Breaking News

ಬಸ್ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ

Spread the love

ಗದಗ: ಸಾರಿಗೆ ಸಂಸ್ಥೆಯ ಬಸ್ ನ ಬ್ರೇಕ್ ವೈಫಲ್ಯವಾದರೂ, ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬಹುದಾಗಿದ್ದ ಭಾರಿ ಅಪಾಯವೊಂದು ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

 

 

ಶಿರಹಟ್ಟಿಯಿಂದ ಮುಂಡರಗಿ ಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಬಾಗೇವಾಡಿ ಗ್ರಾಮದ ಬಳಿ ಬಸ್ ಬ್ರೇಕ್ ವೈಫಲ್ಯವಾಗಿತ್ತು. ತಕ್ಷಣ ಎಚ್ವೆತ್ತುಕೊಂಡ ಬಸ್ ಚಾಲಕ ಸಿದ್ದಪ್ಪ ಗುದ್ದಿನ್, ರಸ್ತೆಗೆ ಹೊಂದಿಕೊಂಡಿರುವ ಗುಡ್ಡಕ್ಕೆ ಬಸ್ ಏರಿಸಿದ್ದಾರೆ. ಇದರಿಂದ ಬಸ್ ನ ವೇಗ ಕ್ರಮೇಣ ಕಡಿಮೆಯಾಗಿ ನಿಂತಿದೆ.

ಚಾಲಕನ ಈ ಸಮಯೋಚಿತ ನಿರ್ಧಾರದಿಂದ ಸಂಭವಿಸಬಹುದಾದ ದೊಡ್ಡ ಅಪಘಾತ ತಪ್ಪಿದೆ. ಬಳಿಕ ಮತ್ತೊಂದು ಬಸ್ ನಲ್ಲಿ ಪ್ರಯಾಣಿಕರನ್ನು ಕಳುಹಿಸಲಾಗಿದೆ. ಬಸ್ ಚಾಲಕನ ಚಾಣಾಕ್ಷತನಕ್ಕೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

https://youtu.be/kyxoU5IIGfs

 


Spread the love

About Laxminews 24x7

Check Also

ವಿಜಯಾ ಆಸ್ಪತ್ರೆಯಲ್ಲಿ ವೈಧ್ಯರ ದಿನಾಚರಣೆ

Spread the love ವಿಜಯಾ ಆಸ್ಪತ್ರೆಯಲ್ಲಿ ವೈಧ್ಯರ ದಿನಾಚರಣೆ ಬೆಳಗಾವಿ ನಗರದಲ್ಲಿರುವ ಹೆಸರಾಂತ ವಿಜಯಾ ಅರ್ಥೋ ಹಾಗೂ ಟ್ರಾಮಾ ಸೆಂಟರನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ