Breaking News

ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯದಂಗಡಿಗಳಿಗೆ ಪರವಾನಗಿ ನೀಡದಂತೆ ಸುಪ್ರೀಂಕೋರ್ಟ್​ ಆದೇಶ

Spread the love

ನವದೆಹಲಿ: ದೇಶಾದ್ಯಂತ ಕುಡಿದು ವಾಹನ ಚಲಾಯಿಸಿ ಅಪಘಾತಗಳು ಹೆಚ್ಚಾಗುತ್ತಿರುವ ಕಾರಣ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಇನ್ಮುಂದೆ ಹೊಸದಾಗಿ ಮದ್ಯದಂಗಡಿ ಓಪನ್ ಮಾಡಿ ಮದ್ಯ ಮಾರಾಟ ಮಾಡಲು ಪರವಾನಿಗಿ ನೀಡದಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಇದು ಅನ್ವಯವಾಗಲಿದೆ. ಹೆದ್ದಾರಿಗಳಿಂದ 500 ಮೀಟರ್​ ಅಂತರದೊಳಗೆ ಯಾವುದೇ ರೀತಿಯ ಮದ್ಯದಂಗಡಿಗಳು ಇರುವಂತಿಲ್ಲ ಎಂದಿದೆ. ಇದರ ಜತೆಗೆ 20 ಸಾವಿರಕ್ಕಿಂತಲೂ ಕಡಿಮೆ ಜನರು ವಾಸ ಮಾಡುವ ಸ್ಥಳಗಳಲ್ಲಿರುವ ಹೆದ್ದಾರಿ ಅಕ್ಕಪಕ್ಕದ 220 ಮೀಟರ್​ ವ್ಯಾಪ್ತಿಯೊಳಗೆ ಯಾವುದೇ ಮದ್ಯ ಮಾರಾಟ (ಹೊಸದಾಗಿ) ಮಾಡುವಂತಿಲ್ಲ ಎಂದು ತಿಳಿಸಿದೆ.

ಮಹತ್ವದ ಆದೇಶ ಹೊರಬಿದ್ದಿರುವ ಕಾರಣ ಕೇಂದ್ರ ರಸ್ತೆ ಸಾರಿಗೆ ಸಂಸ್ಥೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡಿದ್ದು, ಎಲ್ಲ ರೀತಿಯ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದೆ. ಇನ್ಮುಂದೆ ಹೊಸದಾಗಿ ಮದ್ಯದ ಅಂಗಡಿ ಓಪನ್ ಮಾಡಲು ಲೈಸನ್ಸ್ ಪಡೆದುಕೊಳ್ಳುವಾಗ ಆಯಾ ರಾಜ್ಯಗಳು ಸುಪ್ರೀಂಕೋರ್ಟ್​ ಸೂಚನೆ ಪಾಲನೆ ಮಾಡುವಂತೆ ತಿಳಿಸಿದೆ. ಜತೆಗೆ 500ಮೀಟರ್​ಯೊಳಗೆ ಎಷ್ಟು ಮದ್ಯದಂಗಡಿಗಳಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದೆ. 2016ರ ಡಿಸೆಂಬರ್​ನಲ್ಲಿ ಅಪೆಕ್ಸ್​ ಕೋರ್ಟ್​​ ಈ ರೀತಿಯ ಆದೇಶ ಹೊರಹಾಕಿತ್ತು. ಇದೀಗ ಅದೇ ತೀರ್ಪನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.ಕುಡಿದು ವಾಹನ ಚಲಾವಣೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ