ರಾಯಚೂರು: ನಗರದ ಆಟೋನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಲಾರಿಯನ್ನ ಕದ್ದು ಮಾರಾಟಕ್ಕೆ ಮುಂದಾಗಿದ್ದ ಕಳ್ಳನನ್ನ ಸದರ್ ಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಆಶ್ರಯ ಕಾಲೋನಿಯ ನಿವಾಸಿ ಗೋವಿಂದ ಬಂಧಿತ ಆರೋಪಿ. ಹಣದ ಅವಶ್ಯಕತೆ ಕಾರಣಕ್ಕೆ ತನ್ನ ಮಾಲೀಕನ ಲಾರಿಯನ್ನೇ ಕದ್ದು ಸಿಕ್ಕಿಬಿದ್ದಿದ್ದಾನೆ.
ಆಟೋ ನಗರದ ಸೈಯದ್ ಹುಸೇನ್ ಎಂಬವರಿಗೆ ಸೇರಿದ ಲಾರಿಯನ್ನ ಗೋವಿಂದ ಕದ್ದು ಮಾರಾಟಕ್ಕೆ ಮುಂದಾಗಿದ್ದ. ರಾಯಚೂರು ತಾಲೂಕಿನ ಗಂಜಳ್ಳಿ ಬಳಿ ಲಾರಿಯೊಂದಿಗೆ ಆರೋಪಿ ಸೆರೆಸಿಕ್ಕಿದ್ದಾನೆ.
ಎರಡು ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದ ಗೋವಿಂದ, ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಲಾರಿಯೊಂದಿಗೆ ಪರಾರಿಯಾಗಿದ್ದ. ಜೆಸಿಬಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಗೋವಿಂದನಿಗೆ ಸೈಯದ್ ಹುಸೇನ್ ಕೆಲಸ ನೀಡಿದ್ದ. ಆದರೆ ಗೋವಿಂದ ಮಾಲೀಕನ 8 ಲಕ್ಷ ರೂಪಾಯಿ ಮೌಲ್ಯದ ಲಾರಿ ಕಳ್ಳತನ ಮಾಡಿದ್ದಾನೆ. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸದರ್ ಬಜಾರ್ ಠಾಣೆ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
Laxmi News 24×7