Breaking News

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ L& T ಕಂಪನಿಯ ಆಕ್ಸೀಜನ್ ಘಟಕ ಇಂದಿನಿಂದ ಸೇವೆಗೆ ಸಮರ್ಪಣೆ

Spread the love

ಬೆಳಗಾವಿ- ಇನ್ನು ಮುಂದೆ ಬೆಳಗಾವಿಯಲ್ಲಿ ಎಂದಿಗೂ ಆಕ್ಸೀಜನ್ ಸಮಸ್ಯೆ ಎದುರಾಗುವದಿಲ್ಲ,ಯಾಕಂದ್ರೆ ಶಾಸಕ ಅಭಯ ಪಾಟೀಲ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ L& T ಕಂಪನಿಯ ಆಕ್ಸೀಜನ್ ಘಟಕ ಇಂದಿನಿಂದ ಸೇವೆಗೆ ಸಮರ್ಪಣೆಯಾಗಿದೆ.

ಬೆಳಗಾವಿಯಲ್ಲಿ ಆಮ್ಲಜನಕ ಕೊರತೆನ್ನು ಗಮನಿಸಿದ ಶಾಸಕ, ಅಭಯ ಪಾಟೀಲ ರವರು ಆಮ್ಲಜನಕ ತಯಾರಿಕಾ ಘಟವನ್ನು ಸ್ಥಾಪಿಸುವಂತೆ ಎಲ್&ಟಿ ಕಂಪನಿಯ ಅವರಿಗೆ ವೈಯಕ್ತಿಕವಾಗಿ ವಿನಂತಿಸಿದ್ದರು. ಅದಕ್ಕೆ ಸ್ಪಂದಿಸಿರುವ L&T ಕಂಪನಿ ನಿಗದಿತ ಅವಧಿಯಲ್ಲಿ ಆಮ್ಲಜನಕ. ಘಟಕವನ್ನು ಸ್ಥಾಪಿಸಿದೆ.

ಪ್ರತಿ ನಿಮಿಷಕ್ಕೆ 700 ಲಿಟರ ಅಂದರೆ (50 ರಿಂದ 60 ಹಾಸಿಗೆಗಳಿಗೆ 24 ಗಂಟೆಗಳ ಕಾಲ) ಆಮ್ಲಜನಕ ಪೂರೈಕೆ ಮಾಡುವಂತ ಘಟಕ ಇದಾಗಿದೆ. ಕರ್ನಾಟಕದಲ್ಲಿ ಮೊದಲನೆಯ ಭಾರಿಗೆ ಸಿಎಸ್ಆರ್ ಅನುದಾನ ಉಪಯೋಗಿಸಿ, ಎಲ್&ಟಿ ಕಂಪನಿಯ ಅವರಿಂದ ಆಮ್ಲಜನಕ ತಯಾರಿಕಾ ಘಟಕವನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಕಾರಣಿಭೂತರಾದ ಶಾಸಕ ಅಭಯ ಪಾಟೀಲ ರವರು ಎಲ್&ಟಿ ಅಧಿಕಾರಿಗಳಿಗೆ ಅಭಿನಂದಿಸಿದ್ದಾರೆ.

ಕಾಮಗಾರಿಗೆ ಶಂಖುಸ್ಥಾಪನೆ ಮಾಡಿದ ಬಳಿಕ ಕೇವಲ 25 ದಿನಗಳಲ್ಲಿ ಆಮ್ಲಜನಕ ತಯಾರಿಕಾ ಘಟಕ ಕಾರ್ಯಾರಂಭ ಮಾಡಿರುವುದು ಒಂದು ದಾಖಲೆಯಾಗಿದೆ.


Spread the love

About Laxminews 24x7

Check Also

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ: ಸಚಿವ ಮುನಿಯಪ್ಪ

Spread the loveಬೆಳಗಾವಿ: ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ