Breaking News

ನೊಂದ ಕುಟುಂಬಗಳಿಗೆ ಆಸರೆಯಾಗೋಣ: ರಾಹುಲ್ ಜಾರಕಿಹೊಳಿ ನಿರ್ಗತಿಕರ ಸಾತ್ವಾಂನ ಹೇಳಿದ ಯುವ ನಾಯಕ ರಾಹುಲ್

Spread the love

 

 

ಗೋಕಾಕ: ರಣ ಭೀಕರ ಮಳೆಗೆ ಘಟಪ್ರಭಾ ನದಿಯ ತೀರದ   ಗ್ರಾಮಗಳು  ಪ್ರವಾಹಕ್ಕೆ ತುತ್ತಾಗಿದ್ದು, ಪ್ರವಾಹ  ಪೀಡಿತ ಗ್ರಾಮಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಭೇಟಿ ನೀಡಿ, ರವಿವಾರ  ಪರಿಸ್ಥಿತಿ ಅವಲೋಕಿಸಿದರು.

 

ಅರಭಾವಿ ವಿಧಾನ ಸಭಾ ಮತ ಕ್ಷೇತ್ರದ ವ್ಯಾಪ್ತಿಯಲ್ಲಿರುವ  ಅಡಿಬಟ್ಟಿ, ಚಿಗದೊಳ್ಳಿ,  ಜಾಕ್ವೆಲ್ ಗೌಡನ್ ಕ್ರಾಸ್ ಮೆಳವಂಕಿ,  ಕಲಾರ್ಕೊಪ್ಪ,  ಹಡಗಿನಾಳ,  ತಳಕಟ್ನಾಳ , ಉದಗಟ್ಟಿ  ಗ್ರಾಮದ ಗಂಜಿ ಕೇಂದ್ರಗಳಲ್ಲಿರುವ  ನಿರ್ಗತಿಕರನ್ನು ಭೇಟಿ ಮಾಡಿ, ಸಾತ್ವಾಂನ ಹೇಳಿದರು.

ಈ ವೇಳೆ ಅಧಿಕಾರಿಗಳ ಜತೆ ರಾಹುಲ್ ಜಾರಕಿಹೊಳಿ   ಮಾತನಾಡಿ,  ಗಂಜಿ ಕೇಂದ್ರಗಳಲ್ಲಿರುವ  ಜನರಿಗೆ ಯಾವುದೇ ಸಮಸ್ಯೆ ಆಗದಂತೆ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಬೇಕು. ಬದುಕೇ ನೀರಿನಲ್ಲಿ ಕೊಚ್ಚಿ ಹೋಗಿದೆ.  ಹೀಗಾಗಿ ಕುಟುಂಬಗಳಿಗೆ ಆಸರೆಯಾಗಿ ನಾವು ನಿಲ್ಲಬೇಕು. ಈ ಸಂಕಷ್ಟ ಸಂದರ್ಭದಲ್ಲಿ ಇವರಿಗೆ ಅಗತ್ಯ ವಸ್ತುಗಳು ನೀಡಬೇಕೆಂದು ಸೂಚನೆ ನೀಡಿದರು.

 

 

ಮಕ್ಕಳ ಆರೋಗ್ಯದ ಎಚ್ಚರಿಕೆ ಇರಲಿ: ಮಳೆ ಸಂದರ್ಭದಲ್ಲಿ ಎಲ್ಲಾ ನೀರು ಕಲುಷಿತವಾಗಿರುವುದು ಸಹಜ, ನೀರನ್ನು ಕಾಯಿಸಿ ಆರಿಸಿ ಸೇವಿಸಿ.  ಈ ವೇಳೆ ಪೋಷಕರು ಮಕ್ಕಳ  ಆರೋಗ್ಯದ ಬಗ್ಗೆ ಹೆೆಚ್ಚಿನ ಕಾಳಜಿ ವಹಿಸಬೇಕು. ಈ ಕೇಂದ್ರಗಳಲ್ಲಿನ ಜನರು ವೈದ್ಯರ ಬಳಿ ಸಲಹೆ ಪಡೆದು ಮಾತ್ರೆಗಳನ್ನು ಪಡೆಯಬೇಕೆಂದರು.

 

ಈ ಸಂದರ್ಭದಲ್ಲಿ ಅಡಿವಪ್ಪಾ ಕಂಕಾಳಿ, ಮಲ್ಲಿಕಾರ್ಜುನ ಶಿಂತ್ರಿ,   ವಿಠ್ಠಲ ಬಂಗಿ(ಕಲಾಲ), ಕಲ್ಕಪಾ ನಾಯಿಕ,  ಪಾಂಡು ಮನ್ನಿಕೇರಿ, ಲಕ್ಷ್ಮಣ ಮಸಗುಪ್ಪಿ, ಮಂಜು ಸನ್ನಕಿ, ಅಡಿವಪ್ಪಾ ಕನಂಕಾಳಿ  ಹಾಗೂ ಕಾಂಗ್ರೆಸ್ ಕಾರ್ಯಕರ್ತ ಇದ್ದರು.


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

Spread the loveಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ