ರಾಯಚೂರು: ಎಂ.ಟಿ.ಬಿ ನಾಗರಾಜ್, ನಿರಾಣಿ ಸೇರಿದಂತೆ ಬಿಜೆಪಿಯ ಅನೇಕ ಶಾಸಕರು ಕಾಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಂ.ಟಿ.ಬಿ.ನಾಗರಾಜ್ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಹಾಗೆ ನಿರಾಣಿ ಕೂಡ ಭೇಟಿಯಾಗಿದ್ದಾರೆ. ಇನ್ನೂ ಅನೇಕರು ಪಕ್ಷದ ಸಂಪರ್ಕದಲ್ಲಿದ್ದಾರೆ. ಆದರೆ, ಎಷ್ಟು ಶಾಸಕರು ಎಂದು ಈಗಲೇ ಹೇಳಲಿಕ್ಕಾಗದು ಎಂದರು.
ರಾಜ್ಯದಲ್ಲಿ ಸರ್ಕಾರ ಅವಧಿ ಮುಗಿಸುವುದಿಲ್ಲ. ಮಧ್ಯಂತರ ಚುನಾಚಣೆ ಬರುವುದು ನಿಶ್ಚಿತ. ಆದರೆ, ಸರ್ಕಾರ ಪತನಗೊಂಡರೆ ನಾವು ಮಾತ್ರ ಚುನಾವಣೆಗೆ ಹೋಗುತ್ತೇವೆ. ಆ ನಿಟ್ಟಿನಲ್ಲಿ ಈಗಾಗಲೇ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ಸೆ.17ರಂದು ರಾಯಚೂರಿನಲ್ಲಿ ವಿಭಾಗೀಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಅನೇಕ ನಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.
Laxmi News 24×7