ಬೆಂಗಳೂರು: ಎಎಸ್ಐ ಒಬ್ಬರು 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಎಸ್ಐ ದಯಾನಂದ ತನ್ನಿಂದ 5 ಲಕ್ಷ ರೂಪಾಯಿ ಲಂಚ ಪಡೆದುಕೊಂಡಿರುವುದಾಗಿ ಆರೋಪಿಸಿ ಈ ಬಗ್ಗೆ ಸ್ವತ: ಭರತ್ ಶೆಟ್ಟಿ ಸಿಸಿಟಿವಿ ವಿಡಿಯೋ ಸಮೇತ ಎಎಸ್ಐ ವಿರುದ್ಧ ಕೋಡಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.
ಉದ್ಯಮಿ ಭರತ್ ಶೆಟ್ಟಿ ವಿರುದ್ಧ ಮಲ್ಲೇಶ್ವರಂ ವ್ಯಕ್ತಿಯೊಬ್ಬರು ನಿವೇಶನ ವಂಚನೆ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು ಎಎಸ್ಐ ದಯಾನಂದ್ ಭರತ್ ಶೆಟ್ಟಿಗೆ 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ತಾನು ಈಶಾನ್ಯ ಭಾಗದ ಡಿಸಿಪಿ ಆಪ್ತ ಎಂದು ಹೇಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಲಂಚದ ಮುಂಗಡ ಹಣವಾಗಿ 5 ಲಕ್ಷ ರೂಪಾಯಿ ಹಣವನ್ನು ದಯಾನಂದ ಪಡೆದುಕೊಂಡಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಣ ಪಡೆಯುತ್ತಿರುವ ವಿಡಿಯೋ ಸಮೇತ ಎಎಸ್ಐ ವಿರುದ್ಧ ಭರತ್ ಶೆಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Laxmi News 24×7