ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 10ನೇ ಪಂದ್ಯವು ಇಂದು ಚೆನ್ನೈನ ಎಮ್.ಎ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿದೆ.
ಎರಡು ಪಂದ್ಯಗಳನ್ನು ಗೆದ್ದಿರುವ ರಾಯಲ್ ಚಾಲೆಂಜರ್ಸ್, ಕೋಲ್ಕತ್ತಾ ವಿರುದ್ಧ ಸೆಣೆಸಾಡುತ್ತಿದೆ.
ಹತ್ತು ರನ್ ಗಳಿಸಸೋ ಮೊದಲೇ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆರ್‌ಸಿಬಿ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಆಸರೆಯಾಗಿ ನಿಂತು 49 ಎಸೆತಗಳಲ್ಲಿ 9 ಫೋರ್ ಮತ್ತು 3 ಸಿಕ್ಸರ್ ಬಾರಿಸಿ ತಂಡಕ್ಕೆ ಬೃಹತ್ ಮೊತ್ತ ತಂದುಕೊಟ್ಟರು.
ಮ್ಯಾಕ್ಸ್‌ವೆಲ್ ಗರ್ಜಿಸಿದ ಬಳಿಕ ಎಬಿ ಡಿ’ವಿಲಿಯರ್ಸ್, 223ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿ ಕೇವಲ 34 ಎಸೆತಗಳಲ್ಲಿ 9 ಫೋರ್ ಮತ್ತು 3 ಸಿಕ್ಸರ್‌ಗಳನ್ನು ಒಳಗೊಂಡ ಅಜೇಯ 76 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಕೆಕೆಆರ್‌ನ ಮಾಂತ್ರಿಕ ಸ್ಪಿನ್ನರ್ ವರುಣ್ ಚಕ್ರವರ್ತಿ ಪವರ್ ಪ್ಲೇ ಓವರ್‌ನಲ್ಲೇ ದಾಳಿಗಿಳಿದು ಓಪನರ್ ವಿರಾಟ್ ಕೊಹ್ಲಿ (5) ಮತ್ತು ರಜತ್ ಪಾಟಿದಾರ್ (1) ವಿಕೆಟ್ ಪಡೆದು ಚಾಂಲೆಂಜರ್ಸ್‌ಗೆ ಆಘಾತ ನೀಡಿದರು.,
Laxmi News 24×7