ಕೊಪ್ಪಳ: ಜಿಲ್ಲೆಯಲ್ಲಿ ಪುಟ್ಟ ಪುಟ್ಟ ಮಕ್ಕಳಿಗೆ ವೈರಲ್ ಇನ್ಫೆಕ್ಷನ್ ಸಮಸ್ಯೆ ಕಾಡುತ್ತಿದ್ದು ಕೆಮ್ಮು, ಕಫಾ, ಜ್ವರದಿಂದ ಮಕ್ಕಳು ನಿತ್ರಾಣರಾಗಿದ್ದಾರೆ. ಅದ್ರಲ್ಲೂ ಗ್ರಾಮೀಣ ಭಾಗದ ಮಕ್ಕಳಲ್ಲಿ ವೈರಲ್ ಇನ್ಫೆಕ್ಷನ್ ಕಾಡುತ್ತಿದ್ದು ಪೋಷಕರು ಆತಂಕಗೊಂಡಿದ್ದಾರೆ.
ಆಸ್ಪತ್ರೆಗಳು ಫುಲ್ ಆಗಿದ್ದು ಮಕ್ಕಳಿಗೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳ ಮುಂದೆ ಪೋಷಕರು ಕ್ಯೂ ನಿಂತ ದೃಶ್ಯಗಳು ಕಂಡುಬಂದಿವೆ. ದೂರದ ಊರುಗಳಿಂದ ಆಸ್ಪತ್ರೆಗಳ ಬಳಿಗೆ ಪೋಷಕರು ಮಕ್ಕಳನ್ನು ಚಿಕಿತ್ಸೆಗಾಗಿ ಕರೆತಂದಿದ್ದಾರೆ.
ಇನ್ನು ಇತ್ತೀಚೆಗೆ ಬಳ್ಳಾರಿ ಮತ್ತು ಗದಗ ಜಿಲ್ಲೆಗಳಲ್ಲೂ ಮಕ್ಕಳಲ್ಲಿ ವೈರಲ್ ಫೀವರ್ ಸಮಸ್ಯೆ ಕಾಣಿಸಿಕೊಂಡಿತ್ತು. ನೂರಾರು ಮಕ್ಕಳು ಆಸ್ಪತ್ರೆಗಳಿಗೆ ದಾಖಲಾಗಿದ್ದರು.
Laxmi News 24×7