ಪ್ರಿಯಾಂಕಾ ಜಾರಕಿಹೊಳಿ ಸಮ್ಮುಖದಲ್ಲಿ ಬಿಜೆಪಿ ಕಾರ್ಯಾಕರ್ತರು ಕಾಂಗ್ರೆಸ್ ಗೆ ಸೇರ್ಪಡೆ..
ಗೋಕಾಕ: ದೂರದೃಷ್ಟಿ ಹಾಗೂ ಅಭಿವೃದ್ದಿ ಪರ ಯೋಜನೆಗಳು ಮತ್ತು ಜನಪರ ಕಾರ್ಯಗಳು ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ತಂದೆ ಸತೀಶ ಜಾರಕಿಹೊಳಿ ಅವರ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಪ್ರಿಯಾಂಕಾ ಜಾರಕಿಹೊಳಿ ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಶನಿವಾರದಂದು ಸಂಜೆ ನಗರದ ಉಪ್ಪಾರ ಗಲ್ಲಿಯಲ್ಲಿ ಲೋಕಸಭಾ ಉಪಚುನಾವಣೆಯ ನಿಮಿತ್ಯ ತಮ್ಮ ತಂದೆಯ ಪರವಾಗಿ ಮತಯಾಚನೆ ಮಾಡುತ್ತಾ ಮಾತನಾಡಿದ ಅವರು, ಮಾತುಗಿಂತ ಕೃತಿ ಮೇಲು ಎಂಬತೆ ಈಗಾಗಲೇ ನಮ್ಮ ತಂದೆಯವರು ನಗರದ ಜನತೆಗೆ ಮೂಲಭೂತ ಯೋಜನೆಗಳ ಅನುಷ್ಠಾನದೊಂದಿಗೆ ನೆಮ್ಮದಿಯ ಜೀವನಕ್ಕೆ ಕಾರಣಿಕರ್ತರಾಗಿದ್ದಾರೆಂದು ತಿಳಿಸಿದರು.
ನಗರದ ಹಿಂದಿನ ಇತಿಹಾಸವನ್ನು ನೆನೆಪಿಸಿಕೊಳ್ಳಿ, ಕುಡಿಯುವ ನೀರಿಗಾಗಿ ಪರದಾಟ, ತೆಗ್ಗು ಬಿದ್ದ ರಸ್ತೆಗಳು, ಶೌಚಾಲಯಗಳ ಕೊರತೆ, ಕತ್ತಲೆಯಲ್ಲಿದ್ದ ನಗರಕ್ಕೆ ವಿದ್ಯುತ್ತ ದೀಪಗಳು ಸೇರಿದಂತೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿ ಸುಂದರ ನಗರವನ್ನಾಗಿಸುವಲ್ಲಿ ನಮ್ಮ ಕುಟುಂಬದ ಪಾತ್ರ ಮಹತ್ವದ್ದಾಗಿದೆ ಎಂದ ಅವರು ಇತ್ತಿಚೆಗೆ ನೆರೆ ಬಂದ ಹೋದ ಸಂದರ್ಭದಲ್ಲಿ ಹಾಗೂ ಕೋವಿಡ್-19 ಸಂದರ್ಭದಲ್ಲಿ ಅವರು ಮಾಡಿದ ಸಮಾಜಮುಖಿ ಕಾರ್ಯಗಳು ಗಮನಿಸಿ ನಮ್ಮ ತಂದೆಯವರನ್ನು ಲೋಕಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅರ್ಜುನ ಪವಾರ ಹಾಗೂ ಪ್ರಕಾಶ ಚಿಪ್ಪಲಕಟ್ಟಿ ಅವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷರಾದ ಅಶೋಕ ಪಾಟೀಲ, ಕೆ.ಡಿ.ಕಲಾಲ, ಸಿದ್ದಲಿಂಗ ದಳವಾಯಿ, ನಗರಸಭೆ ಸದಸ್ಯ ಭಗವಂತ ಹುಳ್ಳಿ, ಮುಖಂಡರಾದ ವಿಠ್ಠಲ ಹೆಜ್ಜೆಗಾರ, ಮಾರುತಿ ಜಡಿನವರ, ಎಸ್.ಎಮ್.ಹತ್ತಿಕಟಗಿ, ಕರೆಪ್ಪ ಬಡೆಪ್ಪಗೋಳ, ಲಕ್ಷ್ಮಣ ಬಬಲಿ, ಎಮ್.ಎ.ತಹಶೀಲದಾರ, ವಾಯ್.ಬಿ.ಪಾಟೀಲ, ವಿವೇಕ ಜತ್ತಿ ಸೇರಿದಂತೆ ಅನೇಕರು ಇದ್ದರು.
ನಂತರ ಪ್ರಿಯಾಂಕಾ ಜಾರಕಿಹೊಳಿ ಅವರು, ಬೋಜಗಾರ ಗಲ್ಲಿ, ಡೋಹರ ಗಲ್ಲಿ, ಗರಡಿ ಗಲ್ಲಿ, ಮಾಲದಾರ ಗಲ್ಲಿಯಲ್ಲಿ ಪ್ರಚಾರ ನಡೆಸಿ, ತಮ್ಮ ತಂದೆಯ ಪರವಾಗಿ ಮತಯಾಚಿಸಿದರು.