ಬೆಂಗಳೂರು: ಏರೋ ಇಂಡಿಯಾ ಕಾರ್ಯಕ್ರಮ ನಡೆಸಲು ಬೆಂಗಳೂರು ಅತ್ಯುತ್ತಮ ನಗರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನದಲ್ಲಿ ಏರೋ ಇಂ ಡಿಯಾ 2021 ಗೆ ಸಂಬಂಧಿಸಿದಂತೆ ಅಪೆಕ್ಸ್ ಸಮಿತಿ ಸಭೆ ಜರುಗಿತು.ಸಭೆಯಲ್ಲಿ ಸಿಎಂ ಯಡಿಯೂರಪ್ಪ,ರಕ್ಷಣಾ ವಸ್ತು ಪ್ರದರ್ಶನ ಸಂಸ್ಥೆಯ ನಿರ್ದೇಶಕ ಅಚಲ್ ಮಲ್ಹೋತ್ರಾ,ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್,ಪೊಲೀ ಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್,ವಾಯುಪಡೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಅವರು,ಬೆಂಗಳೂರಿನಲ್ಲಿ ಫೆ.3ರಿಂದ ಆರಂಭಗೊಳ್ಳಲಿರುವ ಏರೋ ಇಂಡಿಯಾ ಶೋ ಹಿ ನ್ನೆಲೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.ಎಲ್ಲಾ ಪೂರ್ವ ತಯಾರಿ ಬಗ್ಗೆ ಸಭೆಯಲ್ಲಿ ಪರಿಶೀಲನೆ ನಡೆಸಿದ್ದೇವೆ.ಏರ್ ಶೋ ಯಶಸ್ವಿಯಾಗಿ ನಡೆಸಲು ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದೆ ಎಂದರು.
ಏರ್ ಶೋ ಅದ್ಧೂರಿ ಹಾಗೂ ಯಶಸ್ವಿಯಾಗಿ ನಡೆಯುತ್ತೆ ಎಂಬ ವಿಶ್ವಾಸ ಇದೆ.ಏರ್ ಇಂಡಿಯಾ ಶೋ ಆಯೋ ಜಿಸುವ ಬಗ್ಗೆ ಬೆಂಗಳೂರಿಗೆ ಇರುವ ಅನುಭವ ದೇಶದ ಇತರ ಯಾವ ನಗರಗಳಿಗೂ ಇಲ್ಲ.ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದ ಕೊಡುಗೆ ಮಹತ್ತರವಾಗಿದೆ.ಕಳೆದ ಬಾರಿಯ ಅವಘಡ ಮರುಕಳಿಸಿದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.ಕೋವಿಡ್ ಮಧ್ಯೆ ಮಾರ್ಗಸೂಚಿಯನ್ವಯ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳ ಲಾಗಿದೆ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಐಟಿ ಪಾರ್ಕ್ ,ರಕ್ಷಣಾ ಇಲಾಖೆ ವಶದಲ್ಲಿರುವ 750 ಎಕರೆ ಬಿಟ್ಟುಕೊಡುವಂತೆ ರಾಜನಾಥ್ ಸಿಂಗ್‌ಗೆ ಮನವಿ 
ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪಿಸುವ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ವಶ ದಲ್ಲಿರುವ ರಾಜ್ಯದ 10,639 ಎಕರೆ ಭೂಮಿಯ ಪೈಕಿ 750 ಎಕರೆ ಭೂಮಿಯನ್ನು ರಾಜ್ಯ ಸರಕಾರಕ್ಕೆ ಬಿಟ್ಟುಕೊಡುವಂತೆ ಐಟಿ-ಬಿಟಿ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಸಂಜೆ ರಕ್ಷಣಾ ಸಚಿವರನ್ನು ಭೇಟಿಯಾಗಿ ಮನವಿ ಪತ್ರ ನೀಡಿದ ಡಿಸಿಎಂ,ರಾಜನಾಥ್ ಸಿಂಗ್ ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.
ಈ ಹಿಂದೆಯೇ ಹತ್ತು ಸಾವಿರ ಎಕರೆಯಷ್ಟು ಭೂಮಿಯನ್ನು ರಕ್ಷಣಾ ಇಲಾಖೆಗೆ ಹಸ್ತಾಂತರಿಸಲಾಗಿದ್ದು,ಪ್ರತೀ ಹತ್ತು ವ ರ್ಷಕ್ಕೊಮ್ಮೆ ಗುತ್ತಿಗೆ ನವೀಕರಣ ಮಾಡಲಾಗುತ್ತಿದೆ.ಇಷ್ಟು ಪ್ರಮಾಣದ ಭೂಮಿ ಯನ್ನು ರಕ್ಷಣಾ ಇಲಾಖೆ ಬಳ ಸುತ್ತಿಲ್ಲ.ಹೀಗಾಗಿ ಈ ಜಾಗದ 750ಎಕರೆ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪನೆ ಮಾಡುವ ಬಗ್ಗೆ ಪ್ರಸ್ತಾವನೆ ಬಂದಿದೆ.
ಈ ಪಾರ್ಕ್ ಬಂದರೆ ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಪ್ರದೇಶದಲ್ಲಿ 60ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ.ಜತೆಗೆ ಧಾರವಾಡದ ಐಐಟಿ ಮತ್ತು ಐಐಐಟಿ ಹಾಗೂ ಕೆಎಲ್‌ಇ ಶೈಕ್ಷಣಿಕ ಸಂಸ್ಥೆಗ ಳಿಂದ ಹೊರಬರುವ ಸ್ಥಳೀಯ ಪ್ರತಿಭೆಗಳಿಗೆ ಉದ್ಯೋ ಗಾವಕಾಶ ಕಲಿಸುವ ಉದ್ದೇಶವಿದೆ ಎಂಬ ವಿಷಯವನ್ನು ರಾಜನಾಥ್ ಅವರಿಗೆ ಮನವರಿಕೆ ಮಾಡಿಕೊಟ್ಟಿ ದ್ದೇನೆ.ಅವರು ಅತ್ಯಂತ ಸಕಾರಾತ್ಮಕ ಸ್ಪಂದಿಸಿದ್ದು,ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ಏರ್ ಶೋಗೆ 30 ಕೋಟಿ ರೂ.ಖರ್ಚು ಮಾಡುತ್ತಿದೆ : ಮುಖ್ಯಮಂತ್ರಿ ಯಡಿಯೂರಪ್ಪ 
ರಾಜ್ಯ ಸರ್ಕಾರ ಈ ಬಾರಿಯ ಏರ್ ಶೋಗೆ 30 ಕೋಟಿ ರೂ.ಹಣ ಖರ್ಚು ಮಾಡುತ್ತಿದೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಏರ್ ಶೋ ಸಂಬಂಧ ಪೂರ್ವ ಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು,ಮುಂಬರುವ ಏ ರೋ ಇಂಡಿಯಾ ಶೋಗಳಿಗೆ ರಾಜ್ಯ ಸರ್ಕಾರ ಸಹಕಾರ ಕೊಡುತ್ತೆ ಎಂದು ಅಭಯ ಕೊಡುತ್ತೇನೆ.ಕೇಂದ್ರ ರಕ್ಷಣಾ ಸಚಿವರಿಗೆ ನಾನು ಈ ಅಭಯ ಕೊಡುತ್ತೇನೆ.13ನೇ ಆವೃತ್ತಿಯ ಏರೋ ಇಂಡಿಯಾ ನಡೆಸಲು ಅವಕಾಶವನ್ನು ಬೆಂಗಳೂರಿಗೆ ಕಲ್ಪಿಸಿರೋದಕ್ಕೆ ಕೇಂದ್ರಕ್ಕೆ ಧನ್ಯವಾದ ತಿಳಿಸುತ್ತೇನೆ.1996ರಿಂದ ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿದೆ.ಈ ಏರ್ ಇಂಡಿಯಾ ಶೋಗೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ಕೊಡುತ್ತದೆ ಎಂದರು.
 Laxmi News 24×7
Laxmi News 24×7
				 
		 
						
					