Breaking News

ದಲಿತ ಯುವಕನ ಮೇಲೆ ದೌರ್ಜನ್ಯ ಪ್ರಕರಣ : ಗೋಣಿಬೀಡು ಪಿಎಸ್ ಐ ಅರ್ಜುನ್ ಅಮಾನತು

Spread the love

ಚಿಕ್ಕಮಗಳೂರು; ಮೂಡಿಗೆರೆ ತಾಲ್ಲೂಕು ಗೋಣಿಬೀಡು ಪೋಲಿಸ್ ಠಾಣೆ ವ್ಯಾಪ್ತಿಯ ಕಿರುಗುಂದ ಪರಿಶಿಷ್ಟ ಜಾತಿ ಯುವಕನ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಬೀಡು ಪೋಲಿಸ್ ಠಾಣೆ ಪಿಎಸ್ ಐ ಅರ್ಜುನ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ, ಸದ್ಯ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ.

ಕಿರಗುಂದ ಗ್ರಾಮದ ಪರಿಶಿಷ್ಟ ಜಾತಿ ಯುವಕ ಪುನೀತ್ ಎಂಬುವನನ್ನು ಮೇ 10 ರಂದು ಯಾವುದೇ ದೂರು ದಾಖಲಿಸಿಕೊಳ್ಳದೆ. ಪೋಲಿಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ಪಿಎಸ್ ಐ ಅರ್ಜುನ್, ಯುವಕ ಕುಡಿಯಲು ನೀರು ಕೇಳಿದಾಗ ಮತ್ತೋಬ್ಬ ಆರೋಪಿಯ ಮೂತ್ರ ಕುಡಿಸಿದ್ದಾರೆ. ಮತ್ತು ನಕ್ಕಿದ್ದಾರೆ ಎಂದು ಪರಿಶಿಷ್ಟ ಜಾತಿ ಯುವಕ ಪುನೀತ್ ಆರೋಪಿಸಿ ಮೇ.22 ರಂದು ಗೋಣಿಬೀಡು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

 

ಈ ಕುರಿತು ದೂರು ದಾಖಲಿಸಿಕೊಂಡ ಪೋಲಿಸರು ಪಿಎಸ್‌ಐ ಅರ್ಜುನ್ ಅವರನ್ನು ದಕ್ಷಿಣ ವಲಯದ ಐಜಿಯವರ ಮಾರ್ಗದರ್ಶನ ದಂತೆ ಅರ್ಜುನ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವರ್ಗಾವಣೆ ಮಾಡಿ ಅಮಾನತುಗೊಳಿಸಿದ್ದಾರೆ.

ಹಾಗೂ ಈ ಪ್ರಕರಣವನ್ನು ಪುತ್ತೂರು ಡಿವೈಎಸ್ ಪಿ ನೇತ್ರತ್ವದಲ್ಲಿ ಇಲಖೆ ತನಿಖೆಗೆ ಒಪ್ಪಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಎಲ್ಲ ಧರ್ಮಕ್ಕಿಂತ ಮಾನವ ಧರ್ಮವೇ ಮೇಲು: ಸಿಎಂ

Spread the loveಮೈಸೂರು: ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮ ಯಾವುದಯ್ಯ ಎಂದು ಬಸವಣ್ಣನವರು ಧರ್ಮದ ಕುರಿತು ವ್ಯಾಖ್ಯಾನ ಮಾಡಿದ್ದಾರೆ. ಎಲ್ಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ