ಕೊಪ್ಪಳ : ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಬದಲಾವಣೆ ಸುದ್ದಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲೇ ಬಿಜೆಪಿ ಅಂದ್ರೇ ಬ್ಯುಸಿನೆಸ್ ಜನತಾ ಪಾರ್ಟಿ ಎಂಬುದಾಗಿ ಮಾಜಿ ಶಾಸಕ ಮಧುಬಂಗಾರಪ್ಪ ( Madhu Bangarappa ) ಆರೋಪಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜನಪರ ಕೆಲಸ ಮಾಡುವ ಸರ್ಕಾರ ಅಂದ್ರೇ ಅದು ಕಾಂಗ್ರೆಸ್ ಪಕ್ಷ(Congress Party )ವಾಗಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಜನರ ಸೇವೆಯನ್ನು ಮಾಡಲಿದೆ ಎಂದರು.
ಬಿಜೆಪಿ ಪಕ್ಷ (BJP Party ) ಅಧಿಕಾರಕ್ಕೆ ಬರೋದು, ಕೇವಲ ವ್ಯವಹಾರಕ್ಕಾಗಿಯೇ ಆಗಿದೆ. ಹೀಗೆ ವ್ಯವಹಾರಕ್ಕಾಗಿ ಅಧಿಕಾರಕ್ಕೆ ಬರೋ ಬಿಜೆಪಿ ಪಕ್ಷಕ್ಕೆ, ವ್ಯವಹಾರ ಕುದುರದೇ ಹೋದ್ರೇ. ಬಿದ್ದು ಹೋಗುತ್ತದೆ. ಇಡೀ ದೇಶ ಲೂಟಿ ಮಾಡಿ, ಹಾಳು ಮಾಡಿ ಹೋಗುತ್ತದೆ. ಸದ್ಯಕ್ಕೇ ಅದೇ ಪರಿಸ್ಥಿತಿ ಇದೆ. ಸರ್ಕಾರ ಬಿದ್ದು ಹೋಗುವಂತ ಹಂತಕ್ಕೆ ತಲುಪಿದೆ ಎಂಬುದಾಗಿ ಹೇಳಿದರು.