ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಜೆ ಸುರಿದ ಧಾರಾಕಾರ ಮಳೆಗೆ ಹೆಗಡೆ ನಗರದ ಬ್ರಿಡ್ಜ್ ಬಳಿ ರಸ್ತೆ ಕುಸಿತಗೊಂಡಿದೆ. ಹೆಗಡೆನಗರದ ಬ್ರಿಡ್ಜ್ ಬಳಿಯ ಎರಡ್ಮೂರು ಕಡೆ ಸುಮಾರು ಎಂಟು ಅಡಿ ಆಳಕ್ಕೆ ರಸ್ತೆ ಕುಸಿದಿದೆ.
ಪರಿಣಾಮ ಸ್ಟೀಲ್ ಕಂಬಿ ಸಾಗಿಸುತ್ತಿದ್ದ ಟ್ರಕ್ವೊಂದು ರಸ್ತೆ ಮಧ್ಯದಲ್ಲೇ ಪಲ್ಟಿಯಾಗಿದೆ. ರಸ್ತೆಯಲ್ಲಿ ಒಳಚರಂಡಿ ಹಾಗೂ ಕಾವೇರಿ ಪೈಪ್ ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಕಳಪೆ ಕಾಮಗಾರಿಯಿಂದ ರಸ್ತೆ ಕುಸಿದಿರುವ ಶಂಕೆ ವ್ಯಕ್ತವಾಗಿದೆ.
Laxmi News 24×7