Breaking News

BJP ಸರಕಾರ ಬೀಳುತ್ತೆ ಎಂಬ ವಿಚಾರದಲ್ಲಿ ಯಾರ ಕನಸು ನನಸಾಗಲ್ಲ : ಕಾಂಗ್ರೆಸ್ ಗೆ ಕೋಟ ತಿರುಗೇಟು

Spread the love

ಚಿಕ್ಕಮಗಳೂರು : ಬಿಜೆಪಿ ಸರಕಾರ ಸುಭದ್ರ ಹಾಗೂ ಸುಸ್ಥಿರವಾಗಿದೆ, ನಮ್ಮ ಸರಕಾರ ಬೀಳುತ್ತೆ ಎಂಬ ವಿಚಾರದಲ್ಲಿ ಯಾರು ಕನಸು ಕಂಡರೂ ಅದು ನನಸಾಗುವುದಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು ಇನ್ನು ಆರು ತಿಂಗಳಲ್ಲಿ ಬಿಜೆಪಿ ಸರಕಾರ ಬಿದ್ದು ಹೋಗುತ್ತದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರೀಯಿಸಿದ ಅವರು ಕನಸು ಕಾಣುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಕನಸು ಕಾಣುವುದು ತಪ್ಪಲ್ಲ, ಆದರೆ ಬಿಜೆಪಿ ಸರಕಾರದ ವಿಚಾರದಲ್ಲಿ ಯಾರ ಕನಸು ನನಸಾಗುವುದಿಲ್ಲ ಬಿಜೆಪಿ ಸರಕಾರ ಸುಭದ್ರ ಹಾಗೂ ಸುಸ್ಥಿರವಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ದತ್ತ ಪೀಠ ಅರ್ಚಕರ ನೇಮಕ ವಿಚಾರವಾಗಿ ಮಾತನಾಡಿದ ಅವರು ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಚರ್ಚೆಯಲ್ಲಿದೆ, ದತ್ತಪೀಠ ಸಂಬಂಧ ವಾದ-ವಿವಾದ ಮುಗಿದು ಅಂತಿಮ ತೀರ್ಪು ಮಾತ್ರ ಬಾಕಿ ಇದೆ, ಕೋರ್ಟ್ ತೀರ್ಪಿನ ಬಳಿಕ ಮುಂದಿನ ಕ್ರಮಗಳ ಕುರಿತು ಸರಕಾರ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ