Breaking News
Home / Uncategorized / ಷರತ್ತಿನೊಂದಿಗೆ ಬಿಎಂಟಿಸಿ ಸಿಬ್ಬಂದಿ ವೇತನ ಬಿಡುಗಡೆ

ಷರತ್ತಿನೊಂದಿಗೆ ಬಿಎಂಟಿಸಿ ಸಿಬ್ಬಂದಿ ವೇತನ ಬಿಡುಗಡೆ

Spread the love

ಬೆಂಗಳೂರು, ಫೆ.15- ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿಗಳ ಡಿಸೆಂಬರ್ ಮತ್ತು ಜನವರಿ ತಿಂಗಳ ವೇತನಕ್ಕಾಗಿ ಸಾರಿಗೆ ಇಲಾಖೆ 86.69 ಕೋಟಿ ರೂ.ವನ್ನು ಷರತ್ತಿನೊಂದಿಗೆ ಬಿಡುಗಡೆ ಮಾಡಿ ಆದೇಶಿಸಿದೆ. ಪ್ರಸಕ್ತ ಸಾಲಿನಲ್ಲಿ ಯಾವುದೇ ಹೊಸ ಬಸ್ ಖರೀದಿ ಪ್ರಕ್ರಿಯೆ ಮಾಡುವಂತಿಲ್ಲ. ವಾಹನಗಳ ನಿರ್ವಹಣೆ ಮತ್ತು ಬಿಡಿ ಭಾಗಗಳಿಗೆ ಸಂಬಂಧಿಸಿದಂತೆ ಅತಿ ಅವಶ್ಯಕ ವೆಚ್ಚವನ್ನು ಮಾತ್ರ ಮಾಡಲು ಆದೇಶದಲ್ಲಿ ಸೂಚಿಸಲಾಗಿದೆ.ಕೋವಿಡ್ ಹಿನ್ನೆಲೆಯಲ್ಲಿ ಬಿಎಂಟಿಸಿಯ ಅಧಿಕಾರಿ ಮತ್ತು ಸಿಬ್ಬಂದಿ ವೇತನಕ್ಕಾಗಿ 2020ರ ಏಪ್ರಿಲ್‍ನಿಂದ ನವೆಂಬರ್‍ವರೆಗೆ 519.86 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು. ಕೋವಿಡ್ ಸಂಕಷ್ಟದಿಂದಾಗಿ ಅಧಿಕಾರಿ ಮತ್ತು ಸಿಬ್ಬಂದಿ ವೇತನ, ಇಂಧನ ವೆಚ್ಚ ಹಾಗೂ ಶಾಸನಬದ್ಧ ಪಾವತಿಗಳನ್ನು ಭರಿಸಲಾಗದೆ ಸಂಕಷ್ಟ ಎದುರಿಸುತ್ತಿದ್ದು, ಡಿಸೆಂಬರ್ ಮತ್ತು ಜನವರಿ ತಿಂಗಳ ವೇತನಕ್ಕಾಗಿ 94.04 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಬಿಎಂಟಿಸಿ ಪ್ರಸ್ತಾವನೆ ಸಲ್ಲಿಸಿತ್ತು

ಡಿಸೆಂಬರ್ ಗೆ 42.77ಕೋಟಿ ರೂ. ಹಾಗೂ ಜನವರಿಗೆ 43.92 ಕೋಟಿ ರೂ. ಬಿಡುಗಡೆ ಮಾಡಿ ಆದೇಶಿಸಿರುವ ಸಾರಿಗೆ ಇಲಾಖೆ, ಅಧಿಕಾರಿ ಮತ್ತು ಸಿಬ್ಬಂದಿ ವೇತನದ ಶೇ.50ರಷ್ಟು ವೆಚ್ಚವನ್ನು ಈ ಹಣದಲ್ಲಿ ಭರಿಸಿ ಉಳಿದ ವೇತನವನ್ನು ಸಂಸ್ಥೆಯ ಸ್ವಂತ ಸಂಪನ್ಮೂಲದಿಂದ ಭರಿಸಲು ಸೂಚಿಸಿದೆ. ವೇತನಕ್ಕಾಗಿ ಒದಗಿಸಿರುವ ಅನುದಾನವನ್ನು ಹೊರತುಪಡಿಸಿ ಇನ್ಯಾವುದೇ ಹೆಚ್ಚುವರಿ ಅನುದಾನ ನೀಡುವುದಿಲ್ಲ. ಸಿಬ್ಬಂದಿಯ ಭತ್ಯೆಯನ್ನು ಪಾವಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.


Spread the love

About Laxminews 24x7

Check Also

ಮೇ 7ರಂದು ಮತದಾನ: ಮದ್ಯ ಮಾರಾಟ ನಿರ್ಬಂಧ ಮಾಹಿತಿ

Spread the loveಚಿಕ್ಕಮಗಳೂರು, ಮೇ 04: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಮತದಾನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ