Breaking News

ಕುಡಚಿ ಪೋಲಿಸರ ನವರಂಗಿ ಆಟ, ಎಗ್ಗಿಲ್ಲದೇ ನಡೆಯುತ್ತಿದೆ ಮಟ್ಕಾ ಓಟ

Spread the love

ಬೆಳಗಾವಿ: ಬೆಳಗಾವಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಕ್ರಮ ಮಟ್ಕಾ ದಂಧೆ ಎಗ್ಗಿಲ್ಲದೆ ಸಾಗಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯ ಗೋಕಾಕ್, ರಾಯಬಾಗ, ಘಟಪ್ರಭಾ, ಮೂಡಲಗಿ, ಕುಡಚಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮಟಕಾ ಹಾವಳಿ ಮಿತಿ ಮೀರಿದೆ. ಈ ಮಟ್ಕಾ ದಂಧೆಗೆ ಬೀಟ್ ಪೊಲೀಸರ ಮುಖಾಂತರ ಪಿಎಸ್ಐ ಲೆವೆಲ್ ಅಧಿಕಾರಿಗಳು ಬುಕ್ಕಿಗಳ ಸಂಗ ಬೆಳೆಸಿದ್ದು, ಎಂಜಲ ಕಾಸಿಗಾಗಿ ಪೊಲೀಸರ ಕರಿ ನೆರಳಲ್ಲೇ ಈ ಅಕ್ರಮ ಮಟ್ಕಾ ದಂಧೆ ನಡೆಯುತ್ತಿದೆ.

ಇನ್ನು ರಾಯಬಾಗ ತಾಲೂಕಿನ ಕುಡಚಿ, ಮೊರಬ ಗ್ರಾಮಗಳಲ್ಲಿ ಕುಲ್ಲಂ ಕುಲ್ಲಾ ಮಟ್ಕಾ ದಂಧೆ ನಡೆಯುತ್ತಿದ್ದು, ಹಾಡ ಹಗಲೇ ಯಾರ ಭಯವೂ ಇಲ್ಲದೇ ಬಹಿರಂಗವಾಗಿ ಬುಕ್ಕಿಗಳು ಮಟ್ಕಾ ದಂಧೆ ನಡೆಸುತ್ತಿದ್ದಾರೆ. ಕುಡಚಿ ಪೊಲೀಸರ ಕರಿನೆರಳಲ್ಲಿ ಈ ಮಟಕಾ ದಂಧೆ ನಡೆಯುತ್ತಿದ್ದು, ಮಟಕಾ ದಂಧೆಗೆ ಕುಡಚಿ ಪೊಲೀಸರ ಅಭಯವೇ ಕಾರಣ ಎನ್ನಲಾಗಿದೆ. ಎಂಜಲು ಕಾಸಿಗಾಗಿ ಮಟ್ಕಾ ದಂಧೆಗೆ ಕುಮ್ಮಕ್ಕು ನೀಡಿದ್ರಾ..? ಕುಡಚಿ ಪೊಲೀಸರು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು ಸಾರ್ವಜನಿಕರು ಕುಡಚಿ ಪೋಲಿಸರಿಗೆ ಛೀಮಾರಿ ಹಾಕುತ್ತಿದ್ದಾರೆ.

ಕುಡಚಿ ಪೊಲೀಸರ ಕರಿನೆರಳಲ್ಲಿ ಮಟ್ಕಾ ದಂಧೆ ನಡೆಯುತ್ತಿರೊ ಬಗ್ಗೆ ಈ ಹಿಂದೆಯೂ ನಾವು ಸುದ್ದಿ ಪ್ರಕಟಿಸಿದಾಗ ಬೆಳಗಾವಿಯ ದಕ್ಷ ಎಸ್ಪಿ ಲಕ್ಷ್ಮಣ ನಿಂಬರಗಿ ಅವರು ಕುಡಚಿ ಪೊಲೀಸರಿಗೆ ಬಿಸಿ ಮುಟ್ಟಿಸಿ ದಾಳಿ ಮಾಡಿಸಿದ್ದರು. ದಾಳಿ ನಡೆಸಿ, ಸ್ವಲ್ಪ ದಿನ ಮಟ್ಕಾ ದಂಧೆ ನಿಲ್ಲಿಸಿದ್ದ ಬುಕ್ಕಿಗಳು, ಇದೀಗ ಮತ್ತೆ ಮಟ್ಕಾ ದಂಧೆ ಶುರುಹಚ್ಚಿಕೊಂಡಿದ್ದು, ಮತ್ತದೇ ಕುಡಚಿ ಪೊಲೀಸರತ್ತ ಬೆರಳು ಮಾಡುವಂತೆ ಮಾಡಿದೆ.

ಇನ್ನು ಪೊಲೀಸರ ಅಭಯವಿಲ್ಲದೇ ಬಹಿರಂಗವಾಗಿ ಮಟ್ಕಾ ಬರೆದುಕೊಳ್ಳಲು ಸಾಧ್ಯವಾ..? ಎಂಬ ಪ್ರಶ್ನೆ ಸಹಜವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕುಡಚಿ ಪೊಲೀಸರ ಕಣ್ಣಾಮುಚ್ಚಾಲೆ ಆಟಕ್ಕೆ ಬೆಳಗಾವಿಯ ಎಸ್ಪಿ ಲಕ್ಷ್ಮಣ ನಿಂಬರಗಿ ಬ್ರೇಕ್ ಹಾಕಬೇಕಿದ್ದು, ಇಲಾಖೆಯ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಿಗಿಡುತ್ತಿರೊ ಭ್ರಷ್ಟ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕಿದೆ. ಇನ್ನು ಮೊರಬ ಗ್ರಾಮದ ಮಟ್ಕಾ ದಂಧೆಯ ಎಕ್ಸ್ ಕ್ಲೂಸಿವ್ ದೃಶ್ಯಾವಳಿ ಬಿಗ್ ನ್ಯೂಸ್ ಗೆ ಲಭ್ಯವಾಗಿದೆ.


Spread the love

About Laxminews 24x7

Check Also

ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್

Spread the loveಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜುಲೈ ಒಂದರಿಂದ ಆರಂಭಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ