Breaking News

ಮಧ್ಯ ರೈಲ್ವೇಯಿಂದ ಡಿಜಿ ಲಾಕರ್‌ ಸೌಲಭ್ಯ

Spread the love

ಮುಂಬಯಿ: ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಮಧ್ಯ ರೈಲ್ವೇ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ (ಸಿಎಸ್‌ಎಂಟಿ) ನಿಲ್ದಾಣದಲ್ಲಿ “ಡಿಜಿ’ ಲಾಕರ್‌ ಸೌಲಭ್ಯವನ್ನು ಆರಂಭಿಸಿದೆ.

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಆರಂಭಿಸಿದ ದೇಶದ ಮೊದಲ ಡಿಜಿ ಲಾಕರ್‌ ಸೌಲಭ್ಯ ಇದಾಗಿದ್ದು, ಈ ಸೌಲಭ್ಯವನ್ನು ದಾದರ್‌ ಮತ್ತು ಲೋಕಮಾನ್ಯ ತಿಲಕ್‌ ಟರ್ಮಿನಸ್‌ನಲ್ಲಿಯೂ ಶೀಘ್ರ ಆರಂಭಿಸಲಾಗುವುದು ಎಂದು ಮಧ್ಯ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ಹೆಸರು, ಮೊಬೈಲ್‌ ಸಂಖ್ಯೆ, ಪಿಎನ್‌ಆರ್‌ ಸಂಖ್ಯೆ ಮತ್ತು ಇ-ಮೇಲ್‌ ಐಡಿ ತುಂಬಿದ ಬಳಿಕ ಬಯಸಿದ ಗಾತ್ರದ ಲಾಕರ್‌ ಅನ್ನು ಕಾಯ್ದಿರಿ ಸಬಹುದು. ಬಳಿಕ ಪ್ರಯಾಣಿಕರು ಈ ಲಾಕರ್‌ ಅನ್ನು ಚೀಲದ ವಿವರಗಳನ್ನು ತುಂಬುವ ಮೂಲಕ ಮತ್ತು ಅದನ್ನು ಎಷ್ಟು ಗಂಟೆ ಬಳಸುತ್ತಾರೆ ಎಂಬುದನ್ನು ಬಳಸಬಹುದು.

 

ಲಾಕರ್‌ ಸವಲತ್ತಿನಿಂದ ಆದಾಯ
ಲ್ಯಾಡರ್‌-2 ರೈಸ್‌ ಪ್ರೈ. ಲಿ. ಕಂಪೆನಿಯನ್ನು ಲಾಕರ್‌ ನೋಡಿ ಕೊಳ್ಳಲು ನಿಯೋಜಿಸಲಾಗಿದ್ದು, 24 ಗಂಟೆಗಳ ಕಾಲ ಡಿಜಿ ಲಾಕ್‌ ಸಿಬಂದಿಯನ್ನು ಹೊಂದಿರುತ್ತದೆ. ಈ ಲಾಕರ್‌ ಬಳಸುವಾಗ, ಪ್ರಯಾಣಿಕರಿಗೆ ವಿಶಿಷ್ಟ ಬಾರ್‌ಕೋಡ್‌ನೊಂದಿಗೆ ರಸೀದಿ ಒದಗಿಸಲಾಗುವುದು. ಬ್ಯಾಗ್‌ ಹಿಂದಕ್ಕೆ ಪಡೆಯುವಾಗ ಈ ಬಾರ್‌ಕೋಡ್‌ ರಸೀದಿ ತೋರಿಸಬೇಕು. ಈ ಲಾಕರ್‌ಗಳನ್ನು ಅಳವಡಿಸುವ ಮತ್ತು ನಿರ್ವಹಿಸುವ ವೆಚ್ಚವನ್ನು ಕಂಪೆನಿ ಮುಂದಿನ ಐದು ವರ್ಷಗಳವರೆಗೆ ಭರಿಸುತ್ತದೆ. ರೈಲ್ವೇಗೆ ಈ ಸೌಲಭ್ಯದಿಂದ ಐದು ವರ್ಷಗಳಿಗೆ 79.65 ಲಕ್ಷ ರೂ. ಆದಾಯ ದೊರೆಯಲಿದೆ.

ಸುಧಾರಿತ ಲಾಕರ್‌ ಸೌಲಭ್ಯ
ಪ್ರಯಾಣಿಕರಿಗೆ ಸುರಕ್ಷಿತ ಲಾಕರ್‌ಗಳು, ಡಿಜಿಟಲ್‌ ಪಾವತಿ ಸೌಲಭ್ಯ, ಆರ್‌ಎಫ್‌ಐಡಿ ಟ್ಯಾಗ್‌ಗಳ ಬಳಕೆ ಮತ್ತು ಆನ್‌ಲೈನ್‌ ಸ್ವೀಕೃತಿಯಂತಹ ಸುಧಾರಿತ ಲಾಕರ್‌ ರೂಂ ಸೇವೆಗಳನ್ನು ಒದಗಿಸಲಾಗುವುದು.
– ಅನಿಲ್‌ ಕುಮಾರ್‌ ಲಾಹೋಟಿ ಪ್ರಧಾನ ವ್ಯವಸ್ಥಾಪಕರು, ಮಧ್ಯ ರೈಲ್ವೇ


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ