Breaking News

ಸೋನು ಸೂದ್ ಮೋಸಗಾರ ಎಂಬ ಟ್ವಿಟ್ಟರ್ ಪೋಸ್ಟ್ ಗೆ ಲೈಕ್ ಕೊಟ್ಟು ಟ್ರೋಲ್ ಆದ ಕಂಗನಾ..!

Spread the love

ನವದೆಹಲಿ : ನಟಿ ಕಂಗನಾ ರಣಾವತ್ ಸುಖಾಸುಮ್ಮನೆ ತನಗೆ ಸಂಬಂಧವಿಲ್ಲದೇ ಇರುವ ವಿಚಾರವಾಗಿ ಮಾತನಾಡಿ ಟ್ವೀಟ್ ಮಾಡಿ ಸದಾ ಕಾಂಟ್ರವರ್ಸಿ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಎಲ್ಲಾ ವಿಚಾರಗಳಲ್ಲೂ ಮೂಗು ತೂರಿಸಿ ವಿವಾದ ಮೈಮೇಲೆ ಎಳೆದುಕೊಳ್ಳುವ ಕಂಗನಾ ಅನೇಕ ಶತ್ರುಗಳನ್ನ ಸಂಪಾದಿಸಿಕೊಂಡಿದ್ಧಾರೆ. ಬಹುತೇಕ ಎಲ್ಲಾ ತಾರಯರ ಜೊತೆಗೂ ಕಂಗನಾ ಕಿರಿಕ್ ಮಾಡಿಕೊಂಡಿದ್ದಾರೆ. ಹಾಗೆಯೇ ಬಡವರ ಪಾಲಿನ ರಿಯಲ್ ಹೀರೋ ಸೋನು ಸೂದ್ ಜೊತೆಗೂ ಗಲಾಟೆ ಮಾಡಿಕೊಂಡು ಸೋನು ಸೂದ್ ಅವರನ್ನ ಮಣಿಕರ್ಣಿಕಾ ಸಿನಿಮಾದಿಂದಲೇ ಹೊರಹಾಕಿಸಿದ್ದವರು ಕಂಗನಾ.

ಆ ನಂತರ ಸೋನು ಸೂದ್ ಹಾಗೂ ಕಂಗನಾ ಪರಸ್ಪರ ಶತ್ರುಗಳಾಗಿದ್ದಾರೆ. ಇದೀಗ ಸೋನು ಸೂದ್ ಬಡವರ ಪಾಲಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ಧಾರೆ. ಆದ್ರೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋನು ವಿರುದ್ಧ ಟ್ವೀಟ್ ಮಾಡಲಾರಂಭಿಸಿದ್ದಾರೆ. ಇದೀಗ ಸೋನು ಸೂದ್ ವಿರುದ್ಧ ಮಾಡಲಾಗಿದ್ದ ಟ್ವೀಟ್ ಗೆ ಕಂಗನಾ ಲೈಕ್ ಮಾಡುವ ಮೂಲಕ ಸೋನು ಅಭಿಮಾನಿಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕೋವಿಡ್-19 ಪರಿಸ್ಥಿತಿಯನ್ನು ಬಳಸಿಕೊಂಡು ಸೋನು ಸೂದ್ ದುಡ್ಡು ಮಾಡುತ್ತಿದ್ದಾರೆ. ಅವರೊಬ್ಬ ಮೋಸಗಾರ ಎಂದು ಬರೆದಿರುವ ಟ್ವಿಟ್ಟರ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ಪೋಸ್ಟ್ ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಲೈಕ್ ಮಾಡುವ ಮೂಲಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಮೈಥುಲ್ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಅದರಲ್ಲಿ ಸೋನುಸೂದ್ ವಂಚಕ, ಮೋಸಗಾರ ಎಂದು ಬರೆಯಲಾಗಿದೆ. ಅಲ್ಲದೆ ಇತ್ತೀಚಿಗೆ ಸೋನು ಸೂದ್ ಅವರ ಆಕ್ಸಿಜನ್ ಸಾಂದ್ರಕದ ಜಾಹಿರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಜಾಹೀರಾತಿನಲ್ಲಿ ಆಕ್ಸಿಜನ್ ಸಾಂದ್ರಕದ ಬೆಲೆ 2 ಲಕ್ಷ ಎಂದು ಉಲ್ಲೇಖಿಸಲಾಗಿದೆ. ಈ ಜಾಹೀರಾತಿನ ಪೋಸ್ಟರಿಗಾಗಿ ಸೋನು ಸೂದ್ ಅವರನ್ನು ಕೆಲವರು ಟ್ರೋಲ್ ಮಾಡುತ್ತಿದ್ದು, ಈ ಜಾಹಿರಾತಿನ ಸ್ಕ್ರೀನ್ ಶಾಟ್ ಅನ್ನು ಕಂಗನಾ ರಣಾವತ್ ಲೈಕ್ ಮಾಡಿದ್ದಾರೆ.

ಮತ್ತೊಂದೆಡೆ ನೆಟ್ಟಿಗರು ಕಂಗನಾರನ್ನ ಹಿಗ್ಗಾ ಮುಗ್ಗಾ ಜಾಡಿಸುತ್ತಿದ್ದಾರೆ. ನೀವಂತೂ ಸಹಾಯ ಮಾಡಲ್ಲ.. ದುಡ್ಡೆಲ್ಲಾ ಕೂಡಿಟ್ಟುಕೊಂಡು ಜನರು ಸಂಕಷ್ಟದಲ್ಲಿರುವಾದ ಬರಿ ಸೋಷಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದ್ದೀರಾ. ನಿಮ್ಮಿಂದ ಆದ್ರೆ ಸಹಾಯ ಮಾಡಿ ಇಲ್ಲ ಸುಮ್ಮನಿರಿ ಇತರರ ಕೆಲಸವನ್ನ ಹೀಯಾಳಿಸಬೇಡಿ ಎಂದು ಗರಂ ಾಗಿ ಟ್ರೋಲ್ ಮಾಡ್ತಿದ್ದಾರೆ.


Spread the love

About Laxminews 24x7

Check Also

ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿ

Spread the loveಇಂದು ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ “72ನೇ ಸಹಕಾರ ಸಪ್ತಾಹ” ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ