Breaking News

ಇಂದು ಯಾರಿಗೆ ಒಲಿಯುತ್ತಾರೆ ಅದೃಷ್ಟ ಲಕ್ಷ್ಮಿ?; ಹರಾಜಿನ ಪ್ರಮುಖ ಆಕರ್ಷಣೆಯೇ ಅರ್ಜುನ್​ ತೆಂಡುಲ್ಕರ್​

Spread the love

ಐಪಿಎಲ್​ ಸೀಸನ್​ -14ರ ಮಿನಿ ಹರಾಜಿಗೆ, ಚೆನ್ನೈನಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೇ ಹರಾಜಿಗೆ ತಯಾರಿ ನಡೆಸಿರುವ ಫ್ರಾಂಚೈಸಿಗಳು, ಕೆಲ ಸ್ಟಾರ್​​ ಆಟಗಾರರ ಜೊತೆ ಫ್ಯೂಚರ್​ ಸ್ಟಾರ್​​ಗಳಿಗೆ ಮಣೆಹಾಕುವ ಲೆಕ್ಕಚಾರದಲ್ಲಿವೆ. ಇನ್ನು ಕೆಲ ಫ್ರಾಂಚೈಸಿಗಳಂತೂ, ದೇಶಿ ಟೂರ್ನಿಗಳಲ್ಲಿ ಕಮಾಲ್​ ಮಾಡಿರುವ ಪ್ರತಿಭೆಗಳನ್ನ, ಖರೀದಿಸಲು ಪ್ಲಾನ್​ ಮಾಡಿಕೊಂಡಿವೆ.

ಅರ್ಜುನ್​ ತೆಂಡುಲ್ಕರ್​​- ಆಲ್​ರೌಂಡರ್​​
ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಪ್ರಮುಖ ಆಕರ್ಷಣೆ, ದಿಗ್ಗಜ ಸಚಿನ್​ ತೆಂಡುಲ್ಕರ್​ ಸುಪುತ್ರ ಅರ್ಜುನ್​ ತೆಂಡುಲ್ಕರ್​. ಎಡಗೈ ಪೇಸರ್​ ಮತ್ತು ಹ್ಯಾಂಡಿ ಬ್ಯಾಟ್ಸ್​ಮನ್​ ಆಗಿರುವ ಅರ್ಜುನ್​, ಇತ್ತಿಚೀಗೆ ಕ್ಲಬ್​‌ ಮಟ್ಟದ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿದ್ದಾರೆ. ಆಡಿದ 2 ಪಂದ್ಯಗಳಿಂದ ಅರ್ಜುನ್​, ಬರೋಬ್ಬರಿ 13 ಸಿಕ್ಸರ್‌ಗಳನ್ನ ಸಿಡಿಸಿದ್ದಾರೆ. ಇನ್ನು ಈ ಯುವ ಆಲ್​ರೌಂಡರ್​​​ನನ್ನ ಖರೀದಿಸಲು ಮುಂಬೈ ಇಂಡಿಯನ್ಸ್​​ ಹೆಚ್ಚು ಆಸಕ್ತಿ ತೋರುತ್ತಿರೋ ಹಾಗೆ ಕಾಣುತ್ತದೆ. ಮುಂಬೈ ಮಾತ್ರವಲ್ಲದೆ, ಬಹುತೇಕ ಎಲ್ಲಾ ಫ್ರಾಂಚೈಸಿಗಳೂ ಅರ್ಜುನ್​ ಮೇಲೆ ಕಣ್ಣಿಟ್ಟಿವೆ.

ಮಹಮ್ಮದ್​ ಅಜರುದ್ದೀನ್​​- ಆರಂಭಿಕ ಬ್ಯಾಟ್ಸ್​ಮನ್​​​
ಇತ್ತೀಚಿಗೆ ಮುಕ್ತಾಯವಾದ ಸೈಯದ್​ ಮುಷ್ತಾಕ್​ ಆಲಿ ಟಿ-ಟ್ವೆಂಟಿ ಟೂರ್ನಿಯಲ್ಲಿ ಅಜರುದ್ದಿನ್, ಧೂಳೆಬ್ಬಿಸಿದ್ದರು. ಈ ಕೇರಳದ ಆರಂಭಿಕ ಬ್ಯಾಟ್ಸ್​ಮನ್​​ ತಮ್ಮ ಸ್ಪೋಟಕ ಬ್ಯಾಟಿಂಗ್​ನಿಂದಲೇ, ಐಪಿಎಲ್​ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಇನ್ನು ಅಜುರುದ್ದೀನ್​ ಬ್ಯಾಟಿಂಗ್​ ಶೈಲಿ, ಟಿ20 ಕ್ರಿಕೆಟ್​​ಗೆ ಹೇಳಿ ಮಾಡಿಸಿದಂತಿದೆ. ಮುಷ್ತಾಕ್​ ಆಲಿ ಟೂರ್ನಿಯಲ್ಲಿ ಸಿಡಿಸಿದ್ದ ಸ್ಪೋಟಕ ಶತಕವೇ, ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. ಕೇವಲ 37 ಎಸೆತಗಳಲ್ಲೇ ಸೆಂಚೂರಿ ಸಿಡಿಸಿದ್ದ​ ಈ ಯಂಗ್​ ಡೈನಾಮಿಕ್​ ಬ್ಯಾಟ್ಸ್​ಮನ್​​​ ಖರೀದಿಗೆ, ಫ್ರಾಂಚೈಸಿಗಳು ತುದಿಗಾಲಿನಲ್ಲಿ ನಿಂತಿವೆ.

ಉಮೇಶ್​​ ಯಾದವ್​​- ವೇಗದ ಬೌಲರ್​​​
ಐಪಿಎಲ್​​ನಲ್ಲಿ ಇದುವರೆಗೆ 3 ತಂಡಗಳನ್ನ ಪ್ರತಿನಿಧಿಸಿರುವ ವಿದರ್ಭ ಎಕ್ಸ್​ಪ್ರೆಸ್​ ಉಮೇಶ್​ ಯಾದವ್​, ಈ ಬಾರಿ ಹೊಸ ತಂಡ ಸೇರ್ಪಡೆಯ ನಿರೀಕ್ಷೆಯಲ್ಲಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ದುಬಾರಿ ಬೌಲರ್​ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಉಮೇಶ್​​, ಲೈನ್​ ಆಯಂಡ್​ ಲೆನ್ತ್​​ ಕಾಯ್ದುಕೊಳ್ಳುವಲ್ಲಿ ಎಡವುತ್ತಲೇ ಇರ್ತಾರೆ. ಜೊತೆಗೆ ಬೌಲಿಂಗ್​ನಲ್ಲೂ ಉಮೇಶ್​ ಪದೇ ಪದೇ ಕಂಟ್ರೋಲ್​ ತಪ್ಪೋದು, ವೇಗಿಯ​ ಮೈನಸ್​​ ಪಾಯಿಂಟ್​ ಆಗಿದೆ. ಒಂದು ವೇಳೆ ಉಮೇಶ್​​​ ಫಾರ್ಮ್​ನಲ್ಲಿದ್ದಿದ್ದೇ ಆದ್ರೆ, ಆ ದಿನ ಡೇಂಜರಸ್​​ ಬೌಲರ್​ ಆಗಿ ಎದುರಾಳಿ ಬ್ಯಾಟ್ಸ್​ಮನ್​ಗಳನ್ನ ಕಾಡ್ತಾರೆ.

ಕೃಷ್ಣಪ್ಪ ಗೌತಮ್​​- ಆಲ್​ರೌಂಡರ್​
ಕರ್ನಾಟಕದ ಸ್ಟಾರ್​ ಆಲ್​ರೌಂಡರ್​ ಕೃಷ್ಣಪ್ಪ ಗೌತಮ್​ ಮೇಲೆ, ಮಿನಿ ಹರಾಜಿನಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ. ಸದ್ಯ ಐಪಿಎಲ್​​ನಲ್ಲಿ ಆಡಿರುವವರ ಪೈಕಿ ಇವರು ಬಹುಬೇಡಿಕೆಯ ಆಟಗಾರ ಆಗಿದ್ದಾರೆ. ತನ್ನ ಆಫ್​​ ಸ್ಪಿನ್​​​ ಮೂಲಕ ಸ್ಟಾರ್​ ಬ್ಯಾಟ್ಸ್​ಮನ್​ಗಳನ್ನ ಕಾಡುವ ಗೌತಮ್​, ಕೆಳ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್​ ನಡೆಸಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ತಾಕತ್ತು ಹೊಂದಿದ್ದಾರೆ. ಈ ಹಿಂದೆ ರಾಜಸ್ಥಾನ ರಾಯಲ್ಸ್​​ ಪರ ಆಡಿರುವ ಪಂದ್ಯಗಳೇ, ಇದಕ್ಕೆ ಉದಾಹರಣೆ. ಕಳೆದ ಬಾರಿ ಹೆಚ್ಚು ಅವಕಾಶಗಳು ಸಿಗದೆ ಬೆಂಚ್​ ಕಾದಿದ್ದ ಕೆ.ಗೌತಮ್​, ಈ ಬಾರಿ ಹೊಸ ತಂಡ ಸೇರಿ ಫೀಲ್ಡ್​ಗಿಳಿಯುವ ನಿರೀಕ್ಷೆಯಲ್ಲಿದ್ದಾರೆ.

ಶಿವಂ ದುಬೆ- ಆಲ್​ರೌಂಡರ್​​
ಚುಟುಕು ಕ್ರಿಕೆಟ್​ನಲ್ಲಿ ಆಲ್​ರೌಂಡರ್​​ಗಳಿಗೆ ಅವಕಾಶದ ಹೆಬ್ಬಾಗಿಲು ಯಾವಾಗಲೂ ತೆರದಿರುತ್ತೆ. ಮೀಡಿಯಂ ಫೇಸ್​​ ಬೌಲಿಂಗ್​ ಜೊತೆಗೆ ಹಾರ್ಡ್​ ಹಿಟ್ಟರ್​ ಆಗಿರುವ ದುಬೆ, ಮ್ಯಾಚ್​​ ವಿನ್ನಿಂಗ್​​ ಪರ್ಫಾಮೆನ್ಸ್​ ನೀಡಬಲ್ಲ ಆಟಗಾರ. ಆದರೆ ಕಳೆದ ಸೀಸನ್​ನಲ್ಲಿ ಸ್ಥಿರ ಪ್ರದರ್ಶನ ನೀಡದ ಶಿವಂ ದುಬೆಗೆ, ಈ ಬಾರಿಯ ಹರಾಜಿನಲ್ಲಿ ಬೇಡಿಕೆಯಂತೂ ಇದೆ. ಸ್ಲಾಗ್​ ಓವರ್​​ಗಳಲ್ಲಿ ಸಿಡಿಯಬಲ್ಲ ಹಾಗೂ ಬೌಲಿಂಗ್​ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿರುವ ದುಬೆ, ಯಾವ ತಂಡದ ಪಾಲಾಗ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.

ಇವರಷ್ಟೇ ಅಲ್ಲ ಇನ್ನೂ ಹಲವು ದೇಶಿ ಪ್ರತಿಭೆಗಳು ಐಪಿಎಲ್​​​ ಹರಾಜಿನಲ್ಲಿ ಬಿಗ್​ ಮೊತ್ತಕ್ಕೆ ಸೇಲ್​ ಆಗುವ ನಿರೀಕ್ಷೆಯಿದೆ. ಒಟ್ನಲ್ಲಿ ಅದೃಷ್ಟದ ಪರೀಕ್ಷೆಗೆ ನಿಂತಿರುವ ದೇಶಿ ಕ್ರಿಕೆಟಿಗರು, ಇಂದಿನ ಹರಾಜಿನಲ್ಲಿ ಕೋಟಿ ವೀರರಾಗುವ ಕನಸು ಕಾಣ್ತಿರೋದಂತೂ, ಸುಳ್ಳಲ್ಲ.


Spread the love

About Laxminews 24x7

Check Also

ಸಿಎಂ ಹುದ್ದೆಯ ರೇಸಿನಿಂದ ಹಿಂದೆ ಸರಿದವರು

Spread the love ಕಳೆದ ವಾರ ವಿದಾನಮಂಡಲ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಕುತೂಹಲಕಾರಿ ವಿಷಯವೊಂದು ಹೊರಬಿತ್ತು.ಅದರ ಪ್ರಕಾರ ಕರ್ನಾಟಕದಲ್ಲಿ ಮತ್ತೊಮ್ಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ