Breaking News
Home / ರಾಜಕೀಯ / ಜುಲೈ 30 ರ ಒಳಗೆ ಸರ್ಕಾರ ಶಾಲೆ ತೆರೆಯದಿದ್ದರೆ.. ಆಗಸ್ಟ್ 1 ಕ್ಕೆ ನಾವೇ ಆರಂಭಿಸ್ತೇವೆ- ರುಪ್ಸಾ ಎಚ್ಚರಿಕೆ

ಜುಲೈ 30 ರ ಒಳಗೆ ಸರ್ಕಾರ ಶಾಲೆ ತೆರೆಯದಿದ್ದರೆ.. ಆಗಸ್ಟ್ 1 ಕ್ಕೆ ನಾವೇ ಆರಂಭಿಸ್ತೇವೆ- ರುಪ್ಸಾ ಎಚ್ಚರಿಕೆ

Spread the love

ಶಿಕ್ಷಣ ಇಲಾಖೆ ಹಾಗೂ ಸರ್ಕಾರಕ್ಕೆ ರುಪ್ಸಾ ಎಚ್ಚರಿಕೆ ನೀಡಿದ್ದು ಸರ್ಕಾರ ಶಾಲೆ ಆರಂಭಕ್ಕೆ ಅವಕಾಶ ಕೊಟ್ಟಿಲ್ಲ ಅಂದ್ರೆ ತಾವೇ ಸ್ವತಃ ಶಾಲೆ ಆರಂಭಕ್ಕೆ ಸಿದ್ಧ ಎಂದಿದೆ. ತಮ್ಮ ಶಾಲೆಯಲ್ಲಿ ಇರುವ ಪೋಷಕರ ಅಭಿಪ್ರಾಯ ಪಡೆದು ಶಾಲೆ ಆರಂಭಕ್ಕೆ ಚಿಂತನೆ ನಡೆಸಿದ್ದೇವೆ.. ಕಳೆದ ವರ್ಷದ SOPಗೆ ಅನುಗುಣವಾಗಿ ಆಗಸ್ಟ್ 1 ಕ್ಕೆ ಶಾಲೆ ಆರಂಭಿಸುತ್ತೇವೆ ಎಂದಿದೆ.

ಶಾಲೆಗಳ ಆರಂಭಕ್ಕೆ ICMR ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ರುಪ್ಸಾ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯ್ತು.. ರುಪ್ಸಾ ಸುದ್ದಿಗೋಷ್ಠಿಯಲ್ಲಿ, ರುಪ್ಸಾ ಅಧ್ಯಕ್ಷ ಹಲನೂರು ಲೇಪಾಕ್ಷಿ, ರುಪ್ಸಾದ ಗೌರವ ಅಧ್ಯಕ್ಷರು ಮೋಹನ್ ಆಳ್ವಾ ಸೇರಿದಂತೆ ಹಲವರಿದ್ದರು..
RUPSA ಸಂಘಟನೆ ಅಧ್ಯಕ್ಷ ಹಲನೂರು ಲೇಪಾಕ್ಷಿ ಮಾತನಾಡಿ..ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಹಳಿ ತಪ್ಪುತ್ತಿದ್ದರೆ ಶೇ.80 ರಷ್ಟು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ICMR , ದೇವಿಶೆಟ್ಟಿ ವರದಿ ಹಾಗೂ ಟಾಸ್ಕ್ ಫೋರ್ಸ್ ಸಭೆ ಕೂಡ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.. ಜುಲೈ 30 ರ ಒಳಗೆ ಶಾಲೆ ಆರಂಭ ಮಾಡಬೇಕು.. ಇಲ್ಲವಾದ್ರೆ ನಾವೇ ಶಾಲೆ ಆರಂಭಕ್ಕೆ ಮುಂದಾಗುತ್ತೇವೆ. ಗುಜರಾತ್, ತೆಲಂಗಾಣ, ಆಂಧ್ರ, ಒರಿಸ್ಸಾ ಹಾಗೂ ಬೇರೆ ರಾಜ್ಯಗಳಲ್ಲಿ ಶಾಲೆ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಆದ್ರೆ ನಮ್ಮ ರಾಜ್ಯದಲ್ಲಿ ಇನ್ನು ಸರ್ಕಾರ ಮಿನಾಮೇಷ ಎಣಿಸುತ್ತಿದೆ ಎಂದಿದ್ದಾರೆ.

ಗೌರವಾಧ್ಯಕ್ಷ ಮೋಹನ್ ಆಳ್ವಾ ಮಾತನಾಡಿ.. ದೀರ್ಘಕಾಲದವರೆಗೆ ಶಿಕ್ಷಣ ನೀಡುವುದನ್ನ ನಿಲ್ಲಿಸುವುದು ಸರಿಯಲ್ಲ…ಅತಿ ಶೀಘ್ರವಾಗಿ ಶಾಲೆಗಳನ್ನ ಆರಂಭಿಸಬೇಕು.. ಖಾಸಗೀ ಶಿಕ್ಷಣ ಸಂಸ್ಥೆಗಳನ್ನ ಬೇರೆ ರೀತಿಯಾಗಿ ನೋಡುವಂತಾಗಿದೆ. ಖಾಸಗೀ ವಿದ್ಯಾಸಂಸ್ಥೆಗಳಿಗೆ ತನ್ನದೇ ಆದ ಇತಿಹಾಸ ಇದೆ. ನಮಗೂ ಒಂದು ನ್ಯಾಯ ಕೊಡಬೇಕು.. ಖಾಸಗೀ ಶಾಲಾ ವೃಂದ, ಸಿಬ್ಬಂದಿ ಸಂಕಷ್ಟಕ್ಕೀಡಾಗಿದ್ದಾರೆ.. ಇತ್ತೀಚೆಗೆ ಖಾಸಗೀ ಶಿಕ್ಷಣ ಸಂಸ್ಥೆಗಳು ಲಾಬಿ ಅಂತಾ ಹೇಳೋದು, ಕೆಟ್ಟ ಕೆಟ್ಟ ಪದಗಳನ್ನು ಬಳಕೆ ಮಾಡಲಾಗ್ತಿದೆ. ಎಲ್ಲರನ್ನ ಒಂದೇ ತಕ್ಕಡಿಯಲ್ಲಿ ಹಾಕಿ ತೂಗುವುದು ಸರಿಯಲ್ಲ.. ಈ ರೀತಿಯ ವರ್ತನೆಯನ್ನ ಬಿಡಬೇಕು.. ಸರ್ಕಾರ ಈ ಬಗ್ಗೆಯೂ ಗಮನ ಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ