ನವದೆಹಲಿ : ಸಾಲ ಹಾಗೂ ಅದರ ವಸೂಲಿಯ ಕುರಿತು ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂಕೋರ್ಟ್.
ಸಾಲ ಮರುಪಾವತಿಸದವರ ಪರವಾಗಿ ಜಾಮೀನು ನೀಡಿದವರು ಸಾಲಕ್ಕೆ ಹೊಣೆಗಾರರು ಎಂದ ಸುಪ್ರೀಂಕೋರ್ಟ್.
ಸಾಲ ತೆಗೆದುಕೊಂಡವರು ಅದನ್ನು ಮರು ಪಾವತಿಸದಿದ್ದರೆ ಅದಕ್ಕೆ ಜಾಮೀನು ನೀಡಿದವರು ಕೂಡ ಹೊಣೆಗಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ . ಈ ಸಂಬಂಧ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ .
ಮುಖ್ಯವಾಗಿ ಕಾರ್ಪೋರೇಟ್ ಸಂಸ್ಥೆಗಳ ಸಾಲ ವಸೂಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ . ಕಾರ್ಪೋರೇಟ್ ಸಂಸ್ಥೆಗಳು ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ಮರು ಪಾವತಿಸದ ಕಾರಣ ಬ್ಯಾಂಕ್ ಗಳು ಬಿಕ್ಕಟ್ಟು ಎದುರಿಸುತ್ತಿವೆ . ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ ಎನ್ನಲಾಗುತ್ತಿದೆ.
Laxmi News 24×7