Breaking News

ಡಿಕೆಶಿ, ಸಿದ್ಧರಾಮಯ್ಯ ಚಿಲ್ಲರೆ ಕೆಲಸ ಬಿಡಬೇಕು: ಜಗದೀಶ್ ಶೆಟ್ಟರ್

Spread the love

ಬೆಳಗಾವಿ: ಚುನಾವಣೆಯಲ್ಲಿ ಎದುರಾಳಿಗಳನ್ನ ಎದುರಿಸಿ ಗೆಲ್ಲುವ ಕೆಲಸ ಮಾಡಬೇಕು. ಅದು ಬಿಟ್ಟು ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ಚಾರಿತ್ರ್ಯವಧೆ ಮಾಡುವ ಕೆಲಸಮಾಡಬಾರದು ಅದು ಚಿಲ್ಲರೆ ಕೆಲಸವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ವಿರುದ್ಧ ಸಚಿವ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಲೋಕಸಭಾ ಉಪಚುನಾವಣಾ ಪ್ರಚಾರದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣವನ್ನು ಈಗಾಗಲೇ ಎಸ್‌ಐಟಿ ಗೆ ವಹಿಸಲಾಗಿದೆ. ಅದು ತನಿಖೆ ನಡೆಯುತ್ತಿದೆ. ಆದರೆ ನೀವು ವೈಯಕ್ತಿಕವಾಗಿ ಇಷ್ಟೊಂದು ಟಾರ್ಗೆಟ್ ಮಾಡಿದರೆ ನಿಮ್ಮ ಬಗ್ಗೆಯೂ ವಿಚಾರಮಾಡಬೇಕಾಗುತ್ತದೆ. ಅದು ಒಳ್ಳೆಯದಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ಕಾಂಗ್ರೆಸ್ ಸರ್ಕಾರದಂತೆ ಅಲ್ಲ. ತನಿಖೆ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಎಸ್‌ಐಟಿ ತಂಡದಲ್ಲಿ ಪ್ರಮಾಣಿಕ ಹಾಗೂ ಒಳ್ಳೆಯ ಅಧಿಕಾರಿಗಳಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಯುತ್ತಿದೆ. ಕಾಂಗ್ರೆಸ್ ನವರು ಸ್ವಲ್ಪ ತಾಳ್ಮೆಯಿಂದ ಕಾಯಬೇಕು ಎಂದರು.


Spread the love

About Laxminews 24x7

Check Also

ತಮ್ಮ ವಿರುದ್ದ ದಾಖಲಾಗಿರುವ ಎಫ್​ಐಆರ್ ಕುರಿತು ಪ್ರತಿಕ್ರಿಯಿಸಿದಚಿದಾನಂದ ಸವದಿ

Spread the loveಚಿಕ್ಕೋಡಿ (ಬೆಳಗಾವಿ) : ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಷಡ್ಯಂತ್ರದ ವಿರುದ್ಧ ಅಥಣಿ ಮತಕ್ಷೇತ್ರದ ರೈತಬಾಂಧವರು ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ