Breaking News

ನಿರ್ಭಯ ಅತ್ಯಾಚಾರ ಪ್ರಕರಣದ ನಂತರ ಮತ್ತೆ ಪ್ರಾರಂಭವಾಗಿದೆ ಗಲ್ಲು ಶಿಕ್ಷೆ ವಿಧಿ

Spread the love

ನವದೆಹಲಿ : ಮೂವರು ಮಹಿಳೆಯರು ಸೇರಿ 34 ಮಂದಿ ಗಲ್ಲಿಗೇರಲಿದ್ದಾರೆ . ಏಳು ಕೊಲೆ ಮಾಡಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಶಬ್ಬಮ್ ನಂತರದಲ್ಲಿ ಈ 34 ಮಂದಿ ಗಲ್ಲಿಗೇರಲಿದ್ದು, ಎಲ್ಲರ ಕ್ಷಮಾಪಣಾ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದಾರೆ ಎಂದು ವರದಿಗಳು ತಿಳಿಸುತ್ತೇವೆ.

ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ನಂತರ ದೇಶದಲ್ಲಿ ಮತ್ತೆ ಗಲ್ಲಿಗೇರಿಸುವ ಪ್ರಕ್ರಿಯೆ ಶುರುವಾಗಿದೆ. ಶೀಘ್ರದಲ್ಲೇ ಏಳು ಹತ್ಯೆ ಪ್ರಕರಣದ ಅಪರಾಧಿ ಶಬ್ಬಮ್ ಗಲ್ಲಿಗೇರಲಿದ್ದಾಳೆ.

ಇನ್ನೋರ್ವ ಗಲ್ಲಿಗೇರಲಿರುವ ಆರೋಪಿ ನಿಥಾರಿ ಹಗರಣದ ಸುರೇಂದ್ರ ಕೋಲಿ. 2014 ರಲ್ಲಿ ರಾಷ್ಟ್ರಪತಿಗಳು ಕೋಲಿಯ ಕ್ಷಮಾಪಣಾ ಅರ್ಜಿಯನ್ನು ತಿರಸ್ಕರಿಸಿದ್ದರು . ಕೋಲಿಯನ್ನು ಮೀರತ್ ಜೈಲಿನಲ್ಲಿ ಗಲ್ಲಿಗೇರಿಸುವ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದವು . ಆದರೆ ಕೋಲಿಯ ಮರಣದಂಡನೆಯನ್ನು ಕೊನೆಯ ಕ್ಷಣದಲ್ಲಿ ನಿಲ್ಲಿಸಲಾಗಿತ್ತು . ಇದೀಗ ಮತ್ತೆ ಆತನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಹರ್ಯಾಣದ ಸೋನಿಯಾ , ಮಹಾರಾಷ್ಟ್ರದ ರೇಣುಕಾ ಮತ್ತು ಸೀಮಾ ಕೂಡ ಗಲ್ಲಿಗೇರಲಿದ್ದಾರೆ . ಸೋನಿಯಾ , ಕುಟುಂಬಸ್ಥರ ಹತ್ಯೆ ಅಪರಾಧದ ಮೇಲೆ ಗಲ್ಲಿಗೇರುತ್ತಿದ್ದಾಳೆ . ಈಕೆಯ ತಂದೆ ಶಾಸಕರಾಗಿದ್ದರು . ಪತಿ ಸಂಜೀವ್ ಕೂಡ ಜೈಲಿನಲ್ಲಿದ್ದು , ಆತನಿಗೂ ಗಲ್ಲು ಶಿಕ್ಷೆಯಾಗಿದೆ.


Spread the love

About Laxminews 24x7

Check Also

ಪೊಲೀಸರ ಸಾಮಾಜಿಕ ಬದ್ದತೆಯಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ*

Spread the love *ಡಿಸಿಆರ್ ಇ ಪೊಲೀಸ್ ಠಾಣೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ-ಸಿಎಂ ಸೂಚನೆ* *ದುರ್ಬಲವರ್ಗದವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ