Breaking News

ಬಳೋಬಾಳ : 27 ಲಕ್ಷ ರೂ. ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಾಗಪ್ಪ ಶೇಖರಗೋಳ

Spread the love

ಬಳೋಬಾಳ : 27 ಲಕ್ಷ ರೂ. ವೆಚ್ಚದ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಾಗಪ್ಪ ಶೇಖರಗೋಳ
ಗೋಕಾಕ : ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಪಶು ಚಿಕಿತ್ಸಾಲಯದ ನೂತನ ಕಟ್ಟಡಕ್ಕೆ ಸೋಮವಾರದಂದು ಅಡಿಗಲ್ಲು ಸಮಾರಂಭ ನೆರವೇರಿತು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಬಳೋಬಾಳ ಪಶು ಚಿಕಿತ್ಸಾಲಯ ಹೊಸ ಕಟ್ಟಡಕ್ಕೆ 27 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಉತ್ತಮ ಗುಣಮಟ್ಟದ ಕಾಮಗಾರಿ ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಇನ್ನೋರ್ವ ಆಪ್ತ ಸಹಾಯಕ ದಾಸಪ್ಪ ನಾಯಿಕ, ಯುವ ಮುಖಂಡ ಬಸವರಾಜ ಕಡಾಡಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ವಿನೋದ ಪೂಜೇರಿ, ಪ್ರಧಾನಿ ಕಳಸನ್ನವರ, ಭೀಮಶೆಪ್ಪ ಕಲ್ಲೋಳಿ, ಸುನೀಲ ಈರೇಶನವರ, ಸಿದ್ದಯ್ಯ ಹೋಳಗಿ, ರಾಮಪ್ಪ ದುರ್ಗಿ, ಶ್ರೀಶೈಲ ಬೆಳವಿ, ಸುರೇಶ ಹೊಸಮನಿ, ಬಲವಂತ ಬೆಳವಿ, ವಿಠ್ಠಲ ಸಂಕನವರ, ಕಾಡಪ್ಪ ಮ್ಯಾಗಡಿ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ||ಮೋಹನ ಕಮತ, ಬಳೋಬಾಳ ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಪಾಂಡುರಂಗ ಕೊರತಿ, ಪಿಡಿಓ ಸಂಜು ಜೋತಾವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳೋಬಾಳ ಕಾಲೇಜು ರಸ್ತೆಯ ಗ್ರಾಮ ಪಂಚಾಯತ ಕಛೇರಿ ಹತ್ತಿರ ನೂತನ ಕಟ್ಟಡ ತಲೆಯೆತ್ತಲಿದ್ದು, ಈ ಕಾಮಗಾರಿಗೆ ಶಾಸಕರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ ಮತ್ತು ದಾಸಪ್ಪ ನಾಯಿಕ ಅವರು ಗುದ್ದಲಿ ಪೂಜೆ ನೆರವೇರಿಸಿದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ