Breaking News

ಮಗುವಿಗೆ ಜನ್ಮ ನೀಡಿದ ಬಳಿಕ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕಾಣಿಸಿಕೊಂಡ ನಟಿ ಅನುಷ್ಕಾ ಶರ್ಮಾ

Spread the love

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಮಗಳು ಜನಿಸಿದ ಸಂತಸದಲ್ಲಿದ್ದಾರೆ. ಮೊದಲ ಮಗುವನ್ನು ಸ್ವಾಗತ ಮಾಡಿದ ವಿರುಷ್ಕಾ ದಂಪತಿ ಮಗಳ ಫೋಟೊವನ್ನು ರಿವೀಲ್ ಮಾಡಿಲ್ಲ. ಕ್ಯಾಮರಾ ಕಣ್ಣಿನಿಂದ ದೂರ ಇರುವ ಅನುಷ್ಕಾ ಮತ್ತು ವಿರಾಟ್ ಇದೀಗ ಮಗಳು ಜನಿಸಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಜನವರಿ 11 ಮಧ್ಯಾಹ್ನ ಅನುಷ್ಕಾ ಶರ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಜನಿಸಿದ ಬಳಿಕ ವಿರಾಟ್ ಮಗಳು ಹುಟ್ಟಿದ್ದಾಳೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು. ಮಗಳು ಜನಿಸಿದ ಬಳಿಕ ವಿರಾಟ್ ದಂಪತಿ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಪತ್ರಕರ್ತರಿಗೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ವಿಶೇಷ ಮನವಿ

ಇಂದು (ಜನವರಿ 21) ವಿರುಷ್ಕಾ ದಂಪತಿ ಮನೆಯಿಂದ ಹೊರಹೋಗುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಯಾಮರಾಗೆ ಪೋಸ್ ನೀಡಿ ಕೈ ಬೀಸಿ, ತಮ್ಮ ಖಾಸಗಿತನವನ್ನು ಗೌರವಿಸಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ. ತಾಯಿಯಾಗಿರುವ ಅನುಷ್ಕಾ ಸ್ಕಿನಿ ಜೀನ್ಸ್ ಮತ್ತು ಡೆನಿಮ್ ಶರ್ಟ್ ಧರಿಸಿದ್ದರು.

ಅನುಷ್ಕಾ ದಂಪತಿ ತಮ್ಮ ಖಾಸಗಿತನವನ್ನು ಗೌರವಿಸಿ ಎಂದು ಮಾಧ್ಯಮದವರನ್ನು ಕೇಳಿಕೊಂಡಿದ್ದರು. ‘ಈ ಮೂರು ವರ್ಷಗಳಿಂದ ನಮ್ಮ ಬಗ್ಗೆ ತೋರಿಸಿದ ಪ್ರೀತಿಗೆ ಧನ್ಯವಾದಗಳು. ಪೋಷಕರಾಗಿ ನಾವು ನಿಮ್ಮಲ್ಲಿ ಒಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಹಾಗೂ ನಮ್ಮ ಮಗುವಿನ ಖಾಸಗಿತನದ ಹಕ್ಕನ್ನು ಗೌರವಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ಹಿಂದೆಯು ಅನುಷ್ಕಾ ಮಗುವನ್ನು ಮಾಧ್ಯಮದಿಂದ ದೂರ ಇರಿಸುವುದಾಗಿ ಹೇಳಿದ್ದರು. ಅದರಂತೆ ವಿರುಷ್ಕಾ ದಂಪತಿ ಮಗಳನ್ನು ಕ್ಯಾಮರಾ ಕಣ್ಣಿಗೆ ಸೆರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.


Spread the love

About Laxminews 24x7

Check Also

ಹಾವೇರಿ ಹುಕ್ಕೇರಿಮಠದ ಜಾತ್ರೆಗೆ ದಿನಗಣನೆ

Spread the loveಹಾವೇರಿ : ಜಿಲ್ಲೆಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ 25 ರಿಂದ ಜನವರಿ ಎರಡರವರೆಗೆ ಹಾವೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ