವರ ಫ್ಯಾನ್ಸ್ ಪೇಜ್​ಗಳಲ್ಲಿ ವೈರಲ್​ ಆಗುತ್ತಿವೆ.

‘ಕಳೆದ ರಾತ್ರಿ ಸ್ಪೆಷಲ್​ ಆಗಿತ್ತು. ಯಜಮಾನ ಮತ್ತು ಡಿಯರ್​ ಕಾಮ್ರೇಡ್​ ಚಿತ್ರಗಳಿಗಾಗಿ ಕನ್ನಡ ಹಾಗೂ ತೆಲುಗಿನಲ್ಲಿ ಪ್ರಶಸ್ತಿ ಪಡೆದಿದ್ದೇನೆ. ಮುಂದೊಂದು ದಿನ ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿಯೂ ಪಡೆಯುತ್ತೇನೆ. ಥ್ಯಾಂಕ್ಯೂ ಸೈಮಾ. ನನ್ನನ್ನು ನಟಿಯಾಗಿಸಿದ ಪ್ರೀತಿಪಾತ್ರರಿಗೆಲ್ಲ ಧನ್ಯವಾದಗಳು’ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿಯೂ ಭವಿಷ್ಯದಲ್ಲಿ ಪ್ರಶಸ್ತಿ ಪಡೆಯುವುದಾಗಿ ಅವರು ಹೇಳಿರುವ ಆತ್ಮವಿಶ್ವಾಸದ ಮಾತಿಗೆ ಎಲ್ಲರೂ ಭೇಷ್​ ಎನ್ನುತ್ತಿದ್ದಾರೆ.


Spread the love

About Laxminews 24x7

Check Also

ಡಿಸಿ ಮುಂದೆ ಅಳಲು ತೋಡಿಕೊಂಡ ನಿರಾಶ್ರಿತರು

Spread the loveಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಇದರ ಪರಿಣಾಮ ಗೋಕಾಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ