Breaking News

ಚೆನ್ನೈ ಸೂಪರ್​ ಕಿಂಗ್ಸ್​ಗೆ ರಾಜಸ್ಥಾನ್​​ ಸವಾಲ್​; ಗೆದ್ದವರ ಹೋರಾಟದಲ್ಲಿ ಯಾರಿಗೆ ಗೆಲುವು..?

Spread the love

ದಿನೇ ದಿನೇ ಕಲರ್​​​​​​​​​​​​​​​​​​​​​​​​​​​​​​ಫುಲ್​ ಲೀಗ್​ನ​​ ರೋಚಕತೆ ಹೆಚ್ಚಾಗ್ತಿದೆ. ಇಂದು ಮತ್ತೊಂದು ಹೈವೋಲ್ಟೇಜ್​​​ ಮ್ಯಾಚ್​​ಗೆ ವಾಖೆಂಡೆ ಸಜ್ಜಾಗಿದ್ದು, ಇಂದಿನ ಕದನದಲ್ಲಿ ರಾಜಸ್ಥಾನ್​ ರಾಯಲ್ಸ್​, ಚೆನ್ನೈ ಸೂಪರ್​ ಕಿಂಗ್ಸ್​​ ಮುಖಾಮುಖಿಯಾಗಲಿವೆ. ಕಳೆದ ಪಂದ್ಯದಲ್ಲಿ ಗೆದ್ದಿರುವ ಉಭಯ ತಂಡಗಳು, ಗೆಲುವಿನ ಓಟ ಮುಂದುವರಿಸುವ ಲೆಕ್ಕಚಾರದಲ್ಲಿವೆ.

ಡೆಲ್ಲಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಚೆನ್ನೈ ಪಂಜಾಬ್​​ ಕಿಂಗ್ಸ್​​ ವಿರುದ್ಧ ಗೆದ್ದು ಬೀಗಿದೆ. ಇದೀಗ ರಾಜಸ್ಥಾನ್​​ ರಾಯಲ್ಸ್​​​ ವಿರುದ್ಧವೂ ಅದೇ ಗೆಲುವಿನ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ. ಪಂಜಾಬ್​ ವಿರುದ್ಧ ಸರ್ವಾಂಗೀಣ ಪ್ರದರ್ಶನ ನೀಡಿದ್ದ ಚೆನ್ನೈ, ರಾಯಲ್ಸ್​ ವಿರುದ್ಧ ತನ್ನದೇ ಆದ ಸ್ಟ್ರಾಟರ್ಜಿ ರೂಪಿಸಿಕೊಂಡು ಕಣಕ್ಕಿಳಿಯುತ್ತಿದೆ. ಆದ್ರೆ ಕೆಲ ಆಟಗಾರರ ವೈಫಲ್ಯ ನಾಯಕ ಮಹೇಂದ್ರ ಸಿಂಗ್​ ಧೋನಿಯ ತಲೆಬಿಸಿ ಹೆಚ್ಚಿಸಿದೆ.

ಸಿಎಸ್​ಕೆಗೆ ತಲೆನೋವು
ಕಳೆದೆರೆಡು ಪಂದ್ಯಗಳಿಂದ ಆರಂಭಿಕರಿಂದ ಉತ್ತಮ ಆರಂಭ ಬಂದಿಲ್ಲ. ಪ್ರಮುಖವಾಗಿ ಯುವ ಆಟಗಾರ ರುತುರಾಜ್​ ಗಾಯಕ್ವಾಡ್​ ವೈಫಲ್ಯ ತಂಡದ ಹಿನ್ನಡೆಗೆ ಕಾರಣವಾಗಿದೆ. ಜೊತೆಗೆ ಮಧ್ಯಮ ಕ್ರಮಾಂಕದಲ್ಲಿ ಅಂಬಟಿ ರಾಯುಡು, ಧೋನಿಯ ಕಳಪೆ ಆಟ, ಶಾರ್ದೂಲ್​ ಠಾಕೂರ್​ ದುಬಾರಿ ಸ್ಪೆಲ್​ ತಂಡಕ್ಕೆ ತಲೆನೋವು ತಂದಿದೆ. ಇಂದಿನ ಪಂದ್ಯದಲ್ಲಿ ಈ ವೈಫಲ್ಯಗಳನ್ನ ಮೆಟ್ಟಿ ನಿಲ್ಲಬೇಕಾದ ಸವಾಲು ಸಿಎಸ್​ಕೆ ಮುಂದಿದೆ.

ಕೆಲ ಆಟಗಾರರ ವೈಫಲ್ಯದ ನಡುವೆ ಮೊಯಿನ್​ ಆಲಿ, ಸುರೇಶ್​​ ರೈನಾ, ಸ್ಯಾಮ್​ ಕರನ್​ ಪ್ರದರ್ಶನ ಕೊಂಚ ನಿರಾಳತೆ ತಂದಿದೆ. ಇದಲ್ಲದೇ ವೇಗಿ ದೀಪಕ್​ ಚಹರ್​ ಉತ್ತಮ ಲಯ ಹಾಗೂ ಆಲ್​ರೌಂಡರ್ ರವೀಂದ್ರ​ ಜಡೇಜಾ, ಡ್ವೇನ್​​​ ಬ್ರಾವೋ ಎಕಾನಮಿಕಲ್​ ಸ್ಪೆಲ್​ ಬೌಲಿಂಗ್​ ವಿಭಾಗದ ಪ್ಲಸ್​​​ ಪಾಯಿಂಟ್​​ ಆಗಿದೆ. ಕಳೆದ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಪ್ರದರ್ಶಿಸಿದ್ದ ಆಟ ಆಡಿದರೇ ಗೆಲುವು ಅಸಾಧ್ಯವೇನಲ್ಲ.

ಗೆಲುವಿನ ನಡುವೆ ಸಂಜುಗೆ ಕಾಡ್ತಿದೆ ತಂಡದಲ್ಲಿನ ಸಮಸ್ಯೆ.
ಪಂಜಾಬ್​​ ಕಿಂಗ್ಸ್​​​ ವಿರುದ್ಧ ಹೋರಾಡಿ ಸೋತಿದ್ದ ರಾಜಸ್ಥಾನ್​​ ರಾಯಲ್ಸ್​​ ಡೆಲ್ಲಿ ವಿರುದ್ಧ ಬೌಲರ್​ಗಳ ಸಂಘಟಿತ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ತಂಡಕ್ಕೆ ಬ್ಯಾಟಿಂಗ್​​ ಹೊರೆಯಾಗಿತ್ತಾದರೂ ಅಂತಿಮ ಹಂತದಲ್ಲಿ ಡೇವಿಡ್​​​ ಮಿಲ್ಲರ್​, ಕ್ರಿಸ್​​​ ಮಾರಿಸ್​​ ಸ್ಪೋಟಕ ಆಟ ತಂಡವನ್ನ ಗೆಲುವಿನ ದಡ ಸೇರಿಸಿತ್ತು. ಹೀಗಾಗಿ ಇಂದು ಯೆಲ್ಲೋ ಆರ್ಮಿ ವಿರುದ್ಧ ರಾಜಸ್ಥಾನ್​ ರಾಯಲ್ಸ್​​ ಗೆಲ್ಲೋದು ದೊಡ್ಡ ಸವಾಲೇ ಆಗಿದೆ.

ಆರ್​ಆರ್​ ಸಮಸ್ಯೆ ಏನು..?
ಕಳೆದೆರೆಡು ಪಂದ್ಯಗಳಿಂದ ಉತ್ತಮ ಆರಂಭ ಕಂಡುಕೊಳ್ಳುವಲ್ಲಿ ವಿಫಲವಾಗಿರೋ ರಾಜಸ್ಥಾನಕ್ಕೆ ಜೋಸ್​ ಬಟ್ಲರ್​, ಮನನ್​ ವೋಹ್ರಾ ವೈಫಲ್ಯ ತಲೆನೋವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಶಿವಂ ದುಬೆ, ರಿಯಾನ್​ ಪರಾಗ್​ ಜೊತೆಗೆ ರಾಹುಲ್​ ತೆವಾಟಿಯಾ ವೈಫಲ್ಯ ತಂಡದ ಬ್ಯಾಟಿಂಗ್​ ಶಕ್ತಿಯನ್ನ ಕುಂದಿಸಿದೆ. ಅನುಭವಿ ಸ್ಪಿನ್ನರ್​ಗಳ ಕೊರತೆಯ ಜೊತೆಗೆ ವೇಗಿ ಮುಸ್ತಾಫಿಜುರ್​ ರೆಹಾಮಾನ್​ ದುಬಾರಿ ಆಟವೂ ಸಂಜು ತಲೆನೋವಿಗೆ ಕಾರಣವಾಗಿದೆ.

ಆದ್ರೆ, ಮೊದಲ ಪಂದ್ಯದಲ್ಲಿ ಕಿಲ್ಲರ್​ ಮಿಲ್ಲರ್​ ಹಾಗೂ ಕ್ರಿಸ್​ ಮಾರಿಸ್​ ಬ್ಯಾಟಿಂಗ್​ ಸಂಜು ಆತ್ಮವಿಶ್ವಾಸ ಹೆಚ್ಚಿಸಿದೆ. ಚೇತನ ಸಕಾರಿಯಾ ಜೊತೆಗೆ ಜೈದೇವ್​ ಉನಾದ್ಕತ್​ರ ಉತ್ತಮಲಯ ತಂಡಕ್ಕೆ ಬಲ ತುಂಬಿದೆ. ಆದ್ರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿರುವ ರಾಜಸ್ಥಾನ್​ ರಾಯಲ್ಸ್​ ಚೆನ್ನೈ ಸೂಪರ್​ ಕಿಂಗ್ಸ್​ ಮಣಿಸಲು ಸೂಪರ್​ ಆಟವನ್ನೇ ಆಡಬೇಕಿದೆ.

ಉಭಯ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿಯೇ ಕಾಣುತ್ತಿವೆ. ಆದ್ರೆ ಚಾಣಾಕ್ಷ ಧೋನಿ ಎದುರು ಚೊಚ್ಚಲ ನಾಯಕತ್ವವಹಿಸಿರುವ ಸಂಜು ಯಾವ ರೀತಿಯ ಸ್ಟ್ರಾಟಜಿ, ಗೇಮ್​ಪ್ಲಾನ್​ ಮಾಡ್ತಾರೆ ಕಾದುನೋಡಬೇಕಿದೆ.


Spread the love

About Laxminews 24x7

Check Also

ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು!

Spread the love ಹುದಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಹಾದಿಯಲ್ಲಿ ಹೊಸ ಬೆಳಕು! ಯಮಕನಮರಡಿ ವಿಧಾನಸಭಾ ಕ್ಷೇತ್ರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ