Breaking News

ಜಾಮೀನು ಸಿಕ್ಕರೂ ಬಂಧನದ ಭೀತಿಯಲ್ಲಿ ಸಿಡಿ ಗ್ಯಾಂಗ್!

Spread the love

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಬ್ಲ್ಯಾಕ್ ಮೇಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲ್ ಪಡೆದ ಆರೋಪಿಗಳಿಗೆ ಈಗ ನಡುಕ ಶುರುವಾಗಿದೆ. ಕೋರ್ಟ್ ನೀಡಿದ ಆದೇಶ ಪ್ರತಿಯಿಂದ ಗಾಬರಿಯಾಗಿರೋ ಆರೋಪಿಗಳು ತನಿಖಾಧಿಕಾರಿಯ ಮುಂದೆ ಹೋಗಬೇಕಾ ಎಂದು ಯೋಚಿಸುತ್ತಿದ್ದಾರೆ.

ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಕ್ಕರೂ ತನಿಖಾಧಿಕಾರಿಗೆ ಅಗತ್ಯ ಬಿದ್ದರೆ ಬಂಧಿಸಲು ಸ್ವತಂತ್ರ ನೀಡಿ ಕೋರ್ಟ್ ಆದೇಶವನ್ನು ನೀಡಿದೆ. ಈ ಮೂಲಕ ಜೂನ್ 12ರೊಳಗೆ ಬರಲು ಶುರುವಾಗಿದೆ ಭಯ. ಮತ್ತೊಂದೆಡೆ ತನಿಖಾಧಿಕಾರಿ ಮುಂದೆ ಹಾಜರಾಗಲೇ ಬೇಕು ಅಂದಿದೆ. ಇನ್ನೊಂದು ಕಡೆ ತನಿಖಾಧಿಕಾರಿಯ ಸ್ವತಂತ್ರವನ್ನು ನೀಡಿದೆ. ಈ ಎರಡು ವಿಚಾರಗಳಿಂದ ಗೊಂದಲದಲ್ಲಿ ಆರೋಪಿಗಳಾದ ನರೇಶ್ ಗೌಡ & ಶ್ರವಣ್ ವಿಚಾರಣೆಗೆ ಹಾಜರಾಗಬೇಕು ಅನ್ನೋ ಅನಿವಾರ್ಯ ಎದುರಾಗಿದೆ.

ವಿಚಾರಣೆಗೆ ಬರುವ ಆರೋಪಿಗಳ ವಿಚಾರಣೆಗೆ ತನಿಖಾಧಿಕಾರಿಗಳು ತಯಾರಿಯನ್ನು ನಡೆಸಿಕೊಂಡಿದ್ದಾರೆ. ತನಿಖಾಧಿಕಾರಿ ಧರ್ಮೇಂದ್ರ ಅವರಿಂದ ವಿಚಾರಣೆ ನಡೆಯಲಿದೆ ಮೊದಲ ದಿನ ಏನನ್ನು ಕೇಳಬೇಕು ಅಂತಾ ಎಸ್‍ಐಟಿ ರೆಡಿ ಮಾಡಿಕೊಂಡಿದೆ.

ರಮೇಶ್ ಜಾರಕಿಹೊಳಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗುವ ಮುನ್ನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಬ್ಲ್ಯಾಕ್‍ಮೇಲ್ ಕೇಸ್ ದಾಖಲು ಮಾಡಿದ್ರು. ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‍ಐಟಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿತ್ತು.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ