Breaking News

ಹರಿದ ಜೀನ್ಸ್​ ಪ್ಯಾಂಟ್​ ವಿಚಾರಕ್ಕೆ ಮುಖ್ಯಮಂತ್ರಿಯನ್ನೇ ಎದುರು ಹಾಕಿಕೊಂಡ ಅಮಿತಾಭ್​ ಮೊಮ್ಮಗಳು ನವ್ಯಾ!

Spread the love

ಬಿಗ್​-ಬಿ ಅಮಿತಾಭ್​ ಬಚ್ಚನ್​ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಕಳೆದ ವರ್ಷವಷ್ಟೇ ಪದವಿ ಶಿಕ್ಷಣ ಮುಗಿಸಿರುವ ಅವರು ತಮ್ಮದೇ ಹಾದಿನಲ್ಲಿ ಸಾಗುತ್ತಿದ್ದಾರೆ. ಮಹಿಳೆಯ ಸಮಾನತೆಗಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಅವರು ಉತ್ತರಾಖಂಡ್​ ಮುಖ್ಯಮಂತ್ರಿ ತಿರತ್​ ಸಿಂಗ್​ ರಾವತ್​ ಅವರನ್ನು ಎದುರು ಹಾಕಿಕೊಂಡಿದ್ದಾರೆ. ಅದು ಕೂಡ ಹರಿದ ಜೀನ್ಸ್​ ಪ್ಯಾಂಟ್​ ಕಾರಣಕ್ಕೆ!

 

 

ಅರೆರೆ.. ಮುಖ್ಯಮಂತ್ರಿಗೂ, ಬಚ್ಚನ್​ ಮೊಮ್ಮಗಳಿಗೂ, ಹರಿದ ಜೀನ್ಸ್​ ಪ್ಯಾಂಟ್​ಗೂ ಏನು ಸಂಬಂಧ? ಇಂಥ ಪ್ರಶ್ನೆ ಮೂಡುವುದು ಸಹಜ. ಇತ್ತೀಚೆಗೆ ಉತ್ತರಾಖಂಡ್ ಸಿಎಂ ತಿರತ್​ ಸಿಂಗ್​ ರಾವತ್​ ಅವರು ಮಹಿಳೆಯರ ಬಟ್ಟೆ ಕುರಿತಂತೆ ಒಂದು ಹೇಳಿಕೆ ನೀಡಿದ್ದರು. ‘ಯುವತಿಯರು ಶ್ರೀಮಂತರ ಮಕ್ಕಳಂತೆ ಕಾಣಲು ಹರಿದ ಜೀನ್ಸ್​ ಧರಿಸಿ ಮೊಣಗಾಲು ತೋರಿಸುವುದು ಭಾರತೀಯ ಸಂಸ್ಕೃತಿ ಅಲ್ಲ. ಪಾಶ್ಚಾತ್ಯರು ನಮ್ಮನ್ನು ಫಾಲೋ ಮಾಡುತ್ತಿರುವಾಗ ನಾವು ಹೀಗೆ ಪಾಶ್ಚಾತ್ಯರನ್ನು ಅನುಸರಿಸುತ್ತಿದ್ದೇನೆ. ಇದರಿಂದ ಫೋಷಕರು ಮಕ್ಕಳಿಗೆ ಕೆಟ್ಟ ಮಾದರಿಯನ್ನು ಹೇಳಿಕೊಡುತ್ತಿದ್ದಾರೆ’ ಎಂದು ತಿರತ್​ ಸಿಂಗ್​ ರಾವತ್​ ಹೇಳಿದ್ದಾರೆ.

ಉತ್ತರಾಖಂಡ್​ ಮುಖ್ಯಮಂತ್ರಿಯ ಈ ಹೇಳಿಕೆ ಎಲ್ಲೆಡೆ ವೈರಲ್​ ಆಗಿದೆ. ಮಹಿಳೆಯರಿಂದ ಇದಕ್ಕೆ ತೀವ್ರ ಟೀಕೆ ಕೇಳಿಬರುತ್ತಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳೆಯರ ಬಟ್ಟೆಗೂ ಭಾರತೀಯ ಸಂಸ್ಕೃತಿಗೂ ಸಂಬಂಧ ಕಲ್ಪಿಸಿ ಮಾತನಾಡಿರುವುದನ್ನು ಖಂಡಿಸಲಾಗುತ್ತಿದೆ. ಅಮಿತಾಭ್​ ಬಚ್ಚನ್​ ಮೊಮ್ಮಗಳು ನವ್ಯಾ ನವೇಲಿ ನಂದಾ ಕೂಡ ತಿರತ್​ ಸಿಂಗ್​ ರಾವತ್​ ಮಾತುಗಳನ್ನು ಕಟುವಾಗಿ ವಿರೋಧಿಸಿದ್ದಾರೆ.

ಈ ಕುರಿತಂತೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ನವ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ವಿಶೇಷ ಏನೆಂದರೆ ತಾವು ಕೂಡ ಹರಿದ ಜೀನ್ಸ್​ ಧರಿಸಿರುವ ಫೋಟೋವನ್ನು ಅವರು ಪೋಸ್ಟ್ ಮಾಡಿಕೊಂಡಿದ್ದಾರೆ. ‘ನಮ್ಮ ಬಟ್ಟೆಯನ್ನು ಬದಲಿಸುವುದಕ್ಕಿಂತ ಮುಂಚೆ ನೀವು ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ’ ಎಂದು ನವ್ಯಾ ಖಡಕ್​ ತಿರುಗೇಟು ನೀಡಿದ್ದಾರೆ. ಮುಖ್ಯಮಂತ್ರಿಗಳು ಇಂಥ ಕಾಮೆಂಟ್​ ಮೂಲಕ ಸಮಾಜಕ್ಕೆ ಸಂದೇಶ ರವಾನಿಸುವುದು ನಿಜಕ್ಕೂ ಶಾಕಿಂಗ್​ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

https://youtu.be/kyxoU5IIGfs


Spread the love

About Laxminews 24x7

Check Also

ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!!

Spread the love ಪಾಂಗುಳ ಗಲ್ಲಿಯ ರಸ್ತೆಯಲ್ಲಿ ಸ್ಟಾಲ್ ವಾಹನಗಳ ದ್ವಿಮುಖ ಪಾರ್ಕಿಂಗ್‌ನಿಂದಾಗಿ ಸಂಚಾರ ಸಮಸ್ಯೆ!! ಗಣೇಶೋತ್ಸವ ಕೇವಲ ಎಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ