Breaking News

ಬಾಳಿಗೆ ಬೆಳಕಾದ IPL​ ಬಿಡ್ಡಿಂಗ್; ಟೆಂಪೋ ಚಾಲಕನ ಮಗನೀಗ ಕರೋಡ್​ಪತಿ

Spread the love

ಕ್ರೀಡಾಲೋಕದಲ್ಲಿ ರಾತ್ರೋರಾತ್ರಿ ಸ್ಟಾರ್‌ಗಳಾದ ಸಾಕಷ್ಟು ಸಾಧಕರಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು ಊಹಿಸಲಾರದಷ್ಟು ಎತ್ತರಕ್ಕೆ ಏರಿ, ನಿಬ್ಬೆರಗಾಗುವಂತೆ ಮಾಡಿದ್ದಾರೆ. ಭಾರತೀಯ ಕ್ರಿಕೆಟ್​‌ ಲೋಕದಲ್ಲಿ ಇಂತಹ ಹಲವು ಸ್ಫೂರ್ತಿದಾಯಕ ಕಥೆಗಳು ಸಿಗುತ್ತವೆ.

ಹಿಂದೆ ಮುಂಬೈನ ರಸ್ತೆ ಬದಿಯಲ್ಲಿ ಪಾನಿಪುರಿ ಮಾರಾಟ ಮಾಡಿ ಕ್ರಿಕೆಟ್​ ಕಿಟ್‌ಗೆ ಹಣ ಹೊಂದಿಸಿಕೊಳ್ಳುತ್ತಿದ್ದ ಯಶಸ್ವಿ ಜೈಸ್ವಾಲ್​.. ಶಾಲಾ ವಾಹನ ಚಾಲನೆ, ಹಾಲು ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶದ ನರೇಶ್​​ ಗರ್ಗ್​ ಪುತ್ರ ಪ್ರಿಯಂ ಗರ್ಗ್​‌ 13ನೇ ಸೀಸನ್​​ ಐಪಿಎಲ್​ ಹರಾಜಿನಲ್ಲಿ ಕೋಟ್ಯಾಧಿಪತಿಗಳಾದ ಕಥೆ ನಮಗೆ ಗೊತ್ತೇ ಇದೆ. ಇದೇ ರೀತಿ ಈಗ 14ನೇ ಆವೃತ್ತಿಯ ಮಿನಿ ಹರಾಜಿನಲ್ಲೂ, ಟೆಂಪೋ ಚಾಲಕನ ಮಗ ಕರೋಡ್​ಪತಿಯಾಗಿದ್ದಾನೆ. ಆತನೇ ಸೌರಾಷ್ಟ್ರದ ಯುವ ವೇಗಿ ಚೇತನ್​​ ಸಕಾರಿಯಾ.

ಬಡ ಕುಟುಂಬದಲ್ಲಿ ಹುಟ್ಟಿದ್ದ ಚೇತನ್​ ಸಕಾರಿಯಾ ಟೆಂಪೋ ಚಾಲಕನ ಮಗ. ಟೆಂಪೋ ಚಾಲಕರಾಗಿದ್ದ ಸಕಾರಿಯಾ ತಂದೆಗೆ ಕುಟುಂಬ ನಿರ್ವಹಣೆಯೇ ಅತೀ ದೊಡ್ಡ ಸವಾಲಾಗಿತ್ತು. ಹೀಗಾಗಿ ಕುಟುಂಬದ ನಿರ್ವಹಣೆಗಾಗಿ ಸಕಾರಿಯಾ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಕ್ರಿಕೆಟನ್ನೇ​​ ಬಿಡಬೇಕಾದ ಪರಿಸ್ಥಿತಿಯೂ ಎದುರಾಗಿತ್ತು. ಆದರೆ ಸಂಕಷ್ಟದ ಸಂದರ್ಭದಲ್ಲೂ ಛಲ ಬಿಡದ ಈ ಯುವ ವೇಗಿಯ ಕಠಿಣ ಪರಿಶ್ರಮಕ್ಕೆ ಈಗ ಐಪಿಎಲ್​​ ಬಿಡ್ಡಿಂಗ್​ನಲ್ಲಿ ಪ್ರತಿಫಲ ಸಿಕ್ಕಿದೆ.

ರಾಜಸ್ಥಾನ್ ರಾಯಲ್ಸ್​ಗೆ ಅಚ್ಚರಿಯ ಮೊತ್ತಕ್ಕೆ ಸೇಲ್​​
ಐಪಿಎಲ್​​​ ಸೀಸನ್​​​-14ರ ಮಿನಿ ಹರಾಜಿನಲ್ಲಿ ದೇಶಿ ಪ್ರತಿಭೆಗಳಾದ ಕೃಷ್ಣಪ್ಪ ಗೌತಮ್​​ ಹಾಗೂ ಶಾರುಖ್​ ಖಾನ್​​ ಅಚ್ಚರಿಯ ಮೊತ್ತಕ್ಕೆ ಸೇಲ್​​ ಆಗಿದ್ದು ಗೊತ್ತಿದೆ. ಹೀಗೆ ಸ್ಟಾರ್​​​ ಪಟ್ಟ ಹೊಂದಿರದ ಸೌರಾಷ್ಟ್ರದ ಯುವ ಎಡಗೈ ವೇಗಿ ಚೇತನ್​ ಸಹ ಅಚ್ಚರಿಯ ಮೊತ್ತಕ್ಕೆ ಸೇಲ್​ ಆಗಿದ್ದಾರೆ. ಬಿಡ್ಡಿಂಗ್​​ನಲ್ಲಿ 20 ಲಕ್ಷ ರೂಪಾಯಿ ಮೂಲ ಬೆಲೆ ಹೊಂದಿದ್ದ ಸಕಾರಿಯಾ, ರಾಜಸ್ಥಾನ್​​ ರಾಯಲ್ಸ್​ಗೆ 1.20 ಕೋಟಿ ರೂಪಾಯಿಗೆ ಖರೀದಿಯಾಗಿದ್ದಾರೆ. ಆ ಮೂಲಕ ಕತ್ತಲಲ್ಲಿ ದಿನ ಕಳೆಯುತ್ತಿದ್ದ ಕುಟುಂಬದಲ್ಲೀಗ ಐಪಿಎಲ್​ ಬೆಳಕಾಗಿ ಬಂದಿದೆ.

ಹರಾಜಿಗೂ ಮುನ್ನ ಎದುರಾಗಿತ್ತು ದೊಡ್ಡ ಶಾಕ್​
ಜನವರಿಯಲ್ಲಿ ಸೈಯದ್​​ ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಭಾಗಿಯಾಗಿದ್ದ ಚೇತನ್​ ಅದ್ಬುತ ಪ್ರದರ್ಶನ ನೀಡಿದ್ದರು. ಆದರೆ ಟೂರ್ನಿ ಮುಗಿದ ಬಳಿಕ ಮನೆಗೆ ಆಗಮಿಸಿದ್ದ ಸಕಾರಿಯಾಗೆ ಅಘಾತ ಕಾದಿತ್ತು. ಇತ್ತ ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಚೇತನ್​  ಬ್ಯುಸಿಯಾಗಿದ್ರೆ, ಅತ್ತ ಸಹೋದರ ರಾಹುಲ್​ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಆದ್ರೆ ಚೇತನ್​ ಸಕಾರಿಯಾ ಮನೆಗೆ ವಾಪಸ್​​ ಬರುವವರಿಗೂ ಈ ವಿಚಾರ ತಿಳಿದೇ ಇರಲಿಲ್ಲ. ಇದರಿಂದ ಮನನೊಂದಿದ್ದ ಸಕಾರಿಯಾಗೀಗ ಮಿನಿ ಹರಾಜು ಸಂತಸ ಮೂಡುವಂತೆ ಮಾಡಿದೆ.

ಕಳೆದ ವರ್ಷ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನೆಟ್​​ ಬೌಲರ್​ ಆಗಿದ್ದ ಸಕಾರಿಯಾ, ಆರ್​ಸಿಬಿ ಕೋಚ್​ ಮೈಕ್​ ಹೆಸನ್​, ಸೈಮನ್​ ಕ್ಯಾಟಿಚ್​, ವೇಗಿ ಡೇಲ್​ ಸ್ಟೇನ್​ರಿಂದ ಬೌಲಿಂಗ್​ ಟಿಪ್ಸ್​ ಪಡೆದಿದ್ದರು. ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಎಬಿಡಿವಿಲಿಯರ್ಸ್​ರಂತಹ​ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್​ ಮಾಡುವ ಅವಕಾಶ ಆತ್ಮವಿಶ್ವಾಸ ಮೂಡಿಸಿತ್ತು. ಇದು​ ಸೈಯದ್​​ ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಕಾರಣವಾಗಿತ್ತು. ಆ ಮೂಲಕ ಐಪಿಎಲ್​ ಫ್ರಾಂಚೈಸಿಗಳ ಗಮನ ಸೆಳೆದ ಸಕಾರಿಯಾ, 1.25 ಕೋಟಿ ರೂಪಾಯಿಗೆ ರಾಜಸ್ಥಾನ್​ ರಾಯಲ್ಸ್​ಗೆ ಸೇಲ್​ ಆಗಿದ್ದಾರೆ. ಇದರೊಂದಿಗೆ ಬಡತನದಲ್ಲಿ ಬೆಂದಿದ್ದ ಪ್ರತಿಭೆಯ ಬಾಳಲ್ಲಿ ಮಂದಹಾಸ ಮೂಡುವಂತಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಅನ್ನೋದೆ ಕ್ರಿಕೆಟ್​​ ಅಭಿಮಾನಿಗಳ ಆಶಯ.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ