ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಬಂಧನ ಆಗಿದೆ. ಈ ಕೇಸ್‌ನಲ್ಲಿ ನಟಿ ಶಿಲ್ಪಾ ಶೆಟ್ಟಿ ಅವರ ಪಾತ್ರ ಇರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರ ಸಿಕ್ಕಿಲ್ಲ. ರಾಜ್ ಕುಂದ್ರಾ ಆಪ್ ಅಥವಾ ಸಂಸ್ಥೆಗೂ ಶಿಲ್ಪಾ ಶೆಟ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಪ್ರಾಥಮಿಕ ತನಿಖೆ ವೇಳೆ ಸ್ಪಷ್ಟಪಡಿಸಿದ್ದರು. ಆದರೆ, ರಾಜ್ ಕುಂದ್ರಾ ಪತ್ನಿಗೆ ಈಗಲೇ ಕ್ಲೀನ್ ಚಿಟ್ ಕೊಡಲು ಸಾಧ್ಯವಿಲ್ಲ ಎಂದು ಸಹ ಹೇಳಿದ್ದರು.
ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ರಾಜ್ ಕುಂದ್ರಾ ವಿರುದ್ಧ ಬಹಿರಂಗವಾಗಿ ಆರೋಪಗಳನ್ನು ಮಾಡಿರುವ ನಟಿ ಶೆರ್ಲಿನ್ ಚೋಪ್ರಾ, ”ನನ್ನ ವಿಡಿಯೋ ಮತ್ತು ಫೋಟೋಗಳ ಬಗ್ಗೆ ಶಿಲ್ಪಾ ಶೆಟ್ಟಿ ಗೊತ್ತಿತ್ತು. ನನ್ನ ವಿಡಿಯೋ ನೋಡಿ ಅವರು ಮೆಚ್ಚಿಕೊಂಡಿದ್ದರು. ಅವರಿಂದ ಆಕೆಯೂ ದಾರಿ ತಪ್ಪಿದ್ದಳು” ಎಂದು ಇ-ಟೈಮ್ಸ್ ಜೊತೆ ಮಾತನಾಡುವ ವೇಳೆ ಬಹಿರಂಗಪಡಿಸಿದ್ದಾರೆ.
”ನನ್ನನ್ನು ಅವರ ಜೊತೆ ಸೇರಿಸಿಕೊಳ್ಳುವ ಪ್ರಯತ್ನ ಮಾಡಿದ್ದರು ರಾಜ್ ಕುಂದ್ರಾ. ನನ್ನದೇ ಹೆಸರಿನಲ್ಲಿ ಪ್ರತ್ಯೇಕ ಆಪ್ ಮಾಡಿಕೊಡುವುದಾಗಿ ಹೇಳಿದ್ದರು. ಆ ಆಪ್ ಹೆಸರು ‘ಶೆರ್ಲಿನ್ ಚೋಪ್ರಾ ಆಪ್’ ಎಂದು ನಾಮಕರಣ ಮಾಡುವುದಾಗಿ ತಿಳಿಸಿದ್ದರು. ನಾನು ಉತ್ತಮ ಕೆಲಸ ಮಾಡುತ್ತಿದ್ದೇನೆ ಎಂದು ಪ್ರೋತ್ಸಾಹಿಸಿದ್ದರು, ಶಿಲ್ಪಾ ಶೆಟ್ಟಿ ಸಹ ನನ್ನ ವಿಡಿಯೋ ಹಾಗೂ ಫೋಟೋ ನೋಡಿ ಮೆಚ್ಚಿಕೊಂಡರು ಎಂದು ಸ್ವತಃ ರಾಜ್ ಕುಂದ್ರಾ ಹೇಳಿದ್ದರು” ಎನ್ನುವ ವಿಚಾರವನ್ನು ಹೇಳಿದ್ದಾರೆ.
ಇತ್ತೀಚಿಗಷ್ಟೆ ಮುಂಬೈ ಪೊಲೀಸರು ನಟಿ ಶೆರ್ಲಿನ್ ಚೋಪ್ರಾರನ್ನು ವಿಚಾರಣೆ ಮಾಡಿದ್ದರು. ಶನಿವಾರ ಮುಂಬೈ ಕಚೇರಿಯಲ್ಲಿ ನಟಿಯನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ ರಾಜ್ ಕುಂದ್ರಾ ಕೇಸ್ ಸಂಬಂಧಿತ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶೆರ್ಲಿನ್ ಸಹ ಕುಂದ್ರಾ ವಿರುದ್ಧ ತಮ್ಮ ಬಳಿಯಿದ್ದ ಸಾಕ್ಷ್ಯಾಧಾರ, ವಾಟ್ಸಾಪ್ ಚಾಟ್, ಸಂದೇಶ, ಇ-ಮೇಲ್ ಎಲ್ಲವನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.
ಪೊಲೀಸ್ ವಿಚಾರಣೆ ಮುಗಿಸಿ ಬಂದು ಖಾಸಗಿ ವೆಬ್‌ಸೈಟ್ ಜೊತೆ ಮಾತನಾಡಿದ್ದ ಶೆರ್ಲಿನ್ ಚೋಪ್ರಾ, ವಿಚಾರಣೆ ವೇಳೆ ಪೊಲೀಸರು ಯಾವೆಲ್ಲಾ ವಿಷಯಗಳನ್ನು ಚರ್ಚಿಸಿದರು, ಯಾವ ರೀತಿ ಪ್ರಶ್ನೆಗಳನ್ನು ಕೇಳಿದ್ರು ಎಂದು ಬಹಿರಂಗಪಡಿಸಿದ್ದರು.
”ರಾಜ್ ಕುಂದ್ರಾ ಅವರ ಆರ್ಮ್‌ಪ್ರೈಮ್ ಸಂಸ್ಥೆ ಜೊತೆಗಿನ ಒಪ್ಪಂದ ಹೇಗಾಯಿತು ಮತ್ತು ಆ ಒಪ್ಪಂದಲ್ಲಿ ಯಾವೆಲ್ಲ ಅಂಶಗಳಿವೆ ಎಂದು ಶೆರ್ಲಿನ್ ಚೋಪ್ರಾಗೆ ಪೊಲೀಸರು ಪ್ರಶ್ನಿಸಿದ್ದಾರೆ. ಈ ಕೇಸ್‌ನಲ್ಲಿ ರಾಜ್ ಕುಂದ್ರಾ ಅವರ ಜೊತೆ ನಿಮ್ಮ ಸಂಬಂಧವೇನು? ಅವರ ಸಂಸ್ಥೆಯಲ್ಲಿ ಎಷ್ಟು ವಿಡಿಯೋಗಳಲ್ಲಿ ನೀವು ಪಾಲ್ಗೊಂಡಿದ್ರಿ” ಎಂದು ವಿಚಾರಣೆಯಲ್ಲಿ ಕೇಳಿದ್ರು ಎಂದು ಶೆರ್ಲಿನ್ ಇ-ಟೈಮ್ಸ್‌ಗೆ ಹೇಳಿದ್ದಾರೆ.
ರಾಜ್ ಕುಂದ್ರಾ ಜೊತೆ ನಿಮ್ಮ ವೈಯಕ್ತಿಕ ಸಂಬಂಧ ಹೇಗಿದೆ ಎಂದು ಪೊಲೀಸರು ಪ್ರಶ್ನಿಸಿರುವುದಾಗಿ ನಟಿ ಬಹಿರಂಗಪಡಿಸಿದ್ದಾರೆ. ”ರಾಜ್ ಕುಂದ್ರಾ ಜೊತೆ ನಿಮ್ಮ ಸಂಬಂಧ ಹೇಗೆ? ಅವರ ಒಡೆತನಲ್ಲಿರುವ ಬೇರೆ ಸಂಸ್ಥೆಗಳ ಬಗ್ಗೆ ನಿಮಗೆ ಮಾಹಿತಿ ಇದ್ಯಾ? ಎಂದು ಪ್ರಶ್ನಿಸಿದರು. ಇಡೀ ದಿನ ನನ್ನಿಂದ ಹಲವು ವಿಷಯಗಳಿಗೆ ಮಾಹಿತಿ ಪಡೆದರು.” ಎಂದು ಶೆರ್ಲಿನ್ ತಿಳಿಸಿರುವುದಾಗಿ ವರದಿಯಾಗಿದೆ.
ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಜುಲೈ 19 ರಂದು ಬಂಧನವಾಗಿದ್ದರು. ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಲಾಯಿತು. ನಂತರ ಜುಲೈ 27 ರಂದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನಿಡಲಾಗಿದೆ. ಆಗಸ್ಟ್ 10 ರಂದು ಕುಂದ್ರಾ ನ್ಯಾಯಾಂಗ ಬಂಧನದ ಅವಧಿ ಮುಗಿಯಲಿದ್ದು, ಮತ್ತೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಮತ್ತೊಂದಡೆ ಕುಂದ್ರಾ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈ ಕೋರ್ಟ್ ನಿರಾಕರಿಸಿದೆ.