Breaking News
Home / ಜಿಲ್ಲೆ / ಬೆಂಗಳೂರು / ವೀರಶೈವ ಸಮುದಾಯದವರಿಗೇ ಸಿಎಂ ಹುದ್ದೆ ನೀಡಬೇಕು; ಹೋರಾಟದ ಎಚ್ಚರಿಕೆ ನೀಡಿದ ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ

ವೀರಶೈವ ಸಮುದಾಯದವರಿಗೇ ಸಿಎಂ ಹುದ್ದೆ ನೀಡಬೇಕು; ಹೋರಾಟದ ಎಚ್ಚರಿಕೆ ನೀಡಿದ ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ

Spread the love

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪರ ವಿವಿಧ ಸ್ವಾಮೀಜಿಗಳು ಬ್ಯಾಟಿಂಗ್ ಬೀಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರಿನ ಕೊಳದ ಮಠದ ಡಾ.ಶಾಂತವೀರ ಶ್ರೀಗಳು, ಯಡಿಯೂರಪ್ಪ ಬದಲಾವಣೆ ವಿಚಾರ ಕುರಿತು ಊಹಾಪೋಹ ಕೇಳಿ ಬರುತ್ತಿದೆ. ರಾಜ್ಯಕೀಯ ಅನ್ನೋದು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ವೀರಶೈವ ಲಿಂಗಾಯತ ಜನಾಂಗದವರು ಐವತ್ತಕ್ಕು ಹೆಚ್ಚು ಜನ ಸ್ಥಾನದಲ್ಲಿದ್ದಾರೆ. ಸಮುದಾಯವನ್ನು ಕಡೆಗಣಿಸುವ ಕೆಲಸ ಆಗಬಾರದು ಅಂತ ಹೇಳಿದರು.

ನಾಯಕತ್ವ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ನಾಯಕತ್ವ ಸಿಗಬೇಕು ಅಂತ ಬೊಮ್ಮಾಯಿ, ಯತ್ನಾಳ್, ಅರವಿಂದ್ ಬೆಲ್ಲದ್ ಹೆಸರನ್ನು ಪ್ರಸ್ತಾಪ ಮಾಡಿದ ಸ್ವಾಮೀಜಿ, ಇಲ್ಲವಾದರೆ ನಮ್ಮ ಮಠಗಳಿಂದ ಹೋರಾಟ ನಡೆಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಸಾಧು ಸಂತರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತೀವಿ. ಕರ್ನಾಟಕದ ವತಿಯಿಂದ ಸುಮಾರು ಮೂನ್ನೂರರಿಂದ ನಾನೂರು ಸಾಧು ಸಂತರನ್ನು ಸೇರಿಸಿ ಮೋದಿಯನ್ನು ಭೇಟಿ ಮಾಡುತ್ತೇವೆ ಎಂದು ಕೊಳದ ಮಠದ ಡಾ.ಶಾಂತವೀರ ಮಹಾಸ್ವಾಮಿಗಳು ತಿಳಿಸಿದರು.

ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಸಿಎಂ ಹೇಳಿದ್ದಾರೆ. ನಾಯಕತ್ವ ಬದಲಾವಣೆ ಆಗುವುದಾದರೆ ವೀರಶೈವ ಸಮುದಾಯದವರಿಗೇ ಸಿಎಂ ಹುದ್ದೆ ನೀಡಬೇಕು. ಅರವಿಂದ ಬೆಲ್ಲದ್ ಅಥವಾ ಯಾರನ್ನಾದರೂ ಸಿಎಂ ಮಾಡಲಿ. ನಾವು ಯಾರ ಪರವಾಗೂ ಇಲ್ಲ, ವಿರೋಧವಾಗಿಯೂ ಇಲ್ಲ. ವೀರಶೈವ ಧರ್ಮ ಉಳಿಸುವುದಕ್ಕಾಗಿ ನಮ್ಮ ಹೋರಾಟವೆಂದು ಕೊಳದ ಮಠದ ಸ್ವಾಮೀಜಿ ಹೇಳಿದರು.

ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ
ಕಲಬುರಗಿ: ಬಿ.ಎಸ್.ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಅಂತ ಸಗರನಾಡು ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಬಹಳ ಶ್ರಮಿಸಿದ್ದಾರೆ. ವಯಸ್ಸನ್ನು ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಯಾರದೋ ಒತ್ತಡಕ್ಕೆ ಯಡಿಯೂರಪ್ಪರನ್ನು ಬಲಿ ಮಾಡಬಾರದು. ಯಡಿಯೂರಪ್ಪರನ್ನು ಬಲಿ ಮಾಡಿದರೆ ಅದು ಬಿಜೆಪಿಯನ್ನೇ ಬಲಿ ಮಾಡಿದಂತೆ ಎಂದು ಶಿವಮೂರ್ತಿ ಶಿವಾಚಾರ್ಯರು ಹೇಳಿದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ