Breaking News

ಬೆಳಗಾವಿಯಲ್ಲಿ ಅಭಿಮಾನಿ ಕೈಯಿಂದ ಶೂ ಹಾಕಿಸಿಕೊಂಡ ಸಚಿವ ‘ಶ್ರೀಮಂತ’ ಪಾಟೀಲ; ಜನ ವಲಯದಲ್ಲಿ ಆಕ್ರೋಶ

Spread the love

ಬೆಳಗಾವಿ: ಜನಪ್ರತಿನಿಧಿ ಅಂದರೆ ಜನರ ಸೇವಕರು. ಆದರೆ ಸಚಿವ ಶ್ರೀಮಂತ ಪಾಟೀಲ ಮಾತ್ರ ಅಭಿಮಾನಿ ಒಬ್ಬರಿಂದ ಕಾಲಿಗೆ ಶೂ ಹಾಕಿಸಿಕೊಳ್ಳುವ ಮೂಲಕ ವಿವಾದಕ್ಕೀಡಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರು ಗ್ರಾಮದ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ನಿನ್ನೆ (ಜೂನ್ 20) ಮಧ್ಯಾಹ್ನ ತಮ್ಮ ಬೆಂಬಲಿಗರೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಸಚಿವ ಶ್ರೀಮಂತ ಪಾಟೀಲ ಅರ್ಚಕರನ್ನು ಕರೆಸಿ ಬಾಗಿಲು ತೆಗೆಸಿದ್ದಾರೆ. ಮಾತ್ರವಲ್ಲ ಪೂಜೆಯನ್ನೂ ಮಾಡಿಸಿದ್ದಾರೆ.

ಸಚಿವರು ಪೂಜಾ ಕೈಂಕರ್ಯ ಮುಗಿಸಿ ಹೊರಬಂದು ಶೂವಿಗೆ ಕಾಲು ಹಾಕಿದ್ದರಷ್ಟೆ. ಆ ಕ್ಷಣದಲ್ಲಿ ಅಭಿಮಾನಿ ಓಡಿಬಂದು ಸಚಿವರಿಗೆ ಶೂ ಹಾಕಿ ಲೇಸ್ ಕಟ್ಟಿದ್ದಾನೆ. ಸಚಿವರಾಗಲಿ, ಅವರ ಬೆಂಬಲಿಗರಾಗಲಿ ಅದನ್ನು ತಡೆಯುವ ಪ್ರಯತ್ನ ಮಾಡಿಲ್ಲ. ಆದರೆ ಈ ಘಟನೆ ಇದೀಗ ವಿವಾದಕ್ಕೀಡಾಗಿದೆ.

ಯುವಕನೇನೋ ಅಭಿಮಾನದಿಂದ ಶೂ ಹಾಕಿದ. ಆದರೆ ಸಚಿವರಾಗಿ ಅದನ್ನು ಮಾಡಿಸಿಕೊಳ್ಳುವುದು ಎಷ್ಟು ಸರಿ ಅಂತ ಸಾರ್ವಜನಿಕರು ಚರ್ಚಿಸುವಂತಾಗಿದೆ. ಅಲ್ಲದೆ ಇಲ್ಲಿ ಶೂ ಹಾಕಿರುವುದು ಸಚಿರ ಬೆಂಬಲಿಗರಲ್ಲ. ಬದಲಿಗೆ ಒಬ್ಬ ಅಭಿಮಾನಿ ಎಂಬುದು ಗಮನಾರ್ಹ. ಅದರ ಜೊತೆಗೆ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗಿ ಬಾಗಿಲು ತೆಗೆಸಿ ಸರ್ಕಾರದ ಆದೇಶವನ್ನು ಸಚಿವರೇ ಗಾಳಿಗೆ ತೂರಿದ್ದಾರೆ.


Spread the love

About Laxminews 24x7

Check Also

ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ

Spread the love ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಟೀಕೆಗಳು ಸಾಯುತ್ತವೆ; ಕೆಲಸಗಳು ಉಳಿಯುತ್ತವೆ; ಕಲ್ಲಪ್ಪ ಬಡಿಗೇರ ವಿಶ್ವಕರ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ