Breaking News

ಕೆಂಪು, ಹಳದಿ ಬಾವುಟ ಹಾಕಿಕೊಂಡು ಓಡಾಡಿದ್ರೆ ಅಟ್ಟಾಡಿಸಿ ಹೊಡೀತಾನಂತೆ…!!

Spread the love

ಬೆಳಗಾವಿ: ಕನ್ನಡಿಗರನ್ನೆ ಅಟ್ಟಾಡಿಸಿ ಹೊಡ್ತಿವಿ ಎಂದು ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ಹೂಂಕರಿಸಿ ಸಂಕಷ್ಟಕ್ಕೆ ಬಿದ್ದಿದ್ದಾನೆ. ಬೆಳಗಾವಿ ನೆಲದಲ್ಲಿ ನಿಂತುಕೊಂಡು ಈ ರೀತಿ ಧಮ್ಕಿ ಹಾಕಿದವ ಎಂಇಎಸ ಮುಖಂಡ ಶುಭಂ ಸಾಳುಂಕೆ. ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆ ಎರಡು ಒಂದಾಗಿವೆ ಎಂದಿರುವ ಸಾಳುಂಕೆ, ಹಳದಿ ಕೆಂಪು ಬಣ್ಣದ ಶಾಲು ಧರಿಸಿದವರನ್ನು ಸಿಕ್ಕ ಸಿಕ್ಕಲ್ಲಿ ನಾವು ಹೊಡ್ತಿವಿ ಎಂದಿದ್ದಾನೆ. ನಮ್ಮ ಶಾಂತಿಯುತ ಹೋರಾಟವನ್ನ ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಕನ್ನಡಿಗರು ಮತ್ತು ಸರಕಾರಕ್ಕೆ ಎಚ್ಚರ ನೀಡಿರುವ ಶಭಂಗೆ ಇಂದು ಪೊಲೀಸರು ಶುಭಮಸ್ತು ಎಂದಿದ್ದಾರೆ. ಕನ್ನಡ ಹೋರಾಟಗಾರರ ವಿರುದ್ಧ ಪೊಲೀಸರು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ನಾವು ಬೇರೆ ಪದ್ಧತಿಯಿಂದ ಉತ್ತರ ಕೊಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಕಾನೂನು ಕೈಗೆ ತೆಗೆದುಕೊಳ್ಳುವ ಧಮ್ಕಿ ಕೊಟ್ಟ ನಾಡದ್ರೋಹಿಯಾಗಿದ್ದಾನೆ.

ಶಿವಸೇನೆ ಮುಖಂಡ ಪ್ರಕಾಶ ಶಿರೋಳಕ ವಾಹನದ ನಾಮಫಲಕಕ್ಕೆ ಮಸಿ ಬಳಿದು ಕಿತ್ತು ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಹೋರಾಟಗಾರರಿಗೆ ಉಚಿತ ಧಮ್ಕಿ ಎರಡು ದಿನಗಳ ಹಿಂದೆಯೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಎಂಇಎಸ ಗುಂಡಾ ಶುಭಂ ಸಾಳುಂಕೆ ವಿರುದ್ಧ ಕ್ರಮ ಜರುಗಿಸದ ಬೆಳಗಾವಿ ಪೊಲೀಸ್ ಕಮೀಷನರ್ ಇಙದು ಹಠಾತ್ ಕಾನೂನು ಕ್ರಮಕ್ಕೆ ಮುಂದಾದರು. ನಗರ ಪೊಲೀಸರು ಶುಭಂ ವಿರುದ್ಧ ಕೇಸ್ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಮಾಲವಿ ಜಲಾಶಯದ ಮಣ್ಣಿನ ಗೋಡೆ ಒಡೆದು ನೀರು ಪೋಲು: ಅಧಿಕಾರಿಗಳ ವಿರುದ್ದ ಜನರ ಆಕ್ರೋಶ

Spread the loveವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಹೊರಭಾಗದಲ್ಲಿರುವ ಮಾಲವಿ ಜಲಾಶಯದ ಮಣ್ಣಿನ ಗೋಡೆ ಒಡೆದು ಅಪಾರ ಪ್ರಮಾಣದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ