Breaking News

ರಸ್ತೆಯಲ್ಲಿ ಹೋಗೋ ಕುಡುಕ ಮಾತನಾಡುವ ಹಾಗೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಈಶ್ವರಪ್ಪ

Spread the love

ಶಿವಮೊಗ್ಗ : ವಿರೋಧ ಪಕ್ಷ ಇರೋದೇ ಟೀಕೆ ಮಾಡೋಕೆ ಅವರ ಕೆಲಸಾನೇ ಅದು. ವಿರೋಧ ಪಕ್ಷ ಅಡಳಿತ ಪಕ್ಷ ಒಳ್ಳೆಯ ಕೆಲಸ ಮಾಡಿದೇ ಎಂದು ಅಭಿನಂದಿಸಲು ಸಾಧ್ಯವೇ ‌.?? ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.

ನಗರದಲ್ಲಿ ಮಾತಾನಾಡಿದ ಅವರು, ವಿರೋಧ ಪಕ್ಷದ ಟೀಕೆಗಳನ್ನುಗುಣಾತ್ಮಕವಾಗಿ ಸ್ವಾಗತಿಸುತ್ತೇವೆ. ಟೀಕೆ ಸರಿ ಇದ್ದರೇ ತಿದ್ದಿಕೊಳ್ಳುತ್ತೇವೆ. ವಿರೋಧ ಪಕ್ಷದವರು ಎಲ್ಲದಕ್ಕೂ ಟೀಕೆ ಮಾಡುವುದೇ ಅವರ ಕೆಲಸ ಅಂಥ ಅಂದುಕೊಂಡಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಅವರ ಸಲಹೆ- ಸೂಚನೆಗಳನ್ನು ಸ್ವೀಕರಿಸುತ್ತೇವೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ನವರಿಗೆ ತಲೆಕೆಟ್ಟಿದೆ. ವಿರೋಧ ಪಕ್ಷ ನಾಯಕನಾಗಿ ನಾನು ಜೀವಂತವಾಗಿದ್ದೇನೆ ಎಂದು ತೋರಿಸಿಕೊಳ್ಳಲು ಟೀಕೆ ಮಾಡುತ್ತಿದ್ದಾರೆ.ಸಿಎಂ ಆಸ್ಪತ್ರೆಯಲ್ಲಿದ್ದರೂ ಕೆಲಸ ಮಾಡುತ್ತಿರುವುದು ಈಡೀ ರಾಜ್ಯಕ್ಕೆ ಗೊತ್ತಿದೆ. ಸಿಎಂ ಜೊತೆಗೆ ಸರ್ಕಾರವನ್ನು ಟೀಕೆ ಮಾಡುವ ಇವರು ಕೂಡ ಸಿಎಂ ಅಗಿದ್ರಲ್ಲಾ ಅನ್ನೋದು ನನ್ನ ನೋವು ಎಂದು ವಾಗ್ದಾಳಿ ನಡೆಸಿದರು.

ಹಿಂದೆ ಸಿಎಂ ಆಗಿದ್ದ ಹಲವರು ಕೋವಿಡ್ ನಿಯಂತ್ರಣಕ್ಕೆ ಸಲಹೆಗಳನ್ನು ಕೊಡುತ್ತಿದ್ದಾರೆ. ಆದರೆ ಇವರು ಆ ಘನತೆಯನ್ನೇ ಮರೆತಿದ್ದಾರೆ. ರಸ್ತೆಯಲ್ಲಿ ಹೋಗೋ ಕುಡುಕ ಮಾತನಾಡುವ ಹಾಗೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಆಗೋಕೆ, ವಿರೋಧ ಪಕ್ಷದ ನಾಯಕ ಆಗೋಕು ಆಯೋಗ್ಯ‌.ಇದೇ ಕಾರಣಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರೇ ಸೋಲಿಸಿ, ಸರ್ಕಾರ ಕೆಡವಿದರು. ಇದನ್ನೇಲ್ಲಾ ಮರೆತು ಈಗ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


Spread the love

About Laxminews 24x7

Check Also

ನೀತಿ ಆಯೋಗದಿಂದ ಕಾಳಗಿಗೆ 2ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ ಘೋಷಣೆ: ಸಚಿವ ಪ್ರಿಯಾಂಕ್ ಖರ್ಗೆ ಹರ್ಷ

Spread the loveನೀತಿ ಆಯೋಗದಿಂದ ಕಾಳಗಿಗೆ 2ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ ಘೋಷಣೆ: ಸಚಿವ ಪ್ರಿಯಾಂಕ್ ಖರ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ