ಮಂಗಳೂರು: ಸಿ.ಎ. ಪರೀಕ್ಷೆಯಲ್ಲಿ ಮಂಗಳೂರಿನ ರೂತ್ ಕ್ಲಾರಾ ಡಿಸಿಲ್ವಾ ದೇಶಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ ಸ್ಟಿಟ್ಯೂಟ್ ವತಿಯಿಂದ 2021ರ ಸಾಲಿನ ಸಿಎ ಅಂತಿಮ ಪರೀಕ್ಷೆಯನ್ನು ನಡೆಸಲಾಗಿತ್ತು. ರಾಷ್ಟ್ರ ಮಟ್ಟದ ಈ ಸಿಎ ಪರೀಕ್ಷೆಯಲ್ಲಿ ರೂತ್ ಕ್ಲಾರಾ ಡಿಸಿಲ್ವಾ ಮೊದಲ ರ್ಯಾಂಕ್ ಪಡೆದಿದ್ದಾರೆ.
ಪದವಿ ಶಿಕ್ಷಣದ ಜೊತೆಯಲ್ಲೇ ಸಿಎ ವ್ಯಾಸಂಗ ನಡೆಸಿದ್ದ ರೂತ್, ಗ್ರೂಪ್ ಒನ್ ಹಾಗೂ ಗ್ರೂಪ್ ಟು ಹೆಸರಿನ ಎರಡು ಪರೀಕ್ಷೆಗಳನ್ನೂ ಏಕಕಾಲದಲ್ಲಿ ಬರೆದು ಮೊದಲ ಪ್ರಯತ್ನದಲ್ಲೇ ಪಾಸ್ ಆಗಿದ್ದಾರೆ.
Laxmi News 24×7