Breaking News

Dhruva Sarja: ಟಾಲಿವುಡ್​ ಸಿನಿಪ್ರಿಯರ ಕ್ಷಮೆ ಯಾಚಿಸಿದ ಧ್ರುವ ಸರ್ಜಾ..!

Spread the love

ಸ್ಯಾಂಡಲ್​ವುಡ್​ ಅಂಗಳದಲ್ಲಿ ಸಖತ್​ ಸದ್ದು ಮಾಡುತ್ತಿರುವ ಸಿನಿಮಾ ಪೊಗರು. ಧ್ರುವ ಸರ್ಜಾ ಅಭಿನಯದ ಹಾಗೂ ನಂದ ಕಿಶೋರ್​ ನಿರ್ದೇಶನದ ಈ ಸಿನಿಮಾದ ರಿಲೀಸ್​ಗೆ ಇವತ್ತೂ ಸೇರಿದಂತೆ ಎರಡು ದಿನದ ನಂತರ ಬಾಕಿ ಇದೆ. ಪೊಗರು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ರಿಲೀಸ್ ಆಗಲಿದೆ. ಇದೇ ಮೊದಲ ಸಲ ಧ್ರುವ ಸರ್ಜಾ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾಗಲಿದ್ದಾರೆ. ಕೆಜಿಎಫ್​ ಸಿನಿಮಾದ ನಂತರ ಕನ್ನಡದ ಬಹುತೇಕ ಸಿನಿಮಾಗಳು ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲಿವೆ. ಈಗಾಗಲೇ ಧ್ರುವ ಸರ್ಜಾ ಅವರ ಪೊಗರು ಸಿನಿಮಾದ ಡೈಲಾಗ್​ ಟೀಸರ್​, ಟೀಸರ್​, ಖರಾಬು ಹಾಡು ಹಾಗೂ ಟೈಟಲ್​ ಟ್ರ್ಯಾಕ್​ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಸಿನಿಮಾದ ಹಾಡುಗಳಿಗೆ ಫಿದಾ ಆಗಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕ ಟ್ರೆಂಡ್​ ಮಾಡುತ್ತಿರುತ್ತಾರೆ. ಇನ್ನು ಧ್ರುವ ಸರ್ಜಾ ಇದೇ ಮೊದಲ ಸಲ ತೆಲುಗು ಪ್ರೇಕ್ಷಕರಿಗೆ ಮುಂದೆ ಬರಲಿದ್ದಾರೆ. ಕೇವಲ ಹಾಡು ಹಾಗೂ ಸಿನಿಮಾದ ಟೀಸರ್​ ಮೂಲಕ ಟಾಲಿವುಡ್​ ಮಂದಿಗೆ ಈಗಷ್ಟೆ ಕೊಂಚ ಪರಿಚಯವಾಗಿದ್ದಾರೆ. ಅದಾಗಲೇ ಧ್ರುವ ಸರ್ಜಾ ತೆಲುಗು ಸಿನಿಪ್ರಿಯರ ಕ್ಷಮೆ ಯಾಚಿಸಿದ್ದಾರೆ.

ಅಷ್ಟಕ್ಕೂ ಧ್ರುವ ಕ್ಷಮೆ ಯಾಚಿಸಿದ್ದು, ಯಾವ ಕಾರಣಕ್ಕೆ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಧ್ರುವ ತಮ್ಮ ಪೊಗರು ಸಿನಿಮಾದ ಪ್ರಚಾರ ಕೆಲಸದಲ್ಲಿ ನಿರತರಾಗಿದ್ದಾರೆ. ಹೌದು, ಪ್ರಚಾರದ ಭಾಗವಾಗಿಯೇ ಧ್ರುವ ಸರ್ಜಾ ಇನ್​ಸ್ಟಾಗ್ರಾಂನಲ್ಲಿ ಟಾಲಿವುಡ್​ ಪ್ರೇಕ್ಷಕರಿಗೆಂದೇ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ಧ್ರುವ ಕ್ಷಮೆ ಯಾಚಿಸಿದ್ದು, ಯಾವ ಕಾರಣಕ್ಕೆ ಅನ್ನೋ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಧ್ರುವ ತಮ್ಮ ಪೊಗರು ಸಿನಿಮಾದ ಪ್ರಚಾರ ಕೆಲಸದಲ್ಲಿ ನಿರತರಾಗಿದ್ದಾರೆ. ಹೌದು, ಪ್ರಚಾರದ ಭಾಗವಾಗಿಯೇ ಧ್ರುವ ಸರ್ಜಾ ಇನ್​ಸ್ಟಾಗ್ರಾಂನಲ್ಲಿ ಟಾಲಿವುಡ್​ ಪ್ರೇಕ್ಷಕರಿಗೆಂದೇ ಒಂದು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಅರ್ಜುನ್​ ಸರ್ಜಾ ಅವರೊಂದಿಗಿರುವ ಧ್ರುವ ಸರ್ಜಾ ತಮ್ಮನ್ನ ತಾನು ಟಾಲಿವುಡ್​ ಪ್ರೇಕ್ಷಕರಿಗೆ ಪರಿಚಯ ಮಾಡಿಕೊಂಡಿದ್ದಾರೆ. ತಾನು ಅರ್ಜುನ್​ ಸರ್ಜಾ ಅವರ ಸಂಬಂಧಿ, ತೆಲುಗಿನಲ್ಲಿ ತಪ್ಪಾಗಿ ಮಾತನಾಡಿದರೆ ಕ್ಷಮಿಸಿ ಎನ್ನುತ್ತಲೇ ಮಾತು ಆರಂಭಿಸಿ, ಪೊಗರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಸಿನಿಮಾವನ್ನು ನೋಡಿ ಎಂದು ಮನವಿ ಮಾಡಿದ್ದಾರೆ.

ಪೊಗರು ಅಣ್ಣನಿಗೆ ಪೊಗರು ಪೊಗರು… ವಿಡಿಯೋ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹಾಡಿನ ಬೀಟ್ಸ್​ಗಳಿಗೆ ಸಿನಿಪ್ರಿಯರು ಹುಚ್ಚೆದು ಕುಣಿಯುವಂತೆ ಮಾಡಿದೆ. ಚಂದನ್​ ಶೆಟ್ಟಿ ಸಂಗೀತ ನೀಡಿರುವ ಈ ಸಿನಿಮಾದ ಟೈಟಲ್​ ಟ್ರ್ಯಾಕ್​ಗೆ ಚಂದನ್​ ಶೆಟ್ಟಿ, ಶಶಾಂಕ್​ ಶೇಷಗಿರಿ ಹಾಗೂ ಅನಿರುದ್ಧ ಶಾಸ್ತ್ರಿ ದನಿಯಾಗಿದ್ದಾರೆ. ಈ ಹಾಡು ರಿಲೀಸ್​ ಆದಾಗ ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿತ್ತು. ಈಗ ಈ ಹಾಡಿಗೆ 78 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ