Breaking News

ರಾಜ್ಯದ SC, ST ಉದ್ದಿಮೆದಾರರಿಗೆ ಭರ್ಜರಿ ಗುಡ್ ನ್ಯೂಸ್ : ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳ

Spread the love

ಬೆಂಗಳೂರು : ರಾಜ್ಯದ SC, ST ಉದ್ದಿಮೆದಾರರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಸಹಾಯಧನ ಶೇ.50 ರಿಂದ ಶೇ.75ಕ್ಕೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.

ಯೆಸ್, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಕೈಗಾರಿಕಾ ನಿವೇಶನ/ಶೆಡ್ ಗಳನ್ನು ನೀಡುವಲ್ಲಿ ಖಾಲಿ ಇರುವ ಸಹಾಯಧನವನ್ನು ಶೇ.50 ರಿಂದ ಶೇ 75 ಕ್ಕೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶಹೊರಡಿಸಿದ. ಸದರಿ ಆದೇಶದಲ್ಲಿ ವಿಧಿಸಲಾಗಿರುವ ಷರತ್ತು ಮತ್ತು ಕೆಲವು ನಿಬಂಧನೆಗಳನ್ನು ಮಾರ್ಪಡಿಸಿ ಬಗ್ಗೆ ಪಿ ಆರ್ ಲತಾ, ಪೀಠಾಧಿಕಾರಿ , ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇವರು ಆದೇಶ ಹೊರಡಿಸಿದ್ದಾರೆ.

ಏನಿದೆ ಆದೇಶದಲ್ಲಿ..?

1) ಶೇ 75 ರಷ್ಟು ಭೂ ಸಹಾಯಧನ ಸೌಲಭ್ಯವನ್ನು 2019-20 ನೇ ಸಾಲಿನಿಂದ KIADB ಹಾಗೂ KSSSIDC ಸಂಸ್ಥೆಗಳಿಂದ ಭೂ ಹಂಚಿಕೆ ಪಡೆದಿರುವ ಹಂಚಿಕೆದಾರರಿಗೆ ಪೂರ್ವಾನ್ವಯವಾಗಿ ದಿನಾಂಕ 01:14:2019 ರಿಂದ ನೀಡುವುದು.

2) ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯಿಂದ ಫಲಾನುಭವಿಯೊಬ್ಬರಿಗೆ ಕನಿಷ್ಟ 2 ಎಕರೆ ಜಮೀನನನ್ನು ಶೇ 75 ರಷ್ಟು ರಿಯಾಯಿತಿ ದರದಲ್ಲಿ ನೀಡಬಹುದು.

3) ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ನಿವೇಶನ/ಶೆಡ್ ಗಳ ಮೇಲೆ ನೀಡುವ ರಿಯಾಯಿತಿಯು ಒಟ್ಟು ದರದ ಶೇ 75 ರಷ್ಟು ಆಗಿರುತ್ತದೆ.

 


Spread the love

About Laxminews 24x7

Check Also

ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ

Spread the love ನೇಕಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಸಚಿವ ಸತೀಶ್‌ ಜಾರಕಿಹೊಳಿ ಯಮಕಮರಡಿ: ನೇಕಾರರ ಸಮಗ್ರ ಅಭಿವೃದ್ಧಿಗೆ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ