Breaking News
Home / ಜಿಲ್ಲೆ / ಬೆಳಗಾವಿ / ಬಿಲ್ಲವರ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ …

ಬಿಲ್ಲವರ ಸಮಾಜದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಸಮಾರಂಭ …

Spread the love

ಬೆಳಗಾವಿ: ಬಡಮಕ್ಕಳಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಹಾಗೂ ಉನ್ನತ ಮಟ್ಟಕ್ಕೆ ಪ್ರೋತ್ಸಾಹ ನೀಡುತ್ತಿರುವ ಬಿಲ್ಲವರ ಸಮಾಜದ ಕಾರ್ಯ ಮೆಚ್ಚುಂವತದ್ದು, ಮಕ್ಕಳಿಗೆ ಶಿಕ್ಷಣ ಪ್ರಮುಖವಾಗಿದೆ. ಏಕಾಗ್ರತೆಯಿಂದ ಓದಿನತ್ತ ಗಮನ ಹರಿಸಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂದು ಧಾರವಾಡ ೨ ನೇ ಜಿಲ್ಲಾ ಸತ್ರ ನ್ಯಾಯಾಧೀಶೆ ಪಂಚಾಕ್ಷರಿ ಎಮ್.ಸುವರ್ಣ ಹೇಳಿದರು.
ಇಲ್ಲಿನ ಶಹಾಪುರ ವಿಜಯಲಕ್ಷ್ಮಿ ಸಭಾ ಭವನದಲ್ಲಿ ರವಿವಾರ ೭ ರಂದು ಬಿಲ್ಲವರ ಅಸೋಸಿಯೇಶನ್ ಸಂಘದಿಂದ ಆಯೋಜಿಸಿದ ಬಿಲ್ಲವರ ಸಂಘದ ೩೩ ನೇ ವಾರ್ಷಿಕೋತ್ಸವ ಹಾಗೂ ಸತ್ಯನಾರಾಯಣ ಪೂಜೆ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸತ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ತುಂಬಾ ಹೆಮ್ಮೆ ಎನಿಸಿದೆ. ಬೆಳಗಾವಿಯಲ್ಲಿ ನಡೆಯುವ ಬಿಲ್ಲವ ಸಮಾಜದ ಕಾರ್ಯಕ್ರಮ ನನಗೆ ಖುಷಿ ಕೊಟ್ಟಿದೆ, ಇವರ ಸಮಾಜ ಸೇವೆ ನಮ್ಮೆಲ್ಲರಿಗೂ ಪ್ರೇರಣೆ ಎಂದರು.
ರೇಷ್ಮೆ ಇಲಾಖೆಯ ಉಪನಿರ್ದೇಶಕ ನಾರಾಯಣ್ ನಾಯ್ಕ್ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ನುಡಿಯಂತೆ ವಿದ್ಯೆಯಿಂದ ಸ್ವತಂತ್ರರಾಗಿ ತಮ್ಮ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ಕೊಟ್ಟು ಉನ್ನತ ಹುದ್ದೆಗೆ ದಾರಿ ತೋರಿಸುವ ಜವಾಬ್ದಾರಿ ಪಾಲಕರು ಮಾಡಬೇಕು. ಐಪಿಎಸ್, ಐಎಎಸ್ ಶಿಕ್ಷಣ ಪಡೆಯಲು ಹಲವಾರು ಸಂಘ ಸಂಸ್ಥೆಗಳು ಉಚಿತ ಕೋಚಿಂಗ್ ಕೂಡ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಂಡು ಮಕ್ಕಳಲ್ಲಿ ಶೈಕ್ಷಣ ಕ ಜವಾಬ್ದಾರಿ ಮೂಡಿಸಿ ಎಂದರು.
ನ್ಯಾಯವಾದಿ ಪಂಚಾಕ್ಷರಿ ಸುವರ್ಣ ಹಾಗೂ ಸಂಘದ ಮಾಜಿ ಅಧ್ಯಕ್ಷ ಜಯಂತ ಪೂಜಾರಿ ಅವರಿಗೆ ಸನ್ಮಾನ ಮಾಡಲಾಯಿತು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ವಿಜಯ್ ಸಾಲಿಯಾನ್, ಹೋಟೆಲ್ ಉದ್ಯಮಿ ಸುಧೀರ್ ಕುಮಾರ್ ಸಾಲಿಯಾನ್, ಸಂಘದ ಅಧ್ಯಕ್ಷ ಸುನಿಲ್ ಪೂಜಾರಿ, ಶಿವಗಿರಿ ಸೊಸೈಟಿ ಚೇರ್ಮನ್ ಸುಜನ ಕುಮಾರ್, ಉದ್ಯಮಿ ಪ್ರಭಾಕರ್ ಪೂಜಾರಿ, ಚಂದ್ರಾವತಿ ಪೂಜಾರಿ, ಗಣೇಶ ಪೂಜಾರಿ, ಸುಂದರ ಕೋಟ್ಯಾನ್, ಸಂತೋಷ ಕೆ. ಪೂಜಾರಿ, ಹಾಗೂ ಶಿವಗಿರಿ ಕೋ-ಆಪ್ ಸೋಸೈಯಿಟಿ ಸಿಬ್ಬಂದಿ ವರ್ಗ, ಸಂಘದ ಎಲ್ಲಾ ಭಾಂದವರು ಹಾಗೂ ಇತರರು ಇದ್ದರು. ಚಂದ್ರ ಪೂಜಾರಿ ನಿರೂಪಿಸಿದರು. ಸಂತೋಷ್ ಆರ್.ಪೂಜಾರಿ ವಂದಿಸಿದರು.


Spread the love

About Laxminews 24x7

Check Also

40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Spread the love ಚಿಕ್ಕೋಡಿ: ನೀರಿಲ್ಲದ 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ